ಸ್ಥಳೀಯ ಸುದ್ದಿಗಳು

ರಿಪಬ್ಲಿಕ್ ಡೇ ಕಪ್ – 2024, ರಾಗಿಗುಡ್ಡದಲ್ಲಿ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯವಳಿ

ಸುದ್ದಿಲೈವ್/ಶಿವಮೊಗ್ಗ

ಪೊಲೀಸ್ ಇಲಾಖಾ ವತಿಯಿಂದ ರಾಗಿಗುಡ್ಡ ನಿವಾಸಿಗಳಿಗೆ ರಿಪಬ್ಲಿಕ್ ಡೇ ಕಪ್ – 2024, ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯವಳಿ ಆಯೋಜಿಸಲಾಗಿದೆ

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕಃ 24-01-2024 ಮತ್ತು 25-01-2024 ರಂದು ಲೀಗ್ ಮಾದರಿ ಕ್ರಿಕೇಟ್ ಪಂದ್ಯಾವಳಿ ರಿಪಬ್ಲಿಕ್ ಡೇ ಕಪ್ – 2024 ರಾಗಿಗುಡ್ಡ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯವಳಿಯನ್ನು ರಾಗಿಗುಡ್ಡದ ನಿವಾಸಿಗಳಿಗಾಗಿ ಆಯೋಜಿಸಲಾಗಿರುತ್ತದೆ.

ಕ್ರಿಕೇಟ್ ಪಂದ್ಯಾವಳಿಯಲ್ಲಿ ರಾಗಿಗುಡ್ಡದ ನಿವಾಸಿಗಳು, ಮಾಧ್ಯಮ ಮಿತ್ರರು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳನ್ನೊಳಗೊಂಡ ಸೌಹಾರ್ದಯುತ ತಂಡಗಳನ್ನು ರಚನೆ ಮಾಡಲಾಗುವುದು. ಪಂದ್ಯವಳಿಗೆ ಉಚಿತ ಪ್ರವೇಶವಿದ್ದು ಯಾವುದೇ ಶುಲ್ಕವಿರುವುದಿಲ್ಲ. ಈ ಕ್ರಿಕೇಟ್ ಪಂದ್ಯಾವಳಿಯಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಕೋರಿದೆ.

ರಾಗಿಗುಡ್ಡದ ಆಸಕ್ತ ಕ್ರೀಡಾಪಟುಗಳು ದಿನಾಂಕಃ 22-01-2024ರ ಸಂಜೆ 06:00 ಗಂಟೆಯ ಒಳಗಾಗಿ  ಸತ್ಯನಾರಾಯಣ್ ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ* ಮೊ ನಂ: 9480803332, ನವೀನ್ -ಮೊ ನಂ: 8722555844, ನಿರಂಜನ್ – ಮೊ 7019476450, ಕಲ್ಲನಗೌಡ – ಮೊ ನಂ7892649688 ರವರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು.

ದಿನಾಂಕಃ 25-01-2024 ರಂದು ಸಂಜೆ 06:00 ಗಂಟೆಗೆ ರಾಗಿಗುಡ್ಡ ವೃತ್ತದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರವರ ಉಪಸ್ಥಿತಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಸದರಿ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ.

ಇದನ್ನೂ ಓದಿ-https://suddilive.in/archives/7310

Related Articles

Leave a Reply

Your email address will not be published. Required fields are marked *

Back to top button