ಸ್ಥಳೀಯ ಸುದ್ದಿಗಳು

ನಾಡು ನುಡಿ ಜಾಗೃತಿಗಾಗಿ ಹ್ಯಾಂಡಲ್ ಇಲ್ಲದ‌ ಬೈಕ್ ಜಾಥ

ಸುದ್ದಿಲೈವ್/ಶಿವಮೊಗ್ಗ

ಇತ್ತೀಚಿನ‌ ದಿನಗಳಲ್ಲಿ ಕನ್ನಡ ಎನ್ನಡ ಎನ್ನುವಂತಾಗಿದೆ. ಕರ್ನಾಟಕದಲ್ಲಿ ಕನ್ನಿಡಿಗನೇ ಅಲ್ಪಸಂಖ್ಯಾತನಾಗಿದ್ದಾನೆ. ಕನ್ನಡ ನಾಮಫಲಕಗಳನ್ನ ಅಳವಡಿಸಲು ಸರ್ಕಾರದ ಆದೇಶಕ್ಕೆ ಕಾಯಬೇಕಿದೆ. ಕನ್ಬಡಿಗರ ಹೋರಾಟಕ್ಕೆ ಬೇರೆಯ ಅರ್ಥಕಲ್ಪಿಸಿ ಹೋರಾಟಗಾರರನ್ನ ಹತ್ತಿಕ್ಕುವಂತಾಗಿದೆ.

ಇಂತಹ ಸಂಕಷ್ಟದ ದಿನಗಳಲ್ಲಿ  ಕನ್ನಡ ನಾಡು, ನುಡಿಯ ವಿಶಿಷ್ಟ ಜಾಗೃತಿಗಾಗಿ ವಿಶೇಷ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಕಲಬುರಗಿ ಜಗತ್ ಸರ್ಕಲ್ ನಿಂದ ಬೆಂಗಳೂರು ವಿಧಾನ ಸೌಧದ ವರೆಗೆ ಇಲ್ಲೋರ್ವ ಕನ್ನಡಕ್ಕಾಗಿ ಹಾಗೂ 50 ನೇ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಬೈಕ್ ಜಾಥ ಹಮ್ಮಿಕೊಂಡಿದ್ದು ಇಂದು ಶಿವಮೊಗ್ಗಕ್ಕೆ ಬಂದಿದ್ದಾರೆ.

ಕಲಬುರಗಿ ಯಿಂದ ಬೆಂಗಳೂರು ವರೆಗೆ 860 ಕಿಮೀ ಹ್ಯಾಂಡಲ್ ಇಲ್ಲದ ಬೈಕ್ ನ್ನು ಓಡಿಸಿ ವಿಶೇಷ ಬೈಕ್ ಸಾಹಸ ಕ್ರೀಡೆಯ ಮೂಲಕ ಕನ್ನಡ ನಾಡು ನುಡಿಗೆ ವಿಶಿಷ್ಟ ಜಾಗೃತಿ ಹಮ್ಮಿಕೊಂಡು ಇಂದು ಈರಣ್ಣ ಜಿ‌ ಕುಂದರಗಿಮಠರವರು ಶಿವಮೊಗ್ಗಕ್ಕೆ ಬಂದಿದ್ದಾರೆ.

ಎರಡುದಿನಗಳ ಹಿಂದೆ ಕಲಬುರಗಿ ಶಾಸಕರಾದ ಸನ್ಮಾನ್ಯ ಶ್ರೀಅಲ್ಲಮ ಪ್ರಭು ಪಾಟೀಲರು ಕಲಬುರಗಿ ಜಗತ್ ಸರ್ಕಲ್ ನಿಂದ ಚಾಲನೆ ನೀಡಿದರು.‌ಕರ್ನಾಟಕಕ್ಕೆ 50 ರ ಸುವರ್ಣ ಸಂಭ್ರಮ ಮಹೋತ್ಸವ ಹಾಗೂ 68 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರಗಿ ಜಗತ್ ಸರ್ಕಲ್ ವಿಶೇಷ ಬೈಕ್ ನ್ನ‌ಸಾಹಸ ಮಯದಿಂದ ಚಲಾಯಿಸಿಕೊಂಡು ಶಿವಮೊಗ್ಗಕ್ಕೆ ಬಂದಿದ್ದಾರೆ.

ಇವರನ್ನ ಶಿವಮೊಗ್ಗದ ಕನ್ನಡಪರ ಸಂಘಟನೆಗಳ ಹೋರಾಟಗಾರ ವಾಟಾಳ್ ಮಂಜು ಸ್ವಾಗತಿಸಿಕೊಂಡಿದ್ದಾರೆ.  ಕಲಬುರಗಿ ಯಿಂದ ಜೇವರ್ಗಿ, ಶಹಾಪುರ, ಸುರಪುರ, ಲಿಂಗಸಗೂರ, ಮಸ್ಕಿ, ಸಿಂಧನೂರು, ಕಾರಟಗಿ ಗಂಗಾವತಿ, ಹೊಸಪೇಟೆ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಹೊನ್ನಳಿ, ಶಿವಮೊಗ್ಗದ ಮೂಲಕ, ಭದ್ರಾವತಿ, ತರೀಕೆರೆ, ಕಡೂರ, ಅರಸೀಕೆರೆ, ತಿಪಟೂರ ತುಮಕೂರು ಮಾರ್ಗವಾಗಿ ಬೆಂಗಳೂರು ವರೆಗೆ ವಿಧಾನ ಸೌಧದ ವರೆಗೆ ಸುಮಾರು 860 ಕಿಮೀ ಕ್ರಮಿಸಿದ್ದಾರೆ.

ಕನ್ನಡ ನಾಡು ನುಡಿಗೆ ಜಾಗೃತಿಯನ್ನು ಮೂಡಿಸುತ್ತ ಕೆಎ 29 ಹ್ಯಾಂಡಲ್ ಇಲ್ಲದ ಬೈಕ್ ಮೇಲೆ ಕನ್ನಡ ಧ್ವಜವನ್ನು ಹಿಡಿದುಕೊಂಡು ಬೈಕ್ ಮೇಲೆ ವಿಶೇಷವಾಗಿ ತಾಯಿ ಭುವನೇಶ್ವರಿ ಭಾವಚಿತ್ರ, ಹಾಗೂ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ನಾಮ ಫಲಕವನ್ನು ಅಳವಡಿಸಿಕೊಂಡು ಬೈಕ್ ನ್ನು ಓಡಿಸಿಕೊಂಡು ಬಂದಿದ್ದಾರೆ. ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಹುಮಾನವನ್ನು ಪಡೆದ ಕರ್ನಾಟಕದ ಲಾಂಛನವನ್ನು ಸಹ ಬೈಕ್ ಮೇಲೆ ಅಳವಡಿಸಲಾಗಿದೆ

ಈ ವಿಶೇಷ ಬೈಕ್ ಗಂಟೆಗೆ 40 ರಿಂದ 50/60 ಕಿಮೀ ಕ್ರಮಿಸಲಿದೆ. ಮಾರ್ಗ ಮದ್ಯದಲ್ಲಿ ಬರುವ ಎಲ್ಲಾ ಊರುಗಳಲ್ಲಿ ಹಿರಿಯರು,ತಾಯಂದಿರು,ಯುವಕರು,ಸಂಘ -ಸಂಸ್ಥೆಗಳು, ಕನ್ನಡಾಭಿಮಾನಿಗಳು ಪ್ರೋತ್ಸಾಹಿಸಿ ಹರಸಿ ಶುಭ ಹಾರೈಸಲಾಗಿದೆ ಎಂದು ಈರಣ್ಣ ಜಿ ಕುಂದರಗಿಮಠ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/5728

Related Articles

Leave a Reply

Your email address will not be published. Required fields are marked *

Back to top button