ಅ.15 ರಿಂದ 24 ರ ವರೆಗೆ ನಡೆಯಲಿದೆ ನಾಡಹಬ್ಬ

ಸುದ್ದಿಲೈವ್/ಶಿವಮೊಗ್ಗ

ಮಹಾನಗರ ಪಾಲಿಕೆಯ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಹಬ್ಬವನ್ನ ಅ.15 ರಿಂದ 24 ರ ವರೆಗೆ ಆಚರಿಸಲಾಗುತ್ತಿದೆ.
ಈ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಚೆನ್ನಬಸಪ್ಪ ಪಾಲಿಕೆ ಮೇಯರ್ ಶಿವುಕುಮಾರ್ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮೂಲಕ ದಸರಾ ಹಬ್ಬಕ್ಕೆ ಚಾಲನೆ ನೀಡಲಾಗುತ್ತಿದೆ. ಅ.15 ರಂದು ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಆರಂಭವಾಗಲಿದೆ ಎಂದರು
ದಸರಾ ಉದ್ಘಾಟನೆಯನ್ನ ಭಾರತೀಯ ಶಾಸ್ತ್ರೀಯನೃತ್ಯಗಾರ್ತಿ ಹಾಗೂ ನಟಿ ಶ್ರೀಮತಿ ವೈಜಯಂತಿ ಕಾಶಿ ಈ ಬಾರಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆಯಲ್ಲಿ ಅ.24 ರಂದು ನಡೆಯಲಿದ್ದು ಕೋಟೆ ಅರಮನೆಯಲ್ಲಿ ದೇವಾನು ದೇವತೆಗಳೊಂದಿಗೆ ಶಿವಪ್ಪನಾಯಕ ಅರಮನೆ ಆವರಣದಿಂದ ಧ್ವಜಕ್ಕೆ ಸಲ್ಲಿಸಿ ಮೆರವಣಿಗೆ ಉದ್ಘಾಟನೆಗೊಳ್ಳಲಿದೆ ಎಂದರು.
ಜ್ಞಾನ ದಸರಾಕ್ಕೆ ಚಾಲನೆ. ಕಾಲೇಜು ವಿದ್ಯಾರ್ಥಿಗಳಿಗೆ ಈ ಜ್ಞಾನ ದಸರಾ ಅನುಕೂಲವಾಗಲಿದೆ. ಈ ಬಾರಿ ಹೊಸದಾಗಿ ಜ್ಞಾನದಸರಾವನ್ನ ಆರಂಭಿಸಲಾಗುತ್ತಿದೆ ಎಂದು ಶಾಸಕ ಚೆನ್ನಿ ತಿಳಿಸಿದರು. ಕಳೆದ ಬಾರಿ ಎರಡು ಕೋಟಿ 60 ಲಕ್ಷ ಖರ್ಚಾಗಿತ್ತು. ಹಬ್ಬಕ್ಜೆ ಕಳೆದ ಬಾರಿ 1 ಕೋಟಿ ಹಣ ಸರ್ಕಾರ ನೀಡುತ್ತು.. ಈ ಬಾರಿ ಸರ್ಕಾರಕ್ಕೆ 1.5 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಎಷ್ಟು ಹಣ ನೀಡುತ್ತದೆ ಕಾದು ನೋಡಬೇಕೆಂದರು.
ಅ.20 ರಂದು ನಗರಲ್ಲೆ ಆನೆಗಳು ಬರಲಿದೆ. ನಿನ್ನೆ ಸಕ್ರಬೈಲಿಗೆ ಹೋಗಿ ಆನೆಗಳಿಗೆ ಪೂಜೆ ಸಲ್ಲಿಸಲಾಗಿತ್ತು. ಪಟಾಕಿಯನ್ನ ಸರ್ಕಾರ ನಿಷೇಧಿಸಿದೆ. ಆದರೆ ರಾವಣದಹನಕ್ಕೆ ಪಟಾಕಿ ಸಿಡಿಸಲಾಗುವುದಾಗಿ ಪಾಲಿಕೆ ಹೇಳಿರುವುದು ಅಚ್ಚರಿ ಮೂಡಿಸಿದೆ. ವಿವಿಧ ಕಾರಗಯಕ್ರಮಗಳನ್ನ ಪಾಲಿಕೆ ಆಹ್ವಾನ ಪತ್ರಿಕೆಯಲ್ಲಿ ದಾಖಲಿಸಿಲ್ಲ. ಆದರೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ
ಸಾಗರ, ನೇತ್ರಾವತಿ, ಹೇಮಾವತಿ ಬರಲಿದೆ. ಕಳೆದ ಬಾರಿ 29 ಲಕ್ಷಆನೆಗಳಿಗೆ ನೀಡಲಾಗಿತ್ತು. ಆನೆಗಳನ್ನ ನೋಡಿಕೊಳ್ಳಲು ಯಾವುದೇ ಕಾರಣಕ್ಕೂ ಕೊರತೆ ಬಿದ್ದಿಲ್ಲವೆಂದು ಶಾಸಕರು ತಿಳಿಸಿದರು.
ಇದನ್ನೂ ಓದಿ-https://suddilive.in/archives/1062
