ಸ್ಥಳೀಯ ಸುದ್ದಿಗಳು

ಜಿಲ್ಲಾ ಉಸ್ತುವಾರಿ ಸಚಿವರಿಗೆ ಜೈ ಎಂದ ಬೇಳೂರು

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಸಿಕ್ಕಿರುವುದು ಸ್ವಾಗತಾರ್ಹ ಎಂದು ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ನೂತನ ಅಧ್ಯಕ್ಷ ಗೋಪಾಲ ಕೃಷ್ಣ ಬೇಳೂರು ತಿಳಿಸಿದರು.

ಅವರು ಮಾಧ್ಯಮದವರೊಂದಿಗೆ ಮಾತನಾಡಿ ಅಯೋಧ್ಯ ರಾಮಮಂದಿರ ನಿರ್ಮಾಣದ ಹೋರಾಟ ಮಾಡಿದ್ದು ಅಡ್ವಾಣಿ ಆದರೆ ಕಿಟೀಟ ಪಡೆದಿದ್ದ ಬೇರೆಯವರು ಎಂದು ಮೋದಿ ಹೆಸರು ಹೇಳದೆ ಪ್ರಧಾನಿಗೆ ಟಾಂಗ್ ನೀಡಿದ್ದಾರೆ.

ಎಂಪಿ ಕ್ಷೇತ್ರಕ್ಕೆ ನಿಲ್ಲದಂತೆ ಪಕ್ಷ ಸೂಚಿಸಿದೆ ಎಂದ ಬೇಳೂರಿಗೆ ಮಾಧ್ಯಮದವರು ಪ್ರಶ್ನಿಸಿದಕ್ಕೆ ಉತ್ತರಿಸಿದ ಅವರು‌ ಯೂ ಟರ್ನ್ ಹೊಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಯಾರನ್ನ ಸೂಚಿಸುತ್ತಾರೆ ಅಂತಹ ಪಕ್ಷದ ಲೋಕ ಸಭಾ ಅಭ್ಯರ್ಥಿಯನ್ನ ಚುನಾವಣೆಯಲ್ಲಿ ಗೆಲ್ಲಿಸುವುದು ನಮ್ಮ ಗುರಿಯಾಗಿದೆ ಎಂದರು.

ನಾನು ನಿಗಮ ಮಂಡಳಿ ಅದ್ಯಕ್ಷ ಸ್ಥಾನ ಕೇಳಿರಲಿಲ್ಲ. ಪಕ್ಷ ಗುರುತಿಸಿ ನಿಮಗ ಮಂಡಳಿ ಕೊಟ್ಟಿದ್ದಾರೆ. 20 ತಿಂಗಳ ಸಚಿವ ಸ್ಥಾನ ಕೊಡಬೇಕು ಎಂದಿದ್ರಿ ಆ ಹೇಳಿಕೆಯಿಂದ ಹಿಂದೆ ಸರಿದ್ರಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಬೇಳೂರು ಆ ಪ್ರಶ್ನೆ ಕೇಳಿ ಬೆಂಕಿ ಹಚ್ಚುವ ಕೆಲಸ ಮಾಡುವುದು ಬೇಡ ಎಂದು ಅ್ಪಷ್ಟನೆ ನೋಡಿದರು.

ಬಾಲಕೃಷ್ಣ ಹೇಳಿಕೆ ಮತ್ತು ಎಂಪಿ ಡಿಕೆ ಸುರೇಶ್ ಅವರ ಹೇಳಿಕೆಯನ್ನ ಬಿಗಿ ಹಿಡಿಯುವುದಾದರೆ ಯತ್ನಾಳ್ ಕೊರೋನ ಸಂದರ್ಭದಲ್ಲಿ 40 ಸಾವಿರ ಕೋಟಿ ಹಗರದ ಮಾತನಾಡಿದ್ದರು.‌ಅದರ ಗ್ಗೆ ಬಿಜೆಪಿಯ ನಿಲಿವೇನು? ಎಂದು ಗರಂ ಆದರು.

ಮತ್ತು ಎಂಪಿ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡಬೇಕು ಎಂದಿದ್ದರು. ಅದನ್ನ ಮೊದಲು ಬಿಜೆಪಿ ಪ್ರತಿಕ್ರಿಯಿಸಲಿ ಎಂದು ಆಗ್ರಹಿಸಿದರು.

ಖರ್ಗೆ ಹೇಳಿಕೆಗೆ ಉತ್ತರ ಕೊಡುವಷ್ಟು ಬೆಳೆದಿಲ್ಲ.‌ ಈ ಬಾರಿ ಕಾಂಗ್ರೆಸ್ ಲೋಕ ಸಮರದಲ್ಲಿ ಗೆಲ್ಳಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಚುನಾವಣೆಗಳೆ ನಡೆಯೊಲ್ಲ ಎಂದಿದ್ದರು. ಈ ಹೇಳಿಕೆಗೆ ಬೇಳೂರು‌ ಉತ್ತರಿಸಲು ನಿರಾಕರಿಸಿದ್ದಾರೆ. ಲೋಕ ಸಮರಕ್ಜೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿರುವ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುವುದು ಮತ್ತು ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೇಳುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಗೊಂದಲ ಹೇಳಿಕೆ ಬೇಡ ಎಂದು ಹೇಳಿದರು.

ಇದನ್ಬೂ ಓದಿ-https://suddilive.in/archives/8329

Related Articles

Leave a Reply

Your email address will not be published. Required fields are marked *

Back to top button