ಡಿಸೇಲ್ ಹಾಕಿ ಬಟ್ಟೆ ಅಂಗಡಿಗೆ ಬೆಂಕಿ

ಸುದ್ದಿಲೈವ್/ಭದ್ರಾವತಿ

ಅಂಗಡಿಗೆ ಬಾಗಿಲು ಹಾಕಿ ಮನೆಗೆ ಹೋದ ಸಂದರ್ಭದಲ್ಲಿ ಬಟ್ಟೆ ಅಂಗಡಿಯೊಂದಕ್ಕೆ ಬೆಂಕಿ ಬಿದ್ದಿದ್ದು ಇದೊಂದು ಉದ್ದೇಶ ಪೂರಕವಾಗಿ ನಡೆದಿರುವ ಕೃತ್ಯ ಎಂದು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭದ್ರಾವತಿಯ ಗುಂಡೂರಾವ್ ಸರ್ಕಲ್ ನಲ್ಲಿ ತಿರುಮಲ ಫ್ಯಾನ್ಸಿ ಸ್ಟೋರ್ ಎಂಬ ಅಂಗಡಿಯ ಮುಂಭಾಗದಲ್ಲಿ ಬಾಗಿಲು ಹಾಕಿಕೊಂಡು ಮಬೆಗೆ ಹೋಗಿದ್ದಾಗ ಅಂಗಡಿಯ ಶೆಡ್ ಮುಂಭಾಗದಲ್ಲಿ ಡಿಸೇಲ್ ಚೆಲ್ಲಿ ಅಂಗಡಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಲೀಕ ಚಿನ್ನಸ್ವಾಮಿ ದೂರು ದಾಖಲಿಸಿದ್ದಾರೆ.
ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8-15 ರ ವರೆಗೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮುಗಿಸಿ ಚಿನ್ನಸ್ವಾಮಿಯವರು ಮನೆಗೆ ವಾಪಾಸ್ ಆಗುತ್ತಿದ್ದರು. ಅ.29 ರಂದು ರಾತ್ರಿ ಎಂದಿನಂತೆ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದಾಗ ಅಂಗಡಿಯ ಮುಂದಿನ ಮನೆಯ ಯುವಕ ರಾತ್ರಿ 10-45 ಕ್ಕೆ ಮನೆಯ ಗೇಟಿನ ಬೀಗ ಹಾಕಲು ಬಂದ ವೇಳೆ ಅಂಗಡಿಯ ಒಳಗೆ ಬೆಂಕಿ ಬಿದ್ದಿದ್ದು ಕಂಡು ಬಂದಿದೆ.
ತಕ್ಷಣವೇ ಚಿನ್ನಸ್ವಾಮಿಯವರಿಗೆ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ಧಾವಿಸಿ ಅಂಗಡಿ ಶೆಟ್ಟರ್ಸ್ ತೆಗೆದು ನೋಡಿದಾಗ ಸೀರೆ, ಪ್ರಾಕ್ಸ್, ಹಾಸಿಗೆ ಹಲವಾರು ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡು ಉರಿದಿರುವುದು ಕಂಡು ಬಂದಿದೆ. ತಕ್ಷಣವೇ ನೀರು ಹಾಕಿ ನಂದಿಸಲಾಗಿದೆ. ಸುಮಾರು 50 ಸಾವಿರ ಮಾಲುಗಳು ಬೆಂಕಿಯಿಂದ ಹಾನಿಗೊಳಗಾಗಿದೆ ಎಂದು ದೂರು ದಾಖಲಿಸಲಾಗಿದೆ.
ಅಂಗಡಿ ಮುಂಭಾಗದಲ್ಲಿ ಡಿಸೇಲ್ ಸುರಿದು ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಚಿನ್ಬಸ್ವಾಮಿ ದೂರಿನಲ್ಲಿ ಕೋರಿದ್ದಾರೆ.
ಇದನ್ನೂ ಓದಿ-https://suddilive.in/archives/2280
