ಸ್ಥಳೀಯ ಸುದ್ದಿಗಳು

ಆನೆಗಳು ಈ ಬಾರಿ ಅಂಬಾರಿ ಹೋರಲ್ಲ

ಸುದ್ದಿಲೈವ್/ಶಿವಮೊಗ್ಗ

ಆನೆಯ ಮೇಲೆ ಅಂಬಾರಿಯನ್ನ ಈ ಬಾರಿಯ ಸಕ್ರೆ ಬೈಲಿನ ಸಾಗರ ಮತ್ತು ಹೇಮವತಿ ಹೋರೋದಿಲ್ಲ. ಕೊನೆಯ ಕ್ಷಣದಲ್ಲಿ ಇಂದು ಶಾಸಕ ಚೆನ್ನಬಸಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಕ್ರೆಬೈಲಿನಿಂದ ಸಾಗರ, ನೇತ್ರಾವತಿ ಮತ್ತು ಹೇಮಾವತಿಯ ಮೇಲೆ ಈ ಬಾರಿ ಅಂಬಾರಿ ಹೋರಿಸುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದ ಬೆನ್ನಲ್ಲೇ ನೇತ್ರಾವತಿ ಮತ್ತು ಮರಿಯನ್ನ ಸಕ್ರೆಬೈಲಿಗೆ ಕಳುಹಿಸಲಾಗಿದೆ.

ಆದರೆ ಜಂಬೂ ಸವಾರಿಯನ್ನ ಹೇಮಾವತಿ ಮತ್ತು ನೇತ್ರಾವತಿಯ ನಡುವೆ ಸಾಗರ ಹೋರಬೇಕಿತ್ತು. ಎರಡು ಹೆಣ್ಣು ಆನೆಗಳ ಮಧ್ಯೆ ಗಂಡಾನೆ ಸರಾಗವಾಗಿ ಬಾರ ಹೋರಲಿದ್ದಾನೆ ಎಂದು ಅಂದಾಜಿಸಲಾಗಿತ್ತು. ಆದರೆ ಒಂದು ಆನೆ ವಾಪಾಸ್ ಸಕ್ರೆಬೈಲಿಗೆ ಹೋಗಿದ್ದರಿಂದ ಈ ತೀರ್ಮಾನ ಅನಿವಾರ್ಯವಾಗಿದೆ.

ಈ ಬೆನ್ನಲ್ಲೇ ಶಾಸಕ ಚೆನ್ನಬಸಪ್ಪ ನವರ ನೇತೃತ್ವದಲ್ಲಿ  ಪಾಲಿಕೆ ಆಯುಕ್ತ ಮಾಯಣ್ಣಗೌಡ, ಅರಣ್ಯ ಅಧಿಕಾರಿ ಪ್ರಸನ್ನ ಪಟೇಗಾರ್ ನೇತೃತ್ವದಲ್ಲಿ ಸಭೆ ನಡೆಸಿ ಅಲಂಕೃತ ವಾಹನದ ಮೇಲೆ ಚಾಮುಂಡೇಶ್ವರಿಯ ವಿಗ್ರಹವನ್ನ ಇರಿಸಿ ವಾಹನದ ಮುಂಭಾಗದ ಎರಡು ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಮಧ್ಯಾಹ್ನ 2-30ಬರ ಸಮಯದಲ್ಲಿ ಜಂಬೂ ಸವಾರಿಯ ಮೆರವಣಿಗೆ ವಾಸವಿ ಶಾಲೆಯಿಂದ ಹೊರಡಲಿದೆ. ಅಲಂಕೃತ ವಾಹನದ ಮೇಲೆ ಜಂಬೂ ಸವಾರಿ ನಡೆಯಲಿದೆ.

ಇದನ್ನೂ ಓದಿ-https://suddilive.in/archives/1716

Related Articles

Leave a Reply

Your email address will not be published. Required fields are marked *

Back to top button