ರಾಜಕೀಯ ಸುದ್ದಿಗಳು

ಸಚಿವರ ಪಿಎ ವಿರುದ್ಧ ಮಹಿಳೆಯರ ದೂರು

ಸುದ್ದಿಲೈವ್/ಶಿವಮೊಗ್ಗ

ಸರ್ ನಿಮ್ಮ ಪಿಎ ಸರಿಯಾಗಿ ರೆಸ್ಪಾನ್ ಕೊಡಲ್ಲ ಎಂದು ಸಚಿವರೆದುರು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಸಮಸ್ಯೆಗಳನ್ನು ತೆಗೆದುಕೊಂಡು ಹೋದ ಸಮಯದಲ್ಲಿ ಸರಿಯಾಗಿ ರೆಸ್ಪಾನ್ ಕೊಡದೆ ನಿಮ್ಮ ಪಿಎ ಕಳಿಸುತ್ತಾರೆ ಎಂದು ಸಚಿವ ಮಧು ಬಂಗಾರಪ್ಪನವರಿಗೆ ದೂರು ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕನಾಗಿರುವ ಹರೀಶ್ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಇಂದು ಸಚಿವ ಮಧು ಬಂಗಾರಪ್ಪ ಕುವೆಂಪು ರಂಗ ಮಂದಿರದಲ್ಲಿ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿ ವಾಪಾಸ್ ಕಾರಿನ‌ ಬಳಿ ಹೋಗುವಾಗ ಮಹಿಳೆಯರು ಸಚಿವರನ್ನ ಸುತ್ತುವರೆದು ಮನವಿ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಪಂಚಾಯತ ನಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಹೋದ ವೇಳೆ ತಮಗಾದ ನೋವನ್ನ ತೋಡಿಕೊಂಡಿದ್ದಾರೆ.ಸರ್ ನಿಮ್ಮ ಕಚೇರಿಗೆ ಹೋದ್ರೆ ಸರಿಯಾಗಿ ಸಮಸ್ಯೆ ಕೇಳಲ್ಲ ಎಂದು ದೂರಲಾಗಿದೆ.

ಗೃಹ ಲಕ್ಷ್ಮೀ ಯೋಜನೆಗೆ ಅಪ್ಲಿಕೇಶನ್ ತಗೆದುಕೊಳ್ಳುತ್ತಿಲ್ಲ ಎಂದು ಮಹಿಳೆಯರ ದೂರಿದ್ದಾರೆ. ಸಚಿವ ಮಧು ಬಂಗಾರಪ್ಪ ನವರಿಗೆ ಮಹಿಳೆಗೆ ದೂರು ನೀಡಿದ್ದಾರೆ. ಸಮಸ್ಯೆ ಬಗೆಹರಿಸುವುದಾಗಿ ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/5571

Related Articles

Leave a Reply

Your email address will not be published. Required fields are marked *

Back to top button