ಕ್ರೈಂ ನ್ಯೂಸ್

ಅಬಕಾರಿ ಇಲಾಖೆಯ ಖಡಕ್ ದಾಳಿ-ಗಾಂಜಾ ವಶ

ಸುದ್ದಿಲೈವ್/ಶಿವಮೊಗ್ಗ

ಅಕ್ರಮ ಗಾಂಜಾ ಸಾಗಾಟ ಮತ್ತು ಸೇವನೆ ಮಾಡಿದ ಆರೋಪದ‌ ಮೇರೆಗೆ ಅಬಕಾರಿ ಇಲಾಖೆಯವರು ನಾಲ್ವರನ್ನ‌ ಬಂಧಿಸಿದ್ದಾರೆ. ಒಟ್ಟು 1,30,100 ರೂ.ಗಳ ಗೌಲ್ಯದ 330 ಗ್ರಾಂ ಒಣ ಗಾಂಜಾ ಮತ್ತು ಸಾಗಾಟಕ್ಮೆ ಬಳಸಿದ ದ್ವಿಚಕ್ರವಾಹನವನ್ನ  ವಶಪಡಿಸಿಕೊಂಡಿದ್ದಾರೆ.

ಟಿ ನಾಗರಾಜಪ್ಪ ಅಬಕಾರಿ ಜಂಟಿ ಆಯುಕ್ತರು , ಮಂಗಳೂರು ವಿಭಾಗ ಮತ್ತು ಶ್ರೀಮತಿ ಸುಮಿತ ಕೆ ಕೆ ಮಾನ್ಯ ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಇವರುಗಳ ನಿರ್ದೇಶನದಲ್ಲಿ ಶ್ರೀ ನೌಶಾದ್ ಅಹಮದ್ ಖಾನ್, ಉಪ ಅಧಿಕ್ಷಕರು ಉಪ ವಿಭಾಗ ಶಿವಮೊಗ್ಗ ಇವರ ಮಾರ್ಗದರ್ಶನ ದಲ್ಲಿ ಗಸ್ತು ಮಾಡುತ್ತಿದ್ದ ಅಬಕಾರಿ ಅಧಿಕಾರಿಗಳುಗೆ ಗಾಂಜಾ ಸಾಗಾಟದ ಮಾಹಿತಿ ಲಭ್ಯವಾಗಿದೆ.

ತಾಲ್ಲೂಕಿನ ಅನುಪಿನ ಕಟ್ಟೆ ಗ್ರಾಮದ ಪುರುದಾಳ್ ಕಡೆಗೆ ಹೋಗುವ ಬೈ ಪಾಸ್ ರಸ್ತೆಯಲ್ಲಿ ಅರೋಪಿ ಸಂ 1. ರಂಜಿತ್ 2. ಕಾರ್ತಿಕ್ & 3. ಚೇತನ್ ಎಂಬ ಮೂವರು ತಮ್ಮ ಎರಡು ದ್ವಿಚಕ್ರ ವಾಹನ( ಪ್ಯಾಶನ್ ಪ್ರೊ) ಗಳಲ್ಲಿ 330 ಗ್ರಾಂ ಅಕ್ರಮವಾಗಿ ಒಣ ಗಾಂಜಾ ಹೊಂದಿ ಸಾಗಾಟ ಮಾಡುತ್ತಿರುವಾಗ ಒಣ ಗಾಂಜಾ ಹಾಗೂ ದ್ವಿಚಕ್ರ ವಾಹನಗಳನ್ನು ಜಪ್ತು ಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ದ ಎನ್ ಡಿ ಪಿ ಎಸ್ ಕಾಯ್ದೆ 1985 ರ ಕಲಂ 27(ಬಿ) & 8(ಸಿ), ರಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ ಹಾಗೂ ಸದರಿ ಪ್ರಕರಣದಲ್ಲಿನ ಮಾಹಿತಿ ಮೇರೆಗೆ ಅನಿಲ್ ಎಂಬಾತನ ವಿರುದ್ಧ ಗಾಂಜಾ ಸೇವನೆ ಮಾಡಿರುವುದು ದೃಢವಾದ ಕಾರಣ ಅರೋಪಿತನ ವಿರುದ್ಧ ಇದೇ ಕಾಯ್ದೆ ಕಲಂ 27(ಬಿ) ರಂತೆ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದೆ

ಪ್ರಕರಣದಲ್ಲಿ ಜಪ್ತುಪಡಿಸಿದ ಒಟ್ಟು ಮೌಲ್ಯ; 1,30,100/- ಪ್ರಕರಣ ದಾಖಲಿಸಿದವರು: ಶ್ರೀ ಭೂಪತಿ ಎಂ, ಅಬಕಾರಿ ನಿರೀಕ್ಷಕರು ಹಾಗೂ ಶ್ರೀಮತಿ ವಿನ್ನಿ ಲೋಬೋ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/4818

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373