ಸ್ಥಳೀಯ ಸುದ್ದಿಗಳು

ಆನೆ ಓಡಿಸಲು ಡ್ರೈವ್ ಆರಂಭ-ಉಂಬ್ಳೆಬೈಲಿಗೆ ಕಾವಾಡಿಗರು ಮತ್ತು ಮಾವುತರ ಭೇಟಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹಣಗೆರೆಕಟ್ಟೆ ಭಾಗದಲ್ಲಿ ಆನೆಗಳ ಹಾವಳಿಯಿಂದ ರೈತರ ಬೆಳೆ ಹಾನಿಯಾಗುತ್ತಿದ್ದು, ಆನೆಗಳನ್ನ ಓಡಿಸಲು ಡ್ರೈವ್ ಆರಂಭವಾಗಿದೆ. ಆದರೆ ಭದ್ರಾವತಿ ತಾಲೂಕಿನ ಉಂಬ್ಳೆಬೈಲಿನಲ್ಲಿ ಆನೆಗಳ ಹಾವಳಿ ಹೆಚ್ಚಳಕ್ಕೆ ಮಾವುತರನ್ನ ಕಳುಹಿಸಿರುವುದು ಅಚ್ಚರಿ ಉಂಟಾಗಿದೆ.

ಸೋಮಣ್ಣ

ತಾಲೂಕಿನ ಮಂಜರಿಕೊಪ್ಪ, ಮಲೆಶಂಕರ, ಸಂಪಿಗೆಹಳ್ಳ, ತಮ್ಮಡಿಹಳ್ಳಿ,ಕೂಡಿ, ಎರೆಬೀಸು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಉಂಟಾಗಿದ್ದು, ಇತ್ತೀಚೆಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ಸಹ ಭೇಟಿ ನೀಡಿ ಅರಣ್ಯ ಉಪಸಂರಕ್ಷಣಾಧಿಕಾರಿಗಳಿಗೆ ಸ್ಥಳದಿಂದಲೇ ಕರೆ ಮಾಡಿ ಕ್ರಮಕ್ಜೆ ಸೂಚಿಸಿದ್ದರು.

ಈ ಬೆನ್ನಲ್ಲೇ ಸಕ್ರೆಬೈಲಿನ ಆನೆಬಿಡಾರದಿಂದ ಆನೆಗಳನ್ನ, ಮಾವುತರನ್ನ ಮತ್ತು‌ಕಾವಾಡಿಗಳನ್ನ ಕಳುಹಿಸಲಾಗಿದೆ. ಈ ಕುರಿತು ವನ್ಯ ಜೀವಿ ಅರಣ್ಯ ಅಧಿಕಾರಿ ಪ್ರಸನ್ನ ಪಟಗಾರ್ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದು ಎರಡು ಆನೆಗಳನ್ನ ಕೂಡಿ ಎರಡಬೀಸು ಮೊದಲಾದ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಬಾರದಂತೆ ತಪ್ಪಿಸಲು ಡ್ರೈವ್ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಈಗಾಗಲೇ ನಾಲ್ಕು ದಿನ ಕಳೆದಿದ್ದು, ದಿನಕ್ಕೆ 8-10 ಕಿಮಿ ಡ್ರೈವ್ ನಡೆಸಲಾಗುತ್ತಿದೆ. ವೈದ್ಯ ಡಾ.ವಿನಯ್ ಸಹ ಡ್ರೈವ್ ನಲ್ಪಿ ಪಾಲ್ಗೊಂಡಿದ್ದಾರೆ. ಬಹದ್ದೂರ್ ಮತ್ತು ಸೋಮಣ್ಣ ಎಂಬ ಎರಡು ಗಂಡಾನೆಗಳನ್ನ ಡ್ರೈವ್ ಗೆ ಬಳಸಿಕೊಳ್ಳಲಾಗುತ್ತಿದೆ.

ಬಹದ್ದೂರು ಆನೆಯೊಂದಿಗೆ ಫಯಾಜ್ ಮತ್ತು ನಭಿ ಸೋಮಣ್ಣ ಆನೆಯೊಂದಿಗೆ ಬಸವ ಎಂಬ ಮಾವುತ ಮತ್ತು ಕಾವಾಡಿಗರನ್ನ ಜೊತೆಯಲ್ಲಿ ಕಳುಹಿಸಲಾಗಿದೆ. ಈಗಾಗಲಾಎ ನಾಲ್ಕು ಕಾಡಾನೆಗಳು ಪತ್ತೆಯಾಗಿ ಬೆಳೆ ಹಾನಿ ಉಂಟುಮಾಡಿರುವುದಾಗಿ ತಿಳಿದು ಬಂದಿದೆ.

ಆದರೆ‌ ಭದ್ರಾವತಿಯ ಉಂಬ್ಳೆಬೈಲಿನಲ್ಲಿ ಆನೆಗಳ ಹಾವಳಿಗೆ ಮಾವುತ ಮತ್ತು ಕಾವಡಿಗಳನ್ನ ಕಳುಹಿಸಿರುವುದು ಅಚ್ಚರಿ ಮೂಡಿಸಿದೆ. ಈ ಭಾಗಕ್ಕೂ ಆನೆಗಳನ್ನ ಕಳುಹಿಸುವ ಮೊದಲು ಕಾವಡಿ ಮತ್ತು ಮಾವುತರು ಭೇಟಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಆನೆಗಳ ಡ್ರೈವ್ ಆರಂಭಿಸುವ ನಿರೀಕ್ಷೆ ಇದೆ. ಈ ಭಾಗದಲ್ಲಿ ಆನೆಗಳ ಡ್ರೈವ್ ಆರಂಭಿಸುವ ಒತ್ತಾಸೆಯನ್ನ ಈ ಭಾಗದ ಜನ ಹಾಕಿದ್ದಾರೆ. ಆನೆಗಳನ್ನ ಕಳುಹಿಸಿದ್ದರೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಾಗಲಿದೆ ಎಂಬ ಕೂಗು ಕೇಳಿ ಬರುತ್ತಿದೆ.

ಬೇರೆಡೆ ಆನೆ ಹಾವಳಿ ತಪ್ಪಿಸಲು ಬಳಸಲ್ಪಡುವ ಸಕ್ರೆಬೈಲಿನ ಆನೆ ಶಿವಮೊಗ್ಗ ಜಿಲ್ಲೆಯಲ್ಲಿ ಅಷ್ಟೊಂದು ಬಳಕೆಯಾಗದಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ-https://suddilive.in/archives/3467

Related Articles

Leave a Reply

Your email address will not be published. Required fields are marked *

Back to top button