ಯುವಕರ ಪುಂಡಾಟಿಕೆಗೆ ಬಸ್ ಚಾಲಕ ಮಾಡಿದ್ದೇನು?

ಸುದ್ದಿಲೈವ್/ ಶಿವಮೊಗ್ಗ

ಸಾರಿಗೆ (Transport)ಬಸ್‌ನಲ್ಲಿ ಟಿಕೇಟ್ ಪಡೆಯದೆ ಪ್ರಯಾಣಿಸಿ ಕಂಡಕ್ಟರ್ ಮೇಲೆ ಹಲ್ಲೆ ಮುಂದಾಗಿ ಬಸ್‌ನಲ್ಲಿ ಪುಂಡಾಟ ನಡೆಸಿ ಸಿನ್ ಕ್ರಿಯೆಟ್ ಮಾಡಿದ ಯುವಕರು ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ಸಂದಾನದಲ್ಲಿ ಕೊನೆಯಾಗಿದೆ.
ಎಂದಿನಂತೆ ಸೋಮವಾರ ಬೆಳಗ್ಗೆ ಚಿತ್ರದುರ್ಗದಿಂದ ಶಿವಮೊಗ್ಗದ ಕಡೆ ಹೊಳೆಹೊನ್ನೂರು ಮಾರ್ಗವಾಗಿ ಸಾರಿಗೆ ಬಸ್ ಸಂಚಾರ ಆರಂಬಿಸಿದೆ. ಬಸ್‌ನಲ್ಲಿ ಚನ್ನಗಿರಿ ತಾಲೂಕಿನ ಮಾವಿನಕಟ್ಟೆಯಲ್ಲಿ ಯುವಕನೊಬ್ಬ ಹತ್ತಿದ್ದಾನೆ. ನಿರ್ವಾಹಕರು ಬಸ್ ಟಿಕೇಟ್ ತೆಗೆದುಕೊಳ್ಳುವಂತೆ ತಿಳಿಸಿದರು ಯುವಕ ಟಿಕೇಟ್ ತೆಗೆದುಕೊಳದೆ ಸಣ್ಣದಾಗಿ ಜಗಳ ತೆಗೆದು ನಿರ್ವಹಕನೊಂದಿಗೆ ದಾಂದಲೆ ನಡೆಸಿ ಹಲ್ಲೆ ಮುಂದಾಗಿದ್ದಾನೆ.
ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ಯುವಕನ ವಿಡಿಯೋ ಚಿತ್ರಿಕರಿಸಿದ ಸಹ ಪ್ರಯಾಣಿಕನ ಮೇಲೂ ಹಲ್ಲೆ ಮಾಡಿದ್ದಾನೆ. ಯುವಕ ಪೋನ್ ಮಾಡಿ ಒಂದಿಬ್ಬರು ಗೆಳೆಯರನ್ನು ಕರೆಸಿಕೊಂಡು ಅರಹತೊಳಲು ಕೈಮರ ನಿಲ್ದಾಣದ ಬಳಿ ಬಸ್ ಹತ್ತಿಸಿಕೊಂಡಿದ್ದಾನೆ.
ಯುವಕನಿಗೆ ಸಾಹಯಕ್ಕೆ ಬಂದ ಪುಂಡರು ಕಂಡಕ್ಟರ್ ಬಳಿ ಇದ್ದ ಮೊಬೈಲ್ ಹಾಗೂ ಹಣವನ್ನು ಕಿತ್ತುಕೊಂಡು ಹಲ್ಲೆ ಮಾಡಲು ಮುಂದಾಗಿದ್ದಾರೆ. ಯುವಕರು ಬಸ್‌ಅನ್ನು ಎಲ್ಲಿಯೂ ನಿಲ್ಲಿಸದಂತೆ ಹೋಗುವಂತೆ ದಾಂದಲೆ ನಡೆಸಿದ್ದಾರೆ. ಬಸ್‌ನಲ್ಲಿದ ಸಹ ಪ್ರಯಾಣಿಕರು ಬಸ್ ನಿಲ್ಲಿಸಿ ನಾವು ಇಳಿಯುತ್ತವೆ ಎಂದು ಕೂಗಾಡಿದ್ದಾರೆ.
ಬಸ್‌ನ ಚಾಲಕ ಬಸ್‌ನ್ನು ನೇರವಾಗಿ ಪೊಲೀಸ್ ಠಾಣೆಗೆ ಚಲಾಯಿಸಿಕೊಂಡು ಬಂದು ನಿಲ್ಲಿಸಿ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪುಂಡಾಟ ನಡೆಸಿದ ಯುವಕರ ಪಾಲಕರು ದಾವಣಗೆರೆ ಮೂಲದ ನಿವೃತ್ತ ಪಿಎಸ್‌ಐ ರೊಂದಿಗೆ ಠಾಣೆಗೆ ಬೇಟಿ ನೀಡಿ. ಮದ್ಯಾಹ್ನದ ವೇಳೆಗೆ ಸಾರಿಗೆ ಸಿಬ್ಬಂದಿಯೊಂದಿಗೆ ರಾಜಿ ಪಂಚಾಯಿತಿ ನಡೆಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. ರಾಜಿ ಪಂಚಾಯಿತಿ ವೇಳೆ ಯುವಕರು ಕಸಿದುಕೊಂಡಿದರು ಎನ್ನಲಾದ ಒಂದು ಲಕ್ಷ ರೂಪಾಯಿ ಹಣವನ್ನು ಹಿಂದಿರುಗಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ-https://suddilive.in/archives/487
