ರಾಜಕೀಯ ಸುದ್ದಿಗಳು

ಮೂರು ಘಟನಾವಳಿಗಳೊಂದಿಗೆ 2024 ಶುಭಾರಂಭಗೊಂಡಿದೆ-ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಸುದ್ದಿಲೈವ್/ಶಿವಮೊಗ್ಗ

ದೇಶದಲ್ಲಿ ಒಳ್ಳೆಯ ನಿರ್ಮಾಣದ ಶುಭಸೂಚನೆಯೊಂದಿಗೆ 2024 ನೇ ಇಸವಿ ಶುಭಾರಂಭಗೊಂಡಿದೆ ಎಂದು ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

2024 ನೇ ಇಸವಿ ಶುಭಾರಂಭದೊಂದಿಗೆ ಆರಂಭಗೊಂಡಿದೆ. ಮೂರು ಘಟನೆಯೊಂದಿಗೆ ಶುಭಾರಂಭಗೊಂಡಿದೆ. ರಾಷ್ಟ್ರ ದೇಶ, ಸ್ಥಳೀಯವಾಗಿ ಉತ್ತಮ‌ಬೆಳವಣಿಗೆ ಈ ಇಸವಿಯಲ್ಲಿ ನಡೆದಿದೆ ಎಂದು ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು, ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ನಿನ್ನೆ ನಡೆದಿದೆ.

ಭಾರತ ಸಂಸ್ಕೃತಿಯಿಂದ, ಭಾರತದ ಹೆಸರು ಉಜ್ವಲಗೊಂಡಿದೆ.ಅದು ಸಾಂಸ್ಕೃತಿಯಿಂದ ನಿರ್ಮಾಣವಾಗಿದೆ. ಹಾಗಾಗಿ ಗಾಂಧೀಜಿ ರಾಮರಾಜ್ಯ ಆರಂಭವಾಗಬೇಕು ಎಂದು ಕನಸು ಕಂಡಿದ್ದರು. ರಾಮ ಮಂದಿರದೊಂದಿಗೆ ರಾಮನ ಆದರ್ಶ ಎಲ್ಲರ ಹೃದಯದಲ್ಲಿ ನೆಲಸಲಿವೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.18 ರಂದು ಕರ್ನಾಟಕ ಸರ್ಕಾರ ರಾಜ್ಯದ ಸಾಂಸ್ಕೃತಿಕ ರಾಯಭಾರಿ ಎಂದು ಬಸವಣ್ಣನನ್ನ ಘೋಷಿಸಿದೆ. ಬಸವಣ್ಣರ ಸಂದೇಶ ಎಲ್ಲರೂ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು. ಜೈಲು ಆವರಣ ಸಾಂಸ್ಕೃತಿಕ ಕ್ಷೇತ್ರಕ್ಕೆ ಮೀಸಲಾಗಬೇಕೆಂದು ಅಪೇಕ್ಷೆಯಾಗಬೇಕಿತ್ತು. ಯಡಿಯೂರಪ್ಪನವರು ಹಳೇ ಜೈಲು ಆವರಣವನ್ನ ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟರು. ಅದಕ್ಕೆ ರಾಜ್ಯ ಸರ್ಕಾರ ಅಲ್ಲಮನ ಹೆಸರನ್ನ ನಾಮಕರಣ ಮಾಡಿದ್ದು ಸಂತೋಷ ತಂದಿದೆ ಎಂದರು.‌

ಈ ಮೂರು ಕಾರ್ಯಗಳೊಂದಿಗೆ 2024 ಶುಭಾರಂಭಗೊಂಡಿದೆ. ಅದರ ಜೊತೆಗೆ ಜ.25 ಮತ್ತು 26 ರಂದು ಬೆಕ್ಕಿನ ಕಲ್ಮಠದಲ್ಲಿ ಲಿಂಗೈಕ್ಯ ಶ್ರೀ ಗುರುಬಸವ ಮಹಾಸ್ವಾಮಿಗಳ 112 ನೇ ಪುಣ್ಯ ಸ್ಮರಣೋತ್ಸವ ಶರಣ ಸಾಹಿತ್ಯ ಸಮ್ಮೇಳನ ಮತ್ತು ಭಾವೈಕ್ಯ ಸಮ್ಮೇಳನ ಕಾರ್ಯಕ್ರಮ ಜರುಗಲಿದೆ ಎಂದರು.

ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ‌ಉದ್ಘಾಟಿಸಲಿದ್ದಾರೆ. ರೇಣುಕಾಂದ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಸ್ಥಳೀಯ ಶಾಸಕ ಚೆನ್ನಬಸಪ್ಪ ಮಠದ ದಿನದರ್ಶಿಕೆ ಬಿಡುಗಡೆ ಮಾಡಲಿದ್ದಾರೆ. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ಚಿಕ್ಕಮಗಳೂರು ಶಾಸಕ ಹೆಚ್ ಡಿ ತಮ್ಮಯ್ಯ, ಎಂಎಲ್ ಸಿಗಳಾದ ಭೋಜೇಗೌಡ, ಡಿ.ಎಸ್ ಅರುಣ್ ಮಾಜಿ ಶಾಸಕ ಆಯನೂರು ಮಂಜುನಾಥ್ ಮೊದಲಾದವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಎರಡನೇದಿನ ಅಖಿಲ ಭಾರತ ವೀರಶೈವ ಮಹಾಸಭದ ಅಧ್ಯಕ್ಷ ಶಾಮನೂರು‌ ಶಿವಶಂಕರಪ್ಪರಿಗೆ ಗುರುಬಸಪ್ಪ ಪ್ರಶಸ್ತಿ ನೀಡಲಾಗುವುದು. ಈ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ, ಹೆಚ್ ಎಲ್ ಷಡಾಕ್ಷರಿಯವರಿಗೆ, ಟಿವಿ ಧಾರವಾಹಿ ನಿರ್ದೇಶಕ‌ ಪಿ.ಎನ್ ರುದ್ರಪ್ಪರಿಗೆ ಮತ್ತು ವಿಶ್ವ ಯುವ ವಿಜ್ಞಾನಿ ಪ್ರಶಸ್ತಿ ವಿಜೇತ ಡಾ.ಬಿ.ಜೆ.ಗಿರೀಶ್ ಗೆ ಸನ್ಮಾನಿಸಲಾಗುವುದು ಎಂದರು.

ಇದನ್ನೂ ಓದಿ-https://suddilive.in/archives/7491

Related Articles

Leave a Reply

Your email address will not be published. Required fields are marked *

Back to top button