ಸುತ್ತುಕೋಟೆ ಬಳಿ ರಸ್ತೆ ಅಪಘಾತ ಇಬ್ಬರು ಸಾವು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ಅಪಘಾತದಲ್ಲಿ ಪಾದಾಚಾರಿ ಹಾಗೂ ಬೈಕ್ ಸಾವರರಿಬ್ಬರೂ ಸಾವನ್ನ ಕಂಡಿರುವಘಟನೆ ಸುತ್ತುಕೋಟೆಯಲ್ಲಿ ನಡೆದಿದೆ.
ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯ ಸುತ್ತುಕೋಟೆಯಲ್ಲಿ ನಿನ್ನೆ ರಾತ್ರಿ ಮೇಘರಾಜ್ ಎಂಬ 28 ವರ್ಷದ ಯುವಕ ಶಿವಮೊಗ್ಗದಿಂದ ಶಿರಾಳಕೊಪ್ಪದ ಮಂಚಿನಕೊಪ್ಪಕ್ಕೆ ಬೈಕ್ ನಲ್ಲಿ ಹೋಗುವಾಗ ಎದುರಿನಿಂದ ನಡೆದುಕೊಂಡು ಹೋಗುತ್ತಿದ್ದ ಹನುಮಂತಪ್ಪ ಎಂಬುವರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಮೇಘರಾಜ್ ವಿದ್ಯುತ್ ಕಂಬಕ್ಕೆ ಗುದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಶಿಕಾರಿಪುರ ತಾಲೂಕಿನ ಕೆಂಗಟ್ಟೆ ನಿವಾಸಿ ಹನುಮಂತಪ್ಪ (35) ಸುತ್ತುಕೋಟೆಯಲ್ಲಿ ಹಬ್ಬದ ಪ್ರಯುಕ್ತ, ಸಂಬಂಧೀಕರ ಮನೆಗೆ ಬಂದಿದ್ದ ಇವರು ರಾತ್ರಿ ರಸ್ರೆಯ ಬದಿ ನಡೆದು ಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಹನುಮಂತಪ್ಪರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗದ ಹೊನ್ನಾಪುರದಲ್ಲಿ ನೆಲೆಸಿದ್ದ ಮಂಚಿಕೊಪ್ಪದ ಮೇಘರಾಜ್ ಸ್ನೇಹಿತರೊಂದಿಗೆ ಬೆಳಿಗ್ಗೆ ಸಕ್ರೆಬೈಲಿಗೆ ತೆರಳಿಗೆ ಅಲ್ಲಿ ಫೋಟೊಕ್ಲಿಕ್ಕಿಸಿಕೊಂಡು ರಾತ್ರಿಯ ವೇಳೆಗೆ ಚೋರಡಿ ಮೂಲಕ ಶಿಕಾರಿಪುರಕ್ಕೆ ತೆರಳುವಾಗ ಈ ಘಟನೆ ನಡೆದಿದೆ. ಎರಡೂ ಶವವನ್ನ ಮೆಗ್ಗಾನ್ ಶವಗಾರಕ್ಕೆ ತಂದಿರಿಸಲಾಗಿದೆ.
ಇದನ್ನೂ ಓದಿ-https://suddilive.in/archives/1776
