ಸ್ಥಳೀಯ ಸುದ್ದಿಗಳು

ಎನ್ ಪಿಎಸ್ ರದ್ಧತಿ ಬಗ್ಗೆ ಸಂಸದರು ಮಾತನಾಡಬೇಕು-ಆಯನೂರು

ಸುದ್ದಿಪಲೈವ್/ಶಿವಮೊಗ್ಗ

ಕಾಂಗ್ರೆಸ್ ಪಕ್ಷ ಪ್ರನಾಳಿಕೆಯಲ್ಲಿ ಎನ್ ಪಿ ಎಸ್ ಮತ್ತು‌ ಒಪಿಎಸ್ ಯೋಜನೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ 6½ ಲಕ್ಷ ಜನ ಸರ್ಕಾರಿ ನೌಕರರಾಗಿದ್ದಾರೆ. ಇವರೆಲ್ಲಾ ಆತಂಕದಲ್ಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2006 ರ ನಂತರ ಸರ್ಕಾರಿ ಕೆಲಸ ಕ್ಕೆ ಸೇರಿಕೊಂಡವರಿಗೆ ಎನ್ ಪಿಎಸ್ ಯೋಜನೆ ಅಡಿ ಬರಲಿದ್ದಾರೆ.  ಸಂಸದ ಮತ್ತು ಶಾಸಕರಿಗೆ ಪಿಂಚಣಿ ಇದೆ. ಆದರೆ ನೌಕರರಿಗೆ ಪಿಂಚಣಿ ಇಲ್ಲ. ಸರ್ಕಾರದ ಕಾರ್ಯಕ್ರಮವನ್ನ ಜನರಿಗೆ ಸೇರಿಸುವ ಕೆಲಸ ಮಾಡುವ ಸರ್ಕಾರಿ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ ಎಂದರು.

ಒಬ್ಬ ನೌಕರನ ಹಣ 20% ಎನ್ ಪಿಎಸ್ ಗೆ ಸೇರಲಿದ್ದು, ಈ ಹಣ ಕೇಂದ್ರದ ಆರ್ಥಿಕ ಇಲಾಖೆಯ ಏಜೆನ್ಸಿಗೆ ಸೇರಲಿದೆ. ನಿವೃತ್ತವಾದ ನಂತರ ನೌಕರರು ಈ ಹಣದಲ್ಲಿ 40% ಏಜೆನ್ಸಿಗೆ ಬಿಡಬೇಕಿದೆ. ನಿವೃತ್ತರಾಗುವ ಮೊದಲೇ ಹೊರಬಂದರೆ ಶೇ.80 ರಷ್ಟು ಹಣ ಬಿಡಬೇಕಿದೆ. ಲಾಭ ನಷ್ಟದ ಮೇಲೆ ಹಣ ಸಿಗಲಿದೆ.ಇಷ್ಟೇ ಹಣ ಬರಲಿದೆ ಎಂಬ ಸ್ಪಷ್ಟತೆ ಇಲ್ಲ. ಹಣ ಎಲ್ಲಿ ವಿನಿಯೋಗ ವಾಗಿದೆ ಎಂಬುದೇ ಗೊತ್ತಿರಲ್ಲ ಎಂದು ದೂರಿದರು.

ಈ ಕಾರಣಕ್ಕಾಗಿ ಎನ್ ಪಿಎಸ್ ರದ್ದು ಮಾಡಬೇಕೆಂಬ ಆಗ್ರಹವಿದೆ. ಕೇಂದ್ರ 2004 ರಲ್ಲಿ ತಂದಿದೆ. ರಾಜ್ಯದಲ್ಲಿ 2010 ರಲ್ಲಿ ಬಿಎಸ್ ವೈ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿತ್ತು. 2006 ರಿಂದ ಜಾರಿಯಾಗುವಂತೆ ಮಾಡಿತ್ತು. ಪ್ರತಿತಿಂಗಳು 200 ಕೋಟಿ ನೌಕರ ಹಣ ಏಜೆನ್ಸಿಗೆ ಹೋಗುತ್ತದೆ. 64 ಸಾವಿರದ 800 ಕೋಟಿ ಇದಕ್ಕೆ ರಾಜ್ಯ ಸರ್ಕಾರದ ಹಣವೂ ಸೇರಿಸಿ 1029600 ಕೋಟಿ‌ ಎನ್ ಎನ್ ಪಿಎಸ್ ಯೋಜನೆ ಅಡಿ  ಸಿಆರ್ ಎ ಎಜೆನ್ಸಿಗೆ ಜಮಾವಾಗಿದೆ ಎಙದರು.

ಬೊಮ್ಮಾಯಿ ಅವರು 2023 ರಲ್ಲಿ ಇದರ ಬಗ್ಗೆ ಅಧ್ಯಾಯನಕ್ಕಾಗಿ ಸಮಿತಿ ರಚಿಸಿತ್ತು. ಆದರೆ ಈ ಸಮಿತಿ ಸಭೆಯನ್ನೇ ಮಾಡಲಿಲ್ಲ. ಇದರ ಪ್ರಸ್ತಾಪ ಡಿ.5 ರಂದು ಬೆಳಗಾವಿ ಅಧಿವೇಶದಲ್ಲಿ ಪ್ರಸ್ತಾಪವಾಗಿದೆ. ಕೃಷ್ಣಬೈರೇಗೌಡ ಅವರು ಅಧಿಕಾರಿಗಳ ಸಮತಿ ರಚಿಸುವುದಾಗಿ ಘೋಷಿಸಿದ್ದಾರೆ.

ಸಮಿತಿಯಲ್ಲಿ ನೌಕರರ ಸಂಘದವರು, ಅನುದಾನಿತ ಸಂಸ್ಥೆಯ ನೌಕರರು ಸಮಿತಿಯಲ್ಲಿ ಉಪಸ್ಥಿತರಿರಬೇಕು. ನೌಕರರ ರಿಗೆ ಭದ್ರತೆ ನೀಡಲೇ ಬೇಕು. ಹಾಗಾಗಿ ಎನ್ ಪಿಎಸ್ ರದ್ದಾಗಬೇಕು. ಜ.06 ರಂದು ಸಿಎಂ‌ ಜೊತೆ ಎಲ್ಲಾ ಸಂಘದವರನ್ನ‌ ಮಾತುಕತೆಗೆ ಕರೆದಿದ್ದಾರೆ. ಅಲ್ಲಿ ಸಿಎಂ‌ ಎನ್ ಪಿಎಸ್ ರದ್ದಾಗುವುದನ್ನ‌ ಘೋಷಿಸಬೇಕೆಂದರು.

1029600  ಕೋಟಿ ಹಣವನ್ನ ಹೇಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಿದ್ದುಪಡಿಯಾಗಬೇಕು. ಹೊಸ ಪಿಂಚಣಿ ಗೆ ಸೇರಲು ಇಷ್ಟಪಡೊಲೊದಿಲ್ಲ ಅದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತರಬೇಕಿದೆ. ಪಿಎಎಫ್ ಆರ್ ಡಿ ಎ ರದ್ದತಿಗೆ ಸಂಸದರು ಒತ್ತಾಯಿಸಬೇಕು. ಸಂಸದರು ಮಾತನಾಡಲಿಲ್ಲ ಎಂದರೆ ನೌಕರರು ಪ್ರತಿಭಟಿಸಬೇಕು. ಸಂಸದರ ವಿರುದ್ಧ ನೌಕೃರರು ಚುನಾವಣೆಯ ವೇಳೆ ವೋಟ್ ಫಾರ್ ಒಪಿಎಸ್ ಅಡಿಯಲ್ಲಿ ಅಭಿಯಾನ ನಡೆಸಬೇಕೆಂದು ಎಂದರು.‌

ಫೆಬ್ರವರಿಯಲ್ಲಿ ಅಧಿವೇಶನವಿದೆ ಸಂಸದರು‌ ತಿದ್ದುಪಡಿ ಮಾಡಲು ಕೇಂದ್ರವನ್ನ ಆಗ್ರಹಿಸಬೇಕು. ಇಲ್ಲವೆಂದರೆ ಅಭಿಯಾನದ ಬಿಸಿ ಮುಟಗಟಿಸಬೇಕೆಂದು ಆಗ್ರಹಿಸಬೇಕೆಂದರು.‌

ಇದನ್ನೂ ಓದಿ-https://suddilive.in/archives/6208

Related Articles

Leave a Reply

Your email address will not be published. Required fields are marked *

Back to top button