ಜನವರಿಯಿಂದ ಯುವನಿಧಿ ಯೋಜನೆ ಜಾರಿ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ವಿದ್ಯಾಭ್ಯಾಸ ಮಾಡಿ, ಆಸೆಯಿಂದ ಉದ್ಯೋಗ ಅರಿಸುವವರಿಗೆ ಒಂದೇ ಸೂರಿನ ಅಡಿ ಕೆಲಸ ಸಿಗುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ(ಕೆಎಸ್ ಡಿ ಸಿ) ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಸೈನ್ಸಮೈದಾನದಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭವಿಷ್ಯಕ್ಕೆ ವರುಣನೂ ಆಶೀರ್ವಾದಿಸಿದ್ದಾನೆ. 83 ಕಂಪನಿಯಲ್ಲಿ 76 ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿವೆ. ನೇರವಾಗಿ ಕೆಲಸ ನೀಡಲಾಗುತ್ತಿದೆ. 12 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿರುವುದು ಸಂತೋಷ ವೆಂದರು.
ಸರ್ಕಾರದಿಂದ ಉದ್ಯೋಗ ಸೃಷ್ಠಿ ಮತ್ತು ಅವಕಾಶ ಕಲ್ಪಿಸುವುದು ಮುಖ್ಯಗುರಿಯಾಗಿದೆ. ಚುನಾವಣೆ ವೇಳೆ ಪ್ರನಾಳಿಕೆಯ ಉಪಾಧ್ಯಕ್ಷನಾಗಿದ್ದೆ. ಗ್ಯಾರೆಂಟಿ ಕಾರ್ಯಕ್ರಮ ನೀಡಿದ್ದು ಇದೇ ಪ್ರನಾಳಿಕೆ ಸಮಿತಿಯಿಂದ ಯುವನಿಧಿ ಎಂಬ ಯೋಜನೆಯ ಭರವಸೆ ನೀಡಲಾಗಿತ್ತು. ಅದನ್ನ ಜನವರಿಯಿಂದ ಆರಂಭಿಸಲಾಗುವುದು ಎಂದರು.
ಮಕ್ಕಳಿಗೆ ಪೋಷಕರು ಓದಿಸಿರುತ್ತಾರೆ. ಪೋಷಕರನ್ನ ಸಾಕಬೇಕು ಎಂಬ ಕನಸನ್ನ ಮಕ್ಕಳು ಕಂಡಿರುತ್ತಾರೆ. ಉದ್ಯೋಗ ಅರಿಸುವ ಸಂದರ್ಭದಲ್ಲಿ ಕೆಲ ಖರ್ಚು ಇರುತ್ತದೆ ಡಿಪ್ಲೋಮಾ ಓದಿದವರಿಗೆ 1500 ಮತ್ತು ಪದವಿ ಓದಿದವರಿಗೆ 3000 ರೂ.ವನ್ನ ಯುವನಿಧಿ ಅಡಿ ಕೊಡಲಾಗುತ್ತದೆ. ಒಮ್ಮೆ ಕೆಲಸ ಸಿಕ್ಕರೆ ಈ ಹಣ ಬರೊಲ್ಲವೆಂದರು.
ಶಾಸಕ ಚೆನ್ನಬಸಪ್ಪ ಅಧ್ಯಲ್ಷತೆ ವಹಿಸಿದ್ದರು. ಎಂಎಲ್ ಸಿ ಅರುಣ್ ಡಿ.ಎಸ್. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/2704
