ಸರ್ಕಾರದ ಗ್ಯಾರೆಂಟಿಗಳಿಗೆ ಮತ್ತೆ ಸರದಿ ಸಾಲು

ಸುದ್ದಿಲೈವ್/ಶಿವಮೊಗ್ಗ

ಸರ್ಕಾರದ ಗ್ಯಾರೆಂಟಿಗಳು ಸರಿಯಾಗಿ ಜನರ ಕೈಗೆ ತಲುಪಿತ್ತಿಲ್ಲ ಎಂಬುದಕ್ಕೆ ಈ ಸರದಿ ಸಾಲು ಪ್ರಮುಖ ಉದಾಹರಣೆ. ಕೆಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣದ ಕಟ್ಟಡದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಕಚೇರಿಯಲ್ಲಿ ಮಹಿಳೆಯರು ವೃದ್ಧರು ಸರದಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ.
ಗ್ಯಾರಂಟಿಗಳನ್ನ ಜಾರಿ ಮಾಡುವ ಸರ್ಕಾರ ಈ ಸರದಿ ಸಾಲಿನಲ್ಲಿ ನಿಂತ ಜನರ ಸಮಸ್ಯೆಯನ್ನ ಬಗೆಹರಿಸುವಲ್ಲಿ ವಿಫಲವಾಗಿದೆ. ಸರದಿ ಸಾಲಿನಲ್ಲಿ ನಿಂತಿರುವ ಮಹಿಳೆಯರು ಮತ್ತು ವೃದ್ಧರು ಮೊದಲ ಬಾರಿಗೆ ನಿಂತಿಲ್ಲ ಬದಲಿಗೆ ಮೂರು ನಾಲ್ಕು ಬಾರಿ ಚಪ್ಪಲಿ ಸವಸಿದ ಮೇಲೆಯೇ ಹಣ ಬಾರದ ಹಿನ್ನಲೆಯಲ್ಲಿ ಮತ್ತೆ ಸರದಿ ಸಾಲಿನಲ್ಲಿ ನಿತಂತಿದ್ದಾರೆ.
ಗೃಹಲಕ್ಷ್ಮಿಗಾಗಿ ಕಾಯುವ ಜನರ ಜೊತೆ ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲವೆಂದು ದೂರಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಶಿಶು ಅಭಿವೃದ್ಧಿ ಕಚೇರಿಯಲ್ಲಿ ಸರದಿ ಸಾಲು ಕಟ್ಟುವುದನ್ನ ಒಪ್ಪಿಕೊಂಡರೂ ಅನ್ನಭಾಗ್ಯ ಯೋಜನೆನೆಗೂ ಈ ಇಲಾಖೆಯಲ್ಲಿ ನೂನ್ಯತೆಗಾಗಿ ಸರದಿಸಾಲಿನಲ್ಲಿ ನಿಂತಿರುವುದು ಅಚ್ಚರಿ ಮೂಡಿಸಿದೆ.
ಇನ್ನೂ ಎಷ್ಟುದಿನಗಳ ಕಾಲ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗೆ ಜನ ಸರದಿ ಸಾಲು ನಿಲ್ಲಬೇಕು ಎಂಬುದು ಪ್ರಶ್ನೆಯಾಗಿದೆ. ಕಚೇರಿಯ ಸಿಬ್ಬಂದಿಗಳು ಮತ್ತೆ ಹಳೆಯ ಸಬೂಬುಗಳನ್ನ ಹೇಳುತ್ತಿದ್ದಾರೆ. ಅಧಿಕಾರಿಗಳು ಯಾರೂ ಮಾಧ್ಯಮಗಳಿಗಾಗಲಿ ಅಥವಾ ಜನರಿಗಾಗಲಿ ಮಾಹಿತಿ ನೀಡುತ್ತಿಲ್ಲ. ಅಂದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗೋಜಲಿಗೆ ಹೋಗುತ್ತಿಲ್ಲ ಎಂಬುದು ಸತ್ಯವಾಗಿದೆ.
ಇದನ್ನೂ ಓದಿ-https://suddilive.in/archives/3401
