ಕ್ರೈಂ ನ್ಯೂಸ್

ನಾಪತ್ತೆಯಾಗಿದ್ದ ವೀಕ್ಷಣಾಲಯದ ಮಕ್ಕಳು ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಸರ್ಕಾರಿ ವೀಕ್ಷಣಾಲಯದಿಂದ ಮೂವರು ಅಪ್ರಾಪ್ತ ಬಾಲಕರು ಪರಾರಿಯಾಗಿದ್ದು, ಮೂವರನ್ನ ವಿನೋಬ ನಗರ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಗಿದ್ದಾರೆ.

ಆಲ್ಕೊಳದ ಸರ್ಕಾರಿ ವೀಕ್ಷಣಾಲಯದಲ್ಲಿ ಬಾಲಾಪರಾಧಿಗಳನ್ನ ತಂದು ರಕ್ಷಿಸಲಾಗುತ್ತದೆ. 18 ವರ್ಷದ ಒಳಗಿನ ಮಕ್ಕಳನ್ನ ತಂದು ಈ ವೀಕ್ಷಣಾಲಯದಲ್ಲಿ ಕಾಪಾಡುವುದು ಉದ್ದೇಶವಾಗಿದೆ. ಆದರೆ ಈ ವೀಕ್ಷಣಾಲಯದಿಂದಲೇ ಮೂವರು ಮಕ್ಕಳು ನಾಪತ್ತೆಯಾಗಿದ್ದರು.

ವೀಕ್ಷಣಾಲಯದಲ್ಲಿದ್ದ ಮಕ್ಕಳಲ್ಲಿ ಮೂವರು ಮಕ್ಕಳು ಶೌಚಾಲಯದ ಸರಳನ್ನ ಮುರಿದು ಪರಾರಿಯಾಗಿದ್ದರು. ಸರ್ಕಾರಿ ವೀಕ್ಷಣಾಲಯದಿಂದ ತಪ್ಪಿಸಿಕೊಂಡಿದ್ದ ಮೂವರ ಬಗ್ಗೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದಾಖಲಾದ ಬೆನ್ನಲ್ಲೇ ಪೊಲೀಸರು ಇವರನ್ನ ಪತ್ತೆಹಚ್ಚಿ ಮತ್ತೆ ವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ. ಮೂವರು ಬೇರೆ ಬೇರೆ ಅಪರಾಧದಲ್ಲಿ ಒಳಗಾಗಿದ್ದವರು.  ವೀಕ್ಷಣಾಲಯದಿಂದ ತಪ್ಪಿಸಿಕೊಂಡು ಮನೆಗೆ ಹೋಗುವ ದೃಷ್ಟಿಯಿಂದ ಈ ಕೃತ್ಯ ಎಸೆಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ-https://suddilive.in/archives/9824

Related Articles

Leave a Reply

Your email address will not be published. Required fields are marked *

Back to top button