ನಗರ‌ ಸುದ್ದಿಗಳು

ಖಾಸಗಿ ಆಸ್ಪತ್ರೆಯಿಂದ ಯುವತಿ ನಾಪತ್ತೆ

ಸುದ್ದಿಲೈವ್/ಭದ್ರಾವತಿ

ಸಾಮಾಜಿ ಜಾಲತಾಣದಲ್ಲಿ ಪರಿಚಯವಾದ ಯುವಕನನ್ನ ಮದುವೆ ಮಾಡಿಕೊಡಲು ಪೋಷಕರು ಒಪ್ಪಿಕೊಂಡರು ಯುವತಿ ಖಾಸಗಿ ಆಸ್ಪತ್ರೆಯಿಂದ ದಿಡೀರ್ ನೆ ನಾಪತ್ತೆಯಾಗಿದ್ದಾಳೆ. ನಾಪತ್ತೆಯಾದ ಬೆನ್ನಲ್ಲೇ ಯುವತಿಯ ತಾಯಿ ನ್ಯೂಟೌನ್ ನಲ್ಲಿ ಕಾಣೆ ಪ್ರಕರಣವನ್ನ ದಾಖಲಿಸಿದ್ದಾರೆ.

ಇನ್ ಸ್ಟಾ ಗ್ರಾಂನಲ್ಲಿ ಕೇರಳದ ಯುವಕನೋರ್ವ ಪರಿಚಯವಾಗಿರುತ್ತಾನೆ. ಇಬ್ಬರೂ ಮದುವೆಗೆ ಒಪ್ಪಿಕೊಂಡಿದ್ದರು. 22 ವರ್ಷದ ಯುವತಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕ ಇನ್ನೇನು ನೋಡಲು ಬರ್ತಾ ಇದ್ದಾನೆ ಎನ್ನುವಷ್ಟರಲ್ಲಿ ವಾಂತಿ ಮತ್ತು ಹೊಟ್ಟೆ ಉರಿ ಆರಂಭವಾಗಿದೆ.

ಯುವತಿಯನ್ನ‌ ಭದ್ರಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ತಾಯಿ ಮನೆಗೆ ಬಂದಿದ್ದಾರೆ. ಅಕ್ಕನನ್ನ ನೋಡಿಕೊಳ್ಳಲು ಆಸ್ಪತ್ರೆಗೆ ತೆರಳಿದ ಸಹೋದರಿಗೆ ಅಕ್ಕ ವಾರ್ಡ್ ನಲ್ಲಿ ಇಲ್ಲದಿರುವುದು ಶಾಕ್ ಆಗಿದೆ. ಎಲ್ಲಕಡೆ ಹುಡುಕಿದರೂ ಯಾವ ಪ್ರಯೋಜನವಾಗಿಲ್ಲ.

ಯುವತಿ ವಿದ್ಯಾವಂತೆಯಾಗಿದ್ದಳು, ಶಿವಮೊಗ್ಗ ಭದ್ರಾವತಿ ನಡುವೆ ಇರುವ ಗಾರ್ಮೆಂಟ್ಸ್ ವೊಂದರಲ್ಲಿ ಒಂದು ವರ್ಷ ನಾಲ್ಕು ತಿಂಗಳಿಂದ ಯುವತಿ ಕಂಪ್ಯೂಟರ್ ಆಪರೇಟರ್ ಆಗಿದ್ದಳು. ತಾನು ಮೆಚ್ಚಿಕೊಂಡ ಯುವಕನೂ ಸಹ ಒಂದೇ ಧರ್ಮದವನಾಗಿದ್ದರೂ ಯುವತಿ ನಾಪತ್ತೆಯಾಗಿದ್ದು ಕುಟುಂಬಸ್ಥರಲ್ಲಿ ಬೇಸರ ಮೂಡಿಸಿದೆ.

ಇದನ್ನೂ ಓದಿ-https://suddilive.in/archives/13358

Related Articles

Leave a Reply

Your email address will not be published. Required fields are marked *

Back to top button