ಸ್ಥಳೀಯ ಸುದ್ದಿಗಳು

ಲೋಕಸಭೆ ಚುನಾವಣೆಗೆ ಬಹಿಷ್ಕಾರದ ಕೂಗು ಹಾಕಿದ ತೀನಾಶ್ರೀ

ಸುದ್ದಿಲೈವ್/ಶಿವಮೊಗ್ಗ

ಲೋಕ ಸಮರಕ್ಕೂ ಮೊದಲು ಚುನಾವಣೆ ಬಹಿಷ್ಕಾರದ ಕೂಗು ಕೇಳಿ ಬಂದಿದೆ. ತೀ.ನಾ.ಶ್ರೀನಿವಾಸ್ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಲೆನಾಡ ರೈತರ ಸಮಸ್ಯೆ ಬಗೆಹರಿಸಿಲ್ಲ. ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕಾರ ಎಂದು ಸುದ್ದಿಗೋಷ್ಠಿಯಲ್ಲಿ ಗುಟರ್ ಹಾಕಿದ್ದಾರೆ.

ವಿಧಾನ ಸಭಾ ಚುನಾವಣೆಯ ವೇಳೆ ಶರಾವತಿ ಮುಳುಗಡೆ ಸಂತ್ರಸ್ತರ ಸಭೆ ನಡೆದಿತ್ತು. ಸಚಿವ ಮಧು ಬಂಗಾರಪ್ಪನವರು 2022 ರಂದು ಪಾದಯಾತ್ರೆಯೂ ನಡೆಸಿದ್ದರು. ಈಡಿಗರ ಭವಬನದಲ್ಲಿ ಬಿಎಸ್ ವೈ ಸಹ‌ಮಾಡಿದ್ರು 15 ದಿನಗಳಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಭೆ ನಡೆದಿತ್ತು. 10 ಸಾವಿರ ಜನರ ಸಮ್ಮುಖದಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿತ್ತು. ನಾನು ಮನವಿ ಮಾಡಿದ್ದೆ. ಆ ವೇಳೆ ನಾನು ಮತ್ತು ರಮೇಶ್ ಹೆಗಡೆ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿದ್ದರು.

ವರದಿ ನೀಡಲಾಗಿತ್ತು. ಚುನಾವಣೆ ಭರವಸೆಗಾಗಿ ಬಂದಿದ್ದ ಸಿದ್ದರಾಮಯ್ಯ ಮತ್ತು ಡಿಕೆಶಿ ಸರ್ಕಾರ ಬಂದು 15 ದಿನಗಳಲಿ ಶರಾವತಿ ಮುಳುಗಡೆ ಸಂತ್ರಸ್ತ್ರರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಗ್ರಾಮಪಂಚಾಯಿತಿಯಿಂದ ದೆಹಲಿಯ ವರೆಗೆ ಬಿಜೆಪಿ ಸರ್ಕಾರ ಇದ್ದಾಗ ಸಮಸ್ಯೆ ಬಗೆಹರಿಸಲಿಲ್ಲ. ಶರಾವತಿ ಮುಳುಗಡೆ ರಸ್ತೆ ವಿಧಾನ ಸಭೆಯಲ್ಲಿ ಚರ್ಚೆ ಆದ ನಿರ್ಣಯವನ್ನೇ ಬೊಮ್ಮಾಯಿ ಸರ್ಕಾರ ಬರೆಯಲೇಯಿಲ್ಲ.

ಸಂಸದ ರಾಘವೇಂದ್ರ ಈಗ ಸಂತ್ರಸ್ತ್ರರ ಬಗ್ಗೆ ತುಟಿಬಿಚ್ಚಬೇಕು. ಒಂದು ಕಡೆ ಕಂದಾಯ ಇಲಾಖೆ ಹಕ್ಕುಪತ್ರ ನೀಡುದ್ರೆ ಅರಣ್ಯ ಇಲಾಖೆ ತಮ್ಮ ಭೂಮಿ ಎಂದು ಹೇಳಿ ರೈತರನ್ನ ಧಮನ ಮಾಡಲಾಗುತ್ತಿದೆ ಸೊರಬದಲ್ಲಿ ದಿನನಿತ್ಯ ದೌರ್ಜನ್ಯ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಿಂದಾಗಿ ರೈತರು ಅತಂತ್ರರಾಗಿದ್ದಾರೆ.

ಕಾಂಗ್ರೆಸ್ ಗ್ಯಾರೆಂಟಿಯಲ್ಲೇ ಕಾಲ ಕಳೆಯುತ್ತಿದೆ. ಮಧು ಬಂಗಾರಪ್ಪ ಕ್ಯಾಬಿನೆಟ್ ಸಚಿವರಾಗಿದ್ದಾರೆ ಶಾಸನ ಸಭೆಯಲ್ಲಿ ಮಾತನಾಡೊಲ್ಲ. ಮಲೆನಾಡ ರೈತ ಹೋರಾಟ ಸಮಿತಿ ಮತ್ತು ಅಂಬೇಡ್ಕರ್ ಕ್ರಾಂತಿ ಸೇನೆ ಒಂದು ದಿನದಲ್ಲಿ ಮುಖ್ಯಮಂತ್ರಿಗಳು ಲೋಕಸಭೆ ಚುನಾಣೆಯ ಒಳಗೆ ಘೋಷಿಸದಿದ್ದರೆ ಚುನಾವಣೆ ಬಹಿಷ್ಕಾರಿಸಲಾಗುವುದು ಎಂದು ಗುಡುಗಿದರು.

ಉಪಮುಖ್ಯ ಮಂತ್ರಿ ಡಿಕೆಶಿ ಚುನಾವಣೆಗೂ ಮುಂಚೆ ಶಿಕಾರಿಪುರದಲ್ಲಿ ಬಂಜಾರ ಸಮುದಾಯದ ಸಮಸ್ಯೆಯ ಬಗ್ಗೆ ಸಭೆ ನಡೆಸಿದ್ದರು ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿ ಹೊಗಿದ್ದರು. ನಾಳೆ ಬರ್ತಾ ಇದ್ದಾರೆ ಹಕ್ಕುಪತ್ರದ ಬಗ್ಗೆ ಮಾತನಾಡಬೇಕು ಎಂದರು.

ಚುನಾವಣೆ ಆಯೋಗ 95 ಲಕ್ಷ ಕರ್ಚು ಮಾಡಬೇಕಿದೆ. ಆದರೆ ಎಲ್ಲರೂ ಪ್ರಜಾಪ್ರಭುತ್ವವನ್ನ ಗೇಲಿ ಮಾಡುವ ಈ ಜನಪ್ರತಿನಿಧಿಗಳು ಜನರ ಬಗ್ಗೆ ಮಾತನಾಡಬೇಕು. ಸಂಸದರು ವಿಮಾನ‌ನಿಲ್ದಾಣ, ಗೋಡೆಗೆ ಪೈಯಿಂಟ್ ಮಾಡಿಸಿದೆ ಎಂದು ಹೇಳ್ತಾರೆ ಅದನ್ನ ಯಾವುದೇ ಸರ್ಕಾರ ಬಂದರೂ ಮಾಡೇ ಮಾಡುತ್ತೆ. ನಿಮ್ಮ ಕೊಡುಗೆ ಏನು ರೈತರಿಎ ತಿಳಿಸಿ ಎಂದರು.

ಹಾಗಾಗಿ ಚುನಾವಣೆಗೂ ಮುಂಚೆ ಮುಖ್ಯಮಂತ್ರಿಗಳು ಹಕ್ಕುಪತ್ರ ನೀಡದಿದ್ಧರೆ. ಭೂಮಿಗಾಗಿ ಹಾಕಲಾಗಿರುವ ಅರ್ಜಿ, ಯಾರು ಯಾರು ಶರಾವತಿ ಮುಳುಗಡೆ ಸಂತ್ರಸ್ತರಿದ್ದಾರೆ ಅವರನ್ನೆಲ್ಲಾ‌ ಒಟ್ಟುಗೂಡಿಸಿಕೊಂಡು ಚುನಾವಣೆ ಬಹಿಷ್ಕಾರ ಹಾಕಲಾಗುವುದು ಎಂದರು.

ಇದನ್ನೂ ಓದಿ-https://suddilive.in/archives/9430

Related Articles

Leave a Reply

Your email address will not be published. Required fields are marked *

Back to top button