ರಾಜ್ಯ ಸುದ್ದಿಗಳು

ಸಡಗರದಿಂದ ನಡೆದ ತೈಪೂಸಂ ಹಬ್ಬ

ಸುದ್ದಿಲೈವ್/ಶಿವಮೊಗ್ಗ

ಭಗವಾನ್ ಬಾಲಸುಬ್ರಹ್ಮಣ್ಯ ದೇವರ ಹುಟ್ಟುದಿನವಾದ ಇಂದು ತಮಿಳಿಗರ ಸಂಭದ್ರಮದ ದಿನವಾಗಿ ಪರಿಗಣಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಮತ್ತು ಗ್ರಾಮಾಂತರ ಭಾಗಗಳಗಳಲ್ಲಿ  ಸಡಗರ ಸಂಭಮದ ತೈಪೂಸಂ ಹಬ್ಬವನ್ನ  ಆಚರಿಸಲಾಯಿತು.

ಶಿವಮೊಗ್ಗ ತಾಲೂಕಿನ ಗೋಂದಿ ಚಟ್ನಳ್ಳಿಯಲ್ಲಿ ಗುರುವಾರ ಬೆಳಿಗ್ಗೆ ಶ್ರೀ ಮಹಾಗಣಪತಿ ಸೇವಾ ಸಮಿತಿಯಿಂದ ತೈಪೂಸಂ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ದೇವರ ರಾಜಬೀದಿ ಉತ್ಸವ ಅದ್ದೂರಿಯಾಗಿ ನಡೆಸಲಾಯಿತು.

ಪುಷ್ಯ ಮಾಸ ಪೂರ್ಣಿಮೆಯ ವಿಶೇಷವಾದ ದಿನವಾದ ಇಂದು ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಹಾಗೂ ರಾಜಬೀದಿ ಉತ್ಸವವನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ನಾದ ಸ್ವರಗಳ ಮೂಲಕ ಸುಬ್ರಹ್ಮಣ್ಯ ದೇವರ ಉತ್ಸವ ನಡೆಸಿ ಭಕ್ತಾದಿಗಳು ಭಕ್ತಿ ಭಾವದಲ್ಲಿ ಮಿಂದೆದ್ದರು.

ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಗಿಲ್ಲಿ ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಭಾಗವಹಿಸಿದ್ದರು.

ಅದರಂತೆ ಗುಡ್ಡೇಕಲ್ಲಿನಲ್ಲಿ ಆಡಿಕೃತ್ತಿಕೆಯ ಜಾತ್ರೆ ರೀತಿಯಲ್ಲಿ ಈ ತೈಪೋಸಂ ಹಬ್ಬವನ್ನ ಆಚರಿಸಲಾಯಿತು. ಮಹಿಳೆಯರು ಮಡಿಕೆಯಲ್ಲಿ ಹಾಲನ್ನ ತುಂಬಿಸಿಕೊಂಡು ದೇವರಿಗೆ ಅಭಿಷೇಕ ಮಾಡುವುದು ಈ ಹಬ್ಬದ ವಿಶೇಷವಾಗಿರುತ್ತದೆ.

ಇದನ್ನೂ‌ಓದಿ-https://suddilive.in/archives/7698

Related Articles

Leave a Reply

Your email address will not be published. Required fields are marked *

Back to top button