ಸ್ಥಳೀಯ ಸುದ್ದಿಗಳು

ಕಾಂಗ್ರೆಸ್ ನ ರಾಜ್ಯ ಸಭಾ ಸದಸ್ಯನ ಮನೆಯಲ್ಲಿ 350 ಕೋಟಿ ಪತ್ತೆ-ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ-ಭದ್ರಾವತಿ ಘಟನೆಯ ಬಗ್ಗೆಯೂ ಪ್ರಸ್ತಾಪ

ಸುದ್ದಿಲೈವ್/ಶಿವಮೊಗ್ಗ

ರಾಜ್ಯಸಭಾ ಸದಸ್ಯ ಧೀರಾಜ್ ಸಾಹು ಮನೆಯ ಮೇಲೆ ಐಟಿ ದಾಳಿ ನಡೆದಾಗ  350 ಕೋಟಿ ರೂ. ಪತ್ತೆಯಾದ ಬೆನ್ನಲ್ಲೇ ಶಿವಮೊಗ್ಗದಲ್ಲಿ ಬಿಜೆಪಿ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿದೆ.

ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಡಿಕೆಶಿ ಎಂದರೆ ಭ್ರಷ್ಠಾಚಾರಕ್ಕೆ ಮತ್ತೊಂದು ಅನ್ವರ್ಥ ನಾಮವಾಗಿದೆ. ಲಜ್ಜೆಗೆಟ್ಟ ಕಾಂಗ್ರೆಸ್ ಲೋಕಾಯುಕ್ತರನ್ನ ತೆಗೆದು ಎಸಿಬಿ ರಚಿಸಿ ಸಿದ್ದರಾಮಯ್ಯನವರು ಕ್ಲೀನ್ ಚೀಟ್ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಡಿಕೆಶಿ ಪ್ರಕರಣವನ್ನ ಸಚಿವ ಸಂಪುಟದಲ್ಲಿ ಹಿಂಪಡೆಯಲಾಯಿತು. ಇವೆಲ್ಲವೂ ಭ್ರಷ್ಠಾಚಾರದ ವಿಚಾರದಲ್ಲಿ ಕಾಂಗ್ರೆಸ್ ನ ನಡೆಯಾಗಿದೆ.

ಗುತ್ತಿಗೆದಾರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗುತ್ತೆ. ಛತ್ತೀಸ್ ಘಡ್ ನ  ರಾಜ್ಯಸಭಾ ಸದಸ್ಯ ಧೀರಾಜ್ ಸಾಹು ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾದರೆ ಕಾಂಗ್ರೆದ್ ಮೌನಕ್ಕೆ ಶರಣಾಗಿದೆ. ತಕ್ಷಣವೇ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ರಾಜ್ಯದಲ್ಲಿ ಬರಬಂದಿದೆ. ಬರ ನಿರ್ವಹಿಸಲು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನ ಕಾಯುತ್ತಿದೆ. ಡಿಕೆಶಿಯ ಆದಾಯಕ್ಕಿಂತ ಹೆಚ್ಚಿನ ಹಣ ಸಂಪಾದನೆ ಪ್ರಕರಣವನ್ನ ಸಿಬಿಐಯಿಂದ ಹಿಂಪಡೆದಿರುವದನ್ನ ಪುನರ್ ವಿಮರ್ಶಿಸಬೇಕು. ಭದ್ರಾವತಿಯನ್ನ ಕಾಂಗ್ರೆಸ್ ಜೂಜು ಅಡ್ಡೆಯನ್ನಾಗಿ ಮಾಡಲಾಗಿದೆ.

ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಭದ್ರಾವತಿಯಲ್ಲಿ ಜೂಜು ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದಾಗ ಆತನ ಮೇಲೆ ಹಲ್ಲೆ ನಡೆದಿದೆ ಅವರ ಹೆಂಡತಿಯನ್ನ ಬೇರೆ ಊರಿಗೆ ಕಳುಹಿಸಲಾಗಿದೆ. ಸಂಧಾನಕ್ಕೆ ಕರೆಯಿಸಿ ಗೋಕುಲ್ ನ ಮೇಲೆ ಹಲ್ಲೆ ಮಾಡಲಾಗಿದೆ. ಠಾಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳದೆ ಹಲ್ಲೆ ನಡೆಸಿದವರನ್ನ ಬೆಂಬಲಿಸಿದ್ದಾರೆ. ಅವರನ್ನ‌ಅಮಾನತು ಮಾಡಬೇಕು. ಪೊಲೀಸ್ ಇಲಾಖೆಯನ್ನ‌ ದುರ್ಬಲಗೊಳಿಸಿದ್ದಾರೆ. ತಕ್ಷಣವೇ ಜೂಜು ಬೆಂಬಲಿಸುವವರನ್ನ ಬಂಧಿಸುವಂತೆ ಆಗ್ರಹಿಸಿದರು.

ಗೂಂಡಾ ರಾಜ್ಯದಲ್ಲಿ ನಾವಿಲ್ಲ ಇದು ಪ್ರಜಾಪ್ರಭುತ್ವವಾಗಿದೆ. ಈ ಬಗ್ಗೆ ಯವುದಾದರೂ ಪೊಸ್ಟ್ ಮಾಡಿದರೆ ದಬ್ಬಾಳಿಕೆ ಮಾಡಲಾಗುತ್ತದೆ. ಇದನ್ನ ಬಿಜೆಪಿ ಖಂಡಿಸಿದೆ ಎಂದರು.

ಈ ವೇಳೆ ಡಾ.ಧನಂಜಯ್ ಸರ್ಜಿ, ಪಾಲಿಕೆ ಮಾಜಿ ಸದಸ್ಯರಾದ ಸುರೇಖಾ ಮುರುಳೀಧರ್, ಸುನೀತಾ ಅಣ್ಣಪ್ಪ, ವಿನ್ಡೆಂಟ್ ರೋಡ್ರಿಗೋ, ಅಣ್ಣಪ್ಪ, ಮೊದಲಾದವರು ಉಪಸ್ಥಿತರಿದ್ದರು‌.

ಇದನ್ನೂ ಓದಿ-https://suddilive.in/archives/4690

Related Articles

Leave a Reply

Your email address will not be published. Required fields are marked *

Back to top button