ಗಾಯಾಳು ರೋಹನ್ ಮತ್ತು ಮಾಜಿ ಸವಿವರ ನಡುವೆ ಮಾತಿನ ಸಂಭಾಷಣ ಹೇಗಿತ್ತು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣದಲ್ಲಿ ಗಾಯಾಳು ರೋಹನ್ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಈಶ್ವರಪ್ಪನವರ ನಡುವೆ ಕೆಲ ಮಾತಿನ ಸಂಭಾಷಣೆ ನಡೆದಿದೆ. ಸಂಭಾಷಣೆ ಕುತೂಹಲ ಮೂಡಿಸಿದೆ.
ಈಶ್ವರಪ್ಪ : ಹೆದರಬೇಡಿ, ಧೈರ್ಯವಾಗಿರು ನಾವೆಲ್ಲಾ ಇದ್ದೇವೆ ಎಂದರು. ಇದಕ್ಕೆ ಪ್ರತಿಕ್ರಯೆ ನಡೆಸಿದ ರೋಹನ್ : ಪ್ರತಿ ಸಲ ಇದೇ ಹೇಳ್ತೀರಾ ಸರ್ ಎಂದಿದ್ದಾನೆ.
ಈಶ್ವರಪ್ಪ : ಏನ್ ಮಾಡೋಣ ಅಣ್ಣಾ… ಇಂತದ್ದು ಮಾಡಿ ಅನ್ನು ಮಾಡ್ತೀವಿ. ಯಾರ್ಯಾರು ಹರ್ಷ ನನ್ನ ಕೊಲೆ ಮಾಡಿದ್ದರೂ ಬಿಟ್ವಾ. ಎಲ್ಲಾರೂ ಜೈಲಲ್ಲಿ ಇದ್ದಾರೆ ಎಂದರು.
ಏನು ಮಾಡಬೇಕು ನಾವು ಎಲ್ಲಾ ಮಾಡಿದ್ದೇವೆ. ಆದರೆ, ನಾವು ಕತ್ತಿ ಹಿಡಿದುಕೊಂಡು ಹೋಗಲು ಮನಸ್ಸು ಒಪ್ಪಲ್ಲ.ಸ್ವಲ್ಪ ದಿನ ತಡ್ಕೋ. ಎಲ್ಲಾ ಸರಿ ಹೋಗುತ್ತೆ ಎಂದರು.
ಮನೆ ಒಳಗೆ ಇದ್ವಿ ನಾವೆಲ್ಲಾ… ಗೇಟ್, ಕಾಂಪೌಂಡ್ ಹಾರಿ ಬಂದು ಹೊಡೆದ್ರು, ಯಾರ ಬಳಿ ಹೋಗಿ ಹೇಳ್ಬೇಕು. ಯಾರ ಬಳಿ ಬಿಡ್ಬೇಕು.ಈ ವೇಳೆ ಗಾಯಾಳುಗಳಿಗೆ ಮಾಜಿ ಸಚಿವರು ಆರ್ಥಿಕ ಸಹಾಯ ಮಾಡಿದರು.
ಇದನ್ನೂ ಓದಿ-https://suddilive.in/2023/10/02/ನಗರದಾದ್ಯಂತ-ಸೆಕ್ಷನ್-ಜಾರಿ/
