ಸ್ಥಳೀಯ ಸುದ್ದಿಗಳು

ತಮಿಳ್ ತಾಯ್ ಸಂಘದ ಸಮುದಾಯ ಭವನದಲ್ಲಿ ಮೂವರಿಂದ ಅನ್ಯಾಯವಾಗಿದೆ-ಎಸ್ ನವೀನ್

ಸುದ್ದಿಲೈವ್/ಶಿವಮೊಗ್ಗ

ಸೋಮಿನಕೊಪ್ಪದಲ್ಲಿರುವ ತಮಿಳು ತಾಯ್ ಸಂಘದ ಸಮುದಾಯ ಭವನದಲ್ಲಿ ಮೂವರ ಸರ್ವಾಧಿಕಾರಿ ಧೋರಣೆಯಿಮದಾಗಿ ನನ್ನ ಸಹೋದರನಿಗಾಗಿ ಬುಕ್ ಮಾಡಿರುವ ಸಮುದಾಯ ಭವನದಲ್ಲಿ ನಮಗೆ ಬೇಕಾದ ದಿನಾಂಕದಂದು ಬಾಡಿಗೆ ಸಿಗಲಿಲ್ಲವೆಂದು ಸಮುದಾಯ ಭವನದ ಸಂಸ್ಥಾಪಕ ಸದಸ್ಯರಾದ ಎಸ್.ನವೀನ್ ಇಂದು ಮೀಡಿಯಾ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ತಮಿಳು ಜನಾಂಗದ ಮತ್ತೊಂದು ಸಂಘಟನೆಯಾದ  ಅನುಬಡಿ ಸಂಘದಲ್ಲಿ ವೆಂಕಟೇಶ್ ಅವರನ್ನ ಸೇರಿಸಿಕೊಂಡಿಲ್ಲವೆಂಬ ಕಾರಣಕ್ಕೆ ತಮಿಳ್ ತಾಯ್ ಸಂಘ ಸಮುದಾಯ ಭವನವನ್ನ ಸಹೋದರನ ಮದುವೆಗೆ ಬಾಡಿಗೆ ಕೊಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಫೆ.18 ಮತ್ತು 19 2024 ಕ್ಕೆ ಸಹೋದರ ಕೃಷ್ಣನ ಮದುವೆಗಾಗಿ ರಿಜಿಸ್ಟರ್ ಬುಕ್ ನಲ್ಲಿ ಹೆಸರು ಬರೆಸಲಾಗಿತ್ತು. ಸಂಘದ ಹಂಗಾಮಿ ಅಧ್ಯಕ್ಷ ಸಂಪತ್  ಆ ದಿನದಲ್ಲಿ ಬಾಡಿಗೆ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಸಮುದಾಯದ ಕಾರ್ಯದರ್ಶಿ, ಗೌರವಾಧ್ಯಕ್ಷರು ಮತ್ತು ಖಜಾಂಚಿಗಳು ಭವನ ನೀಡದೆ ಬೇರೆಯವರಿಗೆ ನೀಡಿದ್ದಾರೆ. ಹಣಕಟ್ಟಲು ಮುಂದಾದರೂ ಸಹ ಗೌರವಾಧ್ಯಕ್ಷರು ಹಣಕಟ್ಟದಂತೆ ತಡೆದು ಇತರರಿಂದ ಮುಂಗಡ ಹಣವನ್ನ‌ ಪಡೆದುಕೊಂಡಿರುವುದಾಗಿ ಆರೋಪಿಸಿದರು.

ಸಂಘದ ಆಡಳಿತ ಪಾರದರ್ಶಕತೆಯಲ್ಲಿ ಇಲ್ಲ.  ಸರ್ವಸದಸ್ಯರ ಸಭೆಯು ಸಹ ನಿಗದಿತ ಸಮಯಕ್ಕೆ ನಡೆಯುತ್ತಿಲ್ಲ.ಅಲ್ಲದೆ ಹಂಗಾಮಿ ಅಧ್ಯಕ್ಷರು ಇದ್ದಾರೆ. 13 ವರ್ಷದಿಂದ ಆಡಿಟ್ ಆಗಿಲ್ಲ. ಹಂಗಾಮಿ ಸಮಿತಿಯ ಅವಧಿಯೂ ಸಹ ಬೈಲಾ ಪ್ರಕಾರ ಮುಗಿದಿದೆ. ಹಾಗಾಗಿ ಹಂಗಾಮಿ ಸಮಿತಿಯನ್ನ ತೆಗೆದುಹಾಕಿ ಬೇಗ ಖಾಯಂ ಸಮಿತಿಯನ್ನ ಅಸ್ಥಿತ್ವಕ್ಕೆ ತರಬೇಕು. ವಾರ್ಷಿಕ ಮಹಾಸಭೆಯೂ ಸಹ ಇತ್ತೀಚೆಗೆ ಬಡೆದಿಲ್ಲ ಎಂದು ಅವರು ಆಗ್ರಹಿಸಿದ್ದಾರೆ.

ಸಹೋದರನ ಮದುವೆಗಾಗಿ ಸಮುದಾಯ ಭವನ ಬೇರೆಯೊಂದನ್ನ ಬುಕ್ ಮಾಡಲಾಗಿದೆ. ಆದರೆ ಈ ರೀತಿಯ ಅನ್ಯಾಯ ಇತರರಿಗೆ ಅಗಬಾರದು. ನಾನು ಸಂಸ್ಥಾಪಕ ಸದಸ್ಯನಾಗಿದ್ದು, ನಾನು ಸಮುದಾಯ ಭವನದಲ್ಲಿ ಫ್ಯಾಬ್ರಿಕ್ ವರ್ಕ್ ಮಾಡಿರುವ 65 ಸಾವಿರರೂ. ಬಾಕಿ ಇದೆ.  ಇದನ್ನೇ ಮುಂಗಡ ಹಣವನ್ನಾಗಿ ಕಟ್ಟಿಕೊಳ್ಳಿ ಎಂದು ತಿಳಿಸಿದರೂ ನನಗೆ ಅನ್ಯಾಯವಾಗಿದೆ ಎಂದು ದೂರಿದರು.

ಸಮಾಜದ ಹಿತ ಕಾಯಬೇಕಿದ್ದ ಸಂಘ ಹಿರಿಯರನ್ನ, ಸದಸ್ಯರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲವರಿಂದ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಸರ್ವಾಧಿಕಾರಿಗಳ ಧೋರಣೆ ಖಮಡನೀಯ ಎಂದು ತಿಳಿಸಿರುವ ನವೀನ್ ಇತ್ತೀಚೆಗೆ ತಮಿಳು ತಾಯ್ ಸಂಘದ ಮಾಜಿ ಅಧ್ಯಕ್ಷರೊಬ್ಬರು ಇಲ್ಲೆನ ಮೂವರು ನಿರ್ದೇಶಕರ ತಂತ್ರಗಳಿಗೆ ಬಲಿಯಾಗಿ ಆಡಳಿತ ಮಂಡಳಿಯಿಂದ ಹೊರಗೆ ಬಂದ ಉದಾಹರಣೆಗಳಿವೆ. ಅವರ ಹೆಸರಿನಲ್ಲಿ ವಂಚನೆಯಾಗಿದೆ ಎಂದು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಡಿ ಶಿಲ್ಪಿ ಮಂಜುನಾಥ್, ಕೆ.ಶೇಖರ್, ಕರಾಟೆ ವಿನೋದ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/5476

Related Articles

Leave a Reply

Your email address will not be published. Required fields are marked *

Back to top button