ಸ್ಥಳೀಯ ಸುದ್ದಿಗಳು

ಭದ್ರಾವತಿಯಿಂದ ಗ್ರಾಮಾಂತರ ಪ್ರದೇಶಗಳಿಗೆ ಓಡಾಡುವ ಬಸ್ ಗೆ ಬಿ.ಕೆ ಮೋಹನ್ ಹಸಿರು ನಿಶಾನೆ

ಸುದ್ದಿಲೈವ್/ಭದ್ರಾವತಿ ನ 23

ವಿದ್ಯಾರ್ಥಿಗಳ, ಪ್ರಯಾಣಿಕರ , ಉದ್ಯೋಗಿಗಳು ಸರಿಯಾದ ವೇಳೆಗೆ ತಲುಪಲು ಅನುಕೂಲಕ್ಕೊಸ್ಕರ, ಶಾಸಕರ ಪ್ರಯತ್ನದಿಂದ ಗ್ರಾಮಾಂತರ ಪ್ರದೇಶಗಳಿಗೆ ನಗರದಿಂದ ಸರ್ಕಾರಿ ಬಸ್ ಗಳ ಸೌಕರ್ಯವನ್ನು ಒದಗಿಸಲಾಗುತ್ತೀದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಕೆ. ಮೋಹನ್ ತಿಳಿಸಿದರು.

ಭದ್ರಾವತಿ ವತಿಯಿಂದ ಗ್ರಾಮಾಂತರ ಪ್ರದೇಶದ ಬಿ.ಅರ್. ಪ್ರಾಜೆಕ್ಟ್ ವರೆಗೆ ಓಡಾಡುವ ಸರ್ಕಾರಿ ಬಸ್ ಗೆ ಹಸಿರು ನಿಶಾನೆ ತೋರಿ ಮಾತನಾಡಿದರು.

ಗ್ರಾಮಾಂತರ ಪ್ರದೇಶಗಳಿಂದ ನಗರದ ಅಸ್ಪತ್ರೆಗೆ ತೆರಳಲು ಅನಾರೋಗ್ಯ ಪೀಡಿತರಿಗೆ ಅನುಕೂಲ ಕಲ್ಪಿಸುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ ಎಂದು ಬಾವಿಸಿ ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ ಮೇರೆಗೆ ಸಂಬಂಧಿಸಿದ ಇಲಾಖೆ ಬಸ್ ನ್ನು ಓಡಿಸಲು ಅನುಮತಿ ನೀಡಿದೆ ಎಂದು ಮೋಹನ್ ತಿಳಿಸಿದರು.

ಅದೇರೀತಿ ಗ್ರಾಮಾಂತರ ಪ್ರದೇಶದಿಂದ ಗೃಹಪಯೋಗಿ ಸಾಮಗ್ರಿಗಳ ಖರೀದಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರಲ್ಲದೆ, ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗದಿರಲು ಮುಂದಾಲೋಚನೆಯಲ್ಲಿ ಬಸ್ ನ್ನು ಒಡಾಡಿಸಲಾಗುವುದು ಎಂದರು.

ಗ್ರಾಮಾಂತರ ಪ್ರದೇಶದಿಂದ ನಗರ ಪ್ರದೇಶದ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಕಾರ್ಖಾನೆಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಸರಿಯಾದ ವೇಳೆಗೆ ಹೋಗಿಬರಲು ಅನುಕೂಲವಾಗುವಂತೆ ಬಸ್ ಗಳನ್ನು ಬಿಡಲಾಗಿದೆ, ಪ್ರಯಾಣಿಕರು, ಸಾರ್ವಜನಿಕರು, ವಿಧ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಅವಶ್ಯವಿರುವ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳುವಂತೆ ಬಿ.ಕೆ. ಮೋಹನ್ ಮನವಿ ಮಾಡಿದರು.

ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದ ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್ ಬುಧವಾರ ದಿಂದ ಪ್ರಾರಂಭಗೊಳ್ಳುವ ಬಸ್ ಗೆ ಪುಷ್ಷರ್ಚನೆ ಮಾಡಿ ಶುಭ ಹಾರೈಸಿ, ನಗರ ಬೆಳೆಯಲು ಗ್ರಾಮಾಂತರ ಪ್ರದೇಶಗಳು ಸಹಕಾರಿಯಾಗುವುದು ಅದಕ್ಕಾಗಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಸಂಪರ್ಕ ಬಹುಮುಖ್ಯವಾಗಿದೆ ಈ ಹಿನ್ನೆಲೆಯಲ್ಲಿ ಬಸ್ ಗಳನ್ನು ಓಡಾಡಿಸುವ ಮೂಲಕ ಸಂಪರ್ಕ ಒದಗಿಸಲಾಗಿದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಸ್ ಗಳನ್ನು ಓಡಿಸಲಾಗುವುದು ಎಂದರಲ್ಲದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳು ವಂತೆ ಕರೆ ನೀಡಿದರು.

ನಗರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಸುದೀಪ್ ಕುಮಾರ್, ಸದಸ್ಯರಾದ ಲತಾ ಚಂದ್ರಶೇಖರ್, ಟೀಪೂ ಸುಲ್ತಾನ್ , ವಿ.ಐ.ಎಸ್.ಎಲ್ ಕಾರ್ಮಿಕ ಸಂಘದ ಮಾಜಿ ಉಪಾಧ್ಯಕ್ಷ ಬಸವಂತಪ್ಪ, ಕೆ.ಎಸ್.ಅರ್.ಟಿ.ಸಿ. ಯ ಅಧಿಕಾರಿಗಳಾದ ಕಟ್ಟಿಮನಿ, ಧನಲಕ್ಷ್ಮಿ , ಹರೀಶ್ ಕುಮಾರ್ ಮತ್ತು ಚಾಲಕರು ನಿರ್ವಾಹಕರು ಡಿಪೋ ಕಾರ್ಮಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬುಧವಾರದಿಂದ ಪ್ರಾರಂಭಗೊಳ್ಳುವ ಬಸ್ ರಂಗಪ್ಪ ಸರ್ಕಲ್ ನಿಂದ ಪ್ರತಿದಿನ ಬೆಳಿಗ್ಗೆ 09-00 ಘಂಟೆಗೆ ಹೊರಡುವುದು ಹಾಗೂ ಪ್ರತಿದಿನ 04 ಟ್ರಿಪ್ ಒಡಿಸಲಾಗುವುದು ಎಂಬ ಮಾಹಿತಿ ನೀಡಲಾಯಿತು.

ಇದನ್ನೂ ಓದಿ-https://suddilive.in/archives/3488

Related Articles

Leave a Reply

Your email address will not be published. Required fields are marked *

Back to top button