ಆನೆಗಳ ತಾಲೀಮು ಆರಂಭ

ಸುದ್ದಿಲೈವ್/ಶಿವಮೊಗ್ಗ

ಈ ಬಾರಿ ಸರಳ ದಸರಾದಲ್ಲೂ ಅಂಬಾರಿ ಹೋರಲು ಸಕ್ರಬೈಲಿನ ಆನೆಗಳಿಗೆ ಆಹ್ವಾನಿಸಲಾಗಿದೆ. ಮೂರು ಆನೆಗಳಿಗೆ ಪಾಲಿಕೆ ಈ ಬಾರಿ ಆಹ್ವಾನಿಸಿದೆ.
ಶಿವಮೊಗ್ಗ ನಾಡಹಬ್ಬ ದಸರಾ 2023, ಅಂಬಾರಿ ಉತ್ಸವ ಮೆರವಣಿಗೆಗೆ, ಸಕ್ರೆ ಬೈಲು ಆನೆ ಬಿಡಾರದಿಂದ ಹೊರಡಲಿರುವ ಪಳಗಿದ ಆನೆಗಳಾದ ಎಡಕ್ಕೆ ನೇತ್ರಾವತಿ, ಬಲಕ್ಕೆ ಹೇಮಾವತಿ ಹಾಗೂ ಮಧ್ಯದಲ್ಲಿ ಸಾಗರ್ ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.
ಬರ ಹಿನ್ನಲೆಯಲ್ಲಿ ಪಾಲಿಕೆ ಸರಳ ಹಬ್ಬವೆಂದು ಹೇಳಿದರೂ ಸಂಪ್ರದಾಯವನ್ನ ಬಿಟ್ಟುಕೊಡದಂತೆ ಈ ಬಾರಿ ಸಕ್ರಬೈಲಿನಲ್ಲಿ ಆನೆಗಳನ್ನ ಕರೆಯಿಸಿ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಯೋಚಿಸಿದೆ.
ಅದರಂತ ಈ ಬಾರಿ ಅ.21 ರಂದು ಮೂರು ಆನೆಗಳು ನಗರಕ್ಕೆ ಆಗಮಿಸಲಿದ್ದು ವಾಸವಿ ಶಾಲೆಯಲ್ಲಿ ಬಿಡಾರ ಬೀಡಲಿವೆ. ಸಾಗರ ಆನೆ ಅಂಬಾರಿ ಹೊರಲಿದೆ. ಅಂಬಾರಿಯ ತಾಲೀಮು ಈಗಾಗಲೇ ನೀಡಲಾಗುತ್ತಿದ್ದು, ಗಾಜುನೂರು , ಸಕ್ರೆ ಬೈಲು ಮುಖ್ಯ ರಸ್ತೆಗಳಲ್ಲಿ ಆನೆಗಳಿಗೆ ತರಬೇತಿ ನೀಡುತ್ತಿರುವ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ-https://suddilive.in/archives/1014
