ತಪಾಸಣೆ ವೇಳೆ ಪತ್ತೆಯಾಯಿತು ಕಳ್ಳತನದ ಬೈಕ್

ಸುದ್ದಿಲೈವ್/ಭದ್ರಾವತಿ

ಭದ್ರಾವತಿ ಜಂಕ್ಷನ್ ನಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಶೈಲ ಕೆಂಚಣ್ಣನವರ ತಂಡ ವಾಹನ ತಪಾಸಣೆ ಮಾಡುವಾಗ ಕಳ್ಳತನ ಮಾಡಿಕೊಂಡು ಬಂದು ಭದ್ರಾವತಿಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ಪತ್ತೆಯಾಗಿದ್ದಾನೆ.
ಜಂಕ್ಷನ್ ನಲ್ಲಿ ಉಂಬ್ಳೆ ಬೈಲಿನಿಂದ ಭದ್ರಾವತಿಕಡೆಗೆ ಕೆಎ 18 ಎಲ್ 8345 ಕ್ರಮಸಂಖ್ಯೆಯ ಸ್ಟಾರ್ ಸಿಟಿ ಬೈಕ್ ನಲ್ಪಿ ಬಂದ ಉಮೇಶ್ ಯಾನೆ ಮುದ್ದೆ ಪೊಲೀಸರನ್ನ ನೋಡಿ ಹಿಂದುರುಗಲು ಯತ್ನಿಸಿದ್ದಾನೆ. ಈ ವೇಳೆ ಅನುಮಾನ ಬಂದು ಪೊಲೀಸರು ಹಿಡಿದುಕೊಂಡಿದ್ದಾರೆ.
ಆತನ ಹೆಸರು ವಿಳಾಸ ಕೇಳಲಾಗಿ ಒಮ್ಮೆ ತರೀಕೆರೆ ಎಂದು ಮತ್ತೊಮ್ಮೆ ಚನ್ನಗಿರಿ ಎಂದು ಹೇಳಿದ್ದು ನಂತರ ಸಿಬ್ಬಂದಿಗಳನ್ನ ಕರೆಯಿಸಿ ಆತನನ್ನ ವಿಚಾರಿಸಲಾಗಿದೆ. ಹೆಸರು ಕೇಳಿದಾಗ ಉಮೇಶ @ ಮುದ್ದ ದಾನವಾಡಿ ನಿವಾಸಿ ಎಂದು ತಿಳಿಸಿದ್ದಾನೆ. ಅವನ ವಶದಲ್ಲಿದ್ದ ಬೈಕ್ ದಾಖಲಾತಿ ಬಗ್ಗೆ ವಿಚಾರಿಸಿದ ಪೊಲೀಸರಿಗೆ ಆತ ಒಂದು ಸಾರಿ ಮನೆಯಲ್ಲಿದೆ ಎಂದು ಇನ್ನೊಂದು ಸಾರಿ ತನ್ನ ಬಳಿ ದಾಖಲೆಗಳು ಇಲವೆಂದು ತಿಳಿಸಿದ್ದಾನೆ.
ಪ್ರನ: ವಿಚಾರ ಮಾಡಿದಾಗ ನಾನು ಕೊಪ್ಪದ ಒಂದು ಊರಿನಲ್ಲಿ ಕಳ್ಳತನ ಮಾಡಿಕೊಂಡು ತಂದಿದ್ದು ಈ ದಿವಸ ಭದ್ರಾವತಿಯಲ್ಲಿ ಯಾರಿಗಾದರೂ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾನೆ. ಆತನನ್ನ ಮತ್ತು ವಾಹನವನ್ನ ವಶಕ್ಕೆ ಪಡೆದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ-https://suddilive.in/archives/2283
