ಸ್ಥಳೀಯ ಸುದ್ದಿಗಳು

ಸದೃಢ ಸಮಾಜವನ್ನು ಕಟ್ಟುವಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯ-ಟೆಲೆಕ್ಸ್ ರವಿ

ಸುದ್ದಿಲೈವ್/ಶಿವಮೊಗ್ಗ

ಯಾವುದೇ ಸಂಸ್ಥೆ-ಸಂಘಟನೆಗಳ ಸೇವೆ ಮತ್ತು ಸಕಾರಾತ್ಮಕ ವಿಚಾರಗಳನ್ನು ಪ್ರಚುರ ಪಡಿಸುವ ಮೂಲಕ ಸದೃಢ ಸಮಾಜವನ್ನು ಕಟ್ಟುವಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಪತ್ರಕರ್ತ ಎನ್.ರವಿಕುಮಾರ್(ಟೆಲೆಕ್ಸ್) ಹೇಳಿದರು.

ಇಲ್ಲಿನ ಮಲೆನಾಡು ಸೋಷಿಯಲ್ ಸರ್ವೀಸ್ ಸೊಸೈಟಿ ಮತ್ತು ಅರುಣೋದಯ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಮಾಧ್ಯಮ ಶಿಕ್ಷಣ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದ ಅವರು, ಇಂದಿನ ದಿನಗಳನ್ನು ಮಾಧ್ಯಮ ಯುಗವೆಂದೆ ಕರೆಯಲಾಗುತ್ತಿದೆ. ರೇಡಿಯೋ, ವೃತ್ತಪತ್ರಿಕೆಗಳು, ಸುದ್ದಿ ವಾಹಿನಿಗಳಂತಹ ಸಾಂಪ್ರಾದಾಯಿಕ ಮಾಧ್ಯಮಗಳಷ್ಟೆ ಅಲ್ಲದೆ ಆಧುನಿಕ ತಂತ್ರಜ್ಞಾನದ ನಾಗಾಲೋಟದ ಪರಿಣಾಮವಾಗಿ ಆವಿಷ್ಕಾರಗೊಂಡಿರುವ ಸಾಮಾಜಿಕಜಾಲತಾಣಗಳ ನವ ಮಾಧ್ಯಮಗಳೂ ಕೂಡ ಪ್ರಭಾವಿ ಮಾಧ್ಯಮಗಳಾಗಿ ಪರಿಣಾಮ ಬೀರುತ್ತಿವೆ.

ಇವುಗಳನ್ನು ಸೃಜನಶೀಲತೆಯಿಂದ ಬಳಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಯಾವುದೇ ಸಂಘ-ಸಂಸ್ಥೆಗಳು , ವ್ಯಕ್ತಿಗಳು ಸಮಾಜಕ್ಕೆ ಪೂರಕವಾದ ವಿಚಾರವನ್ನು ಹೊಂದಿದ್ದರೆ ಸಾಲದು ಅದನ್ನು ಆಚರಣೆಗೆ ತಂದು ಪ್ರಚಾರವನ್ನು ಮಾಡಿದಾಗ ಇತರರಿಗೂ ಪ್ರೇರಣೆಯಾಗುತ್ತದೆ. ಇಂತಹ ಪ್ರಚಾರಕ್ಕೆ ಮಾಧ್ಯಮಗಳು ಅಗತ್ಯವಿದೆ ಎಂದರು.

ಮೊಬೈಲ್ ಪೋನ್ ಬಳಕೆ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ತಮಗರಿವಿಲ್ಲದಂತೆ ಮಾಧ್ಯಮ ಸ್ವರೂಪದ ಚಟುವಟಿಕೆಗಳೇ ತೊಡಗಿದ್ದಾರೆ. ಕೇವಲ ನಕಾರಾತ್ಮಕ ಸಂಗತಿಗಳು, ಮನರಂಜನೆ, ಅಂತರ್ ಜಾಲ ಆಟೋಟಗಳು ಕಡೆಗೆ ಆಸಕ್ತರಾಗಿರುವ ಜನರು ಸಮಾಜಕ್ಕೆ ಪೂರಕವಾದ ಸೇವೆ, ಸಂಘಟನೆ ಸಂಬಂಧಿತ ಕಾರ್ಯಕ್ರಮಗಳನ್ನು ಈ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸಬಹುದೆಂಬ ಅರಿತಿರುವುದಿಲ್ಲ. ಯಾವುದೇ ಕಾರ್ಯಕ್ರಮಗಳು ಸಾಂಪ್ರಾದಾಯಿಕ ಮಾಧ್ಯಮಗಳಲ್ಲೆ ಬರಬೇಕು ಎಂದು ನಿರೀಕ್ಷಿಸದೆ ನವಮಾಧ್ಯಮಗಳ ಮೂಲಕವೂ ವ್ಯಾಪಕವಾಗಿ ಜನರನ್ನು ತಲುಪಬಹುದು ಎಂಬುದನ್ನು ಮನಗಾಣಬೇಕು . ನವಮಾಧ್ಯಮಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಾಗಾರವನ್ನು ಫಾದರ್ ಡಾ. ಅಬ್ರಾಹಂ ಅವರು ಉದ್ಘಾಟಿಸಿ ಮಾತನಾಡುತ್ತಾ ಸಮಾಜದಲ್ಲಿ ಆರ್ಥಿಕವಾಗಿ ಬಡ ಮತ್ತು ಹಿಂದುಳಿದ ಮಹಿಳೆಯರ ಸಬಲೀಕರಣಕ್ಕಾಗಿ ಮಲೆನಾಡು ಸೋಷಿಯಲ್ ಸರ್ವೀಸ್ ಸೋಸೈಟಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಸ್ರೀಶಕ್ತಿ ಸಬಲೀಕರಣಕ್ಕೆ ಪೂರಕವಾಗಿ ಮಾಧ್ಯಮಗಳ ಬಳಕೆಯ ಅರಿವು ಮೂಡಿಸಲು ಮಾಧ್ಯಮ ಶಿಕ್ಷಣ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಸಿಸ್ಟರ್ ಸುಪ್ರಿಯಾ ಪ್ರಾಸ್ತಾವಿಕವಾಗಿ ಮಾತಾಡಿದರು. ಅರುಣೋದಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಕುಂತಲ ಉಪಸ್ತಿತರಿದ್ದರು.

ಇದನ್ನೂ ಓದಿ-https://suddilive.in/archives/8150

Related Articles

Leave a Reply

Your email address will not be published. Required fields are marked *

Back to top button