ಬಸವನಗದ್ದೆಯ ದಾಳಿಯಲ್ಲಿ ಪತ್ತೆಯಾದ ಟ್ರೋಫಿಗಳು

ಸುದ್ದಿಲೈವ್/ತೀರ್ಥಹಳ್ಳಿ

ತಾಲೂಕಿನ ಬಸವನಗದ್ದೆ ಗ್ರಾಮದ ಪ್ರಸನ್ನರವರ ಮನೆಯಲ್ಲಿ ಅರಣ್ಯ ಇಲಾಖೆ ದಾಳಿಯಲ್ಲಿ ಅನೇಕ ವನ್ಯ ಜೀವಿಗಳ ಕೊಂಬು, ಶ್ರೀಗಂಧದ ತುಂಡು ಮತ್ತು ಜಿಂಕೆ ಕೊಂಬುಗಳು, ಒಂದು ನಾಡಬಂದೂಕು ಪತ್ತೆಯಾಗಿದೆ.
ಪ್ರಸನ್ನ, ಸಹೋದರ ನಿವೃತ್ತ ಟಿಹೆಚ್ ಒ ಸತ್ಯನಾರಾಯಣ ಮತ್ತು ಇತರೆ ಒಂದು ಮನೆಯ ಮೇಲೆ 18 ಜನರ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ಮೂರು ತಂಡಗಳಿಂದ ದಾಳಿ ನಡೆದಿದೆ. ಅನಾದಿ ಕಾಲದಿಂದ ಸಂಗ್ರಹವಾಗಿದ್ದ ಈ ವನ್ಯಜೀವಿಗಳ ವಸ್ತುಗಳು ಪತ್ತೆಯಾಗಿದೆ.
ಹಳೆಯ ಮನೆಯನ್ನ ಕೆಡವಿ, ಹೊಸಮನೆ ಕಟ್ಟಿದಾಗ ಈ ವಸ್ತುಗಳನ್ನ ಚೀಲದಲ್ಲಿ ತುಂಬಿ ಇಟ್ಟಿದ್ದ ಕುಟುಂಬ ಅಧಿಕಾರಿಗಳಿಗೆ ದಾಳಿಯ ವೇಳೆ ಪ್ರಸನ್ನರವರ ಸಹಕರಿಸಿದ್ದಾರೆ. ಅನಾರೋಗ್ಯದ ಕಾರಣ ಪ್ರಸನ್ನವರನ್ನ ಬಂಧಿಸದೆ ಬಿಡಲಾಗಿದೆ.
ವ್ಯಕ್ತಿಯೋರ್ವನಿಂದ ದಾಳಿ ನಡೆಸುವಂತೆಅರಣ್ಯ ಇಲಾಖೆಯ ಮೇಲಿನ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದನು. ಇವರ ಮನೆಯ ಲೊಕೇಶನ್ ಸಹ ಹಾಕಿ ದಾಳಿ ನಡೆಸಲು ಸಹಕರಿಸಿದ್ದನು.
ದಾಳಿಯ ವೇಳೆ 21 ಕೊಂಬುಗಳು, 10 ಕೆಜಿ ಗಂಧದ ಮರ, ಒಂದು ನಾಡ ಬಂದೂಕು ಪತ್ತೆಯಾಗಿವೆ. ಆರಗ ಜ್ಞಾನೇಂದ್ರ ಅವರ ಹೋರಾಟದಿಂದ ವೃದ್ಧ ಪ್ರಸನ್ನ ಅವರ ಬಂಧನವನ್ನ ಮುಂದೂಡಲಾಗಿದೆ. ತನಿಖೆಗೆ ಸಹಕರಿಸುವುದಾಗಿ ಅಧಿಕಾರಿಗಳಿಗೆ ಮನವರಿಕೆ ಆಗಿದ್ದರಿಂದ ಮತ್ತು ಅವರ ಅನಾರೋಗ್ಯದ ಕಾರಣದಿಂದ ಬಂಧನವನ್ನ ಮುಂದೂಡಲಾಗಿದೆ.
ಇದನ್ನೂ ಓದಿ-https://suddilive.in/archives/2264
