ರಾಜಕೀಯ ಸುದ್ದಿಗಳು

ನಗರದ ಬಿಜೆಪಿ ಶಾಸಕರು ಸಂಯಮದಲ್ಲಿದ್ದಾರೆ, ಹೊರಗಿನಿಂದ ಬಂದವರಿಂದ ವ್ಯತಿರಿಕ್ತತೆ ಉಂಟಾಗುತ್ತಿದೆ-ಆಯನೂರು

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಒಂದು ವಾರದ ಹಿಂದೆ ನಡೆದ ಗಲಭೆ ನಿಧಾನವಾಗಿ ಶಾಂತಿಯತ್ತ ಮರುಕಳಿಸುತ್ತಿದ್ದರೂ ಮಾಮೂಲಿನ ವಾತಾವರಣ ಹಿಂತಿರುಗಿಲ್ಲವೆಂದು ಮಾಜಿ ಶಾಸಕ ಆಯನೂರು ಮಂಜುನಾಥ್ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿಗದಿತ ಸಮಯದ ವರೆಗೆ ಅಂಗಡಿ ತೆರೆಯಲು ಅವಕಾಶವಿದೆ. ಕಾರ್ಮಿಕರು ಕೆಲಸಕ್ಕೆ ಹೋಗಲು ನಿರ್ಬಂಧಿಸಲಾಗುತ್ತದೆ. ಆದರೆ ಎಲ್ಲಾ ಮುನ್ನೆಚ್ಚರಿಕೆಯ ನಡುವೆ ನಿರ್ಬಂಧನವನ್ನ ಸಡಿಲಗೊಳಿಸಬೇಕು. ಸಾಮಾನ್ಯ ಸ್ಥಿತಿಗೆ ರಾಗಿಗುಡ್ಡ ಬರಲು ನಾವುಗಳು ಸಹಕರಿಸಬೇಕು ಎಂದರು.

ಆದರೆ ರಾಜಕೀಯದವರಿಂದ ಮತ್ತು ಹೊರಗಿನಿಂದ ಸಾಂತ್ವಾನ ಹೇಳಲು ಬರುವವರಿಂದ  ಘಟನೆ ಕುರಿತು ಹೇಳಿಕೆಗಳು, ಪೂರ್ವ ನಿಯೋಜಿತ ಕೃತ್ಯ ಎನ್ನುವುದು, ಕತ್ತಿ ಗಧೆ ಹಿಡಿಯಲು ಬರುತ್ತದೆ ಎಂಬ ಹೇಳಿಕೆ ಪ್ರಚೋದನೆ ನೀಡುತ್ತಿದೆ. ಇದರಿಂದ ಏನು ಸಾಧಿಸಲು ಹೊರಟಿದ್ದೀರಿ ಎಂದು ರಾಜಕೀಯದವರಿಗೆ ಆಯನೂರು ಪ್ರಶ್ನಿಸಿದರು.

35 ವಾರ್ಡ್ ಗಳಿವೆ 13 ವಾರ್ಡ್ ಗಳಲ್ಲಿ ಮುಸ್ಲೀಂ‌ ಬಾಹುಳ್ಯವಿದೆ. ಅಲ್ಲಿ ಎಲ್ಲಾ ಶಾಂತಿ ಇದೆ. ರಾಗಿಗುಡ್ಡದ 8 ನೇ ವಾರ್ಡ್ ಗಲಭೆಯಾಗಿದೆ. ರಾಗಿಗುಡ್ಡದ 8 ನೇ ಕ್ರಾಸ್ ಘಟನೆಯನ್ನ‌  ನಗರದ 800 ಕ್ರಾಸ್ ಗೆ ಹಬ್ಬಿಸುವುದೇ ರಾಜಕೀಯದವರ ಉದ್ದೇಶನಾ? ಎಂದು ಪ್ರಶ್ನಿಸಿದರು.

ನಮಗೂ ಕತ್ತಿ ಹಿಡಿಯಲು ಬರುತ್ತೆ ಎಂದು ನಾಯಕರು ಹೇಳ್ತಾರೆ ನಿಮ್ಮ‌ಮಕ್ಕಳ ಕೈಯಲ್ಲಿ ತಲ್ವಾರ್  ಹಿಡಿದು ಕಳುಹಿಸುತ್ತೀರಾ? ಕಂಡವರ ಮಕ್ಕಳ ಕೈಯಲ್ಲಿ ಕತ್ತಿ ಹಿಡಿಸುತ್ತೀರಾ ಎಂದು ವ್ಯಂಗ್ಯವಾಡಿದರು. 50 ಸಾವಿರ ಜನ ನಗರದ ಈದ್ ಮೆರವಣಿಗೆ ಶಾಂತಿಯುತವಾಗಿತ್ತು. ಪೂರ್ವ ಸಂಚು ಎಂಬ ಹೇಳಿಕೆ ಸತ್ಯಕ್ಕೆ ದೂರವಾದ ಮಾತು. ಆದತೆ ಇದು ಕಿಡಿಗೇಡಿಗಳ ಕೃತ್ಯ ಎಂಬುದರಲ್ಲಿ ಸಂಶಯವಿಲ್ಲವೆಂದರು.

ಸರ್ಕಾರ ವಿಫಲವೆಂಬುದು ಸಹ ರಾಜಕೀಯ ಪ್ರೇರಿತ ಹೇಳಿಕೆ ಡಿಸಿ ಎಸ್ಪಿ ಸಂಪೂರ್ಣವಾಗಿ ಶಾಂತಿಯುತವಾಗಿ ಸಂಮಯಮದಿಂದ ನಡೆದುಕೊಂಡಿದ್ದಾರೆ. ಶಿವಮೊಗ್ಗ ಶಾಂತಿಯಿಂದ ಕಾಪಾಡಿಕೊಂಡು ಹೋಗುವ ಕೆಲಸ ಆಗಬೇಕು. ಶಿವಮೊಗ್ಗ ಶಾಸಕ ಸಂಯಮದಿಂದ ನಡೆದುಕೊಂಡಿದ್ದಾರೆ. ಹೊರಗಿನಿಂದ ಸಾಂತ್ವಾನ ಹೇಳಲು ಬರುವವರಿಂದ ಪ್ರಚೋದಿತ ಕೆಲಸ ಆಗ್ತಾ ಇದೆ ಎಂದರು.

ಹೊರಗಿನವರಿಂದ ಬರುವವರು ಬಂದು ಸಾಂತ್ವಾನ ಹೇಳಿ ಪ್ರಚೋದಿತ ಹೇಳಿಕೆ ನೀಡುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಡಿ. ಯಾರನ್ನೂ ಬೆಂಬಲಿಸುತ್ತಿಲ್ಲ. ಪುಂಡಪೋಕರಿಯ ಮೇಲೆ ಕ್ರಮ ಆಗಬೇಕು. ನಷ್ಟ ಆದವರಿಗೆ ಸರ್ಕಾರದಿಂದ ಭರಿಸಲು ಒತ್ತಾಯಿಸೋಣ ಎಂದು ಹೇಳಿದರು.

ಜಿಲ್ಲಾಡಳಿತ ಯಾವುದೇ ಕಾರ್ಯಕ್ರಮ‌ ನಡೆಯುವ ಮೊದಲು ಶಾಂತಿ ಸಭೆ ನಡೆಸಲಾಗುತ್ತದೆ. ಅದರಂತೆ ಘಟನೆ ನಡೆದ ನಂತರ ಶಾಂತಿ ಸಭೆ ನಡೆಸಬೇಕು. ಸ್ಥಳೀಯರ ಮುಖಂಡರ ಜನರನ್ನ‌ಕರೆದು ವಿಶ್ವಾಸಕ್ಕೆ ಪಡೆಯಬೇಕು ಎಂದರು.

ಹಗಲು ರಾತ್ರಿ ಪೊಲೀಸರ ಶ್ರಮದಿಂದ ಶಾಂತಿಸ್ಥಾಪಿತವಾಗಿದೆ.  ಹಬ್ಬಕ್ಕೂ ಮುಂಚೆ ರೌಡಿಗಳನ್ನ ಸದೆ ಬಡೆಯಲಾಗಿತ್ತು. ಕಿಡಿಗೇಡಿಗಳು ಗಲಭೆ ನಡೆದಿದೆ. ಕಾನೂನು ಕ್ರಮ ಆಗಲಿ ಎಲ್ಲರೂ ಸಹಬಾಳ್ವೆಯಲ್ಲಿ ಬದುಕೋಣ ಎಂದರು.

ಎಸ್ಪಿ ಕೈಕಟ್ಟಲಾಗಿದೆ ಎಂದು ಹೇಳಿದ್ದು ಅವರೆ, ಎಸ್ಪಿಯವರೇ ಮನೆ ಒಳಗೆ ನುಗ್ಗಿ ಎಳೆದುಕೊಂಡು ಬಂದಿದ್ದಾರೆ ಎಂದು ಹೇಳುತ್ತಿರುವವರೂ ಆರೋಪ ಮಾಡುವವರೆ. ಬಾಯಿಗೆ ಬಂದಿದ್ದನ್ನ  ಮಾತನಾಡುವವರ ಬಾಯಿಗೆ ಬೀಗ ಹಾಕಬೇಕಿದೆ. ಸುಪ್ರೀಂ ಕೋರ್ಟ್ ಆದೇಶವಿದೆ. ಸೆಕ್ಷನ್ ಜಾರಿಯಿದ್ದಾಗ ಗುಂಪು ಸೇರುವುದು ಮತ್ತು ಪ್ರಚೋದನೆ ಭಾಷಣ ಹೇಳುವುದು ಕಾನೂನು ಬಾಹಿರ ಎಂದು. ಗಲಭೆಯನ್ನ ಮುಸ್ಲೀಂ ಮತ್ತು ಹಿಂದೂಗಳು ಎರಡು ಕಡೆಯಿಂದ ನಡೆದಿದೆ. ಯಾರು ಮಾಡಿದ್ದಾರೆ ಎಂದು ಹುಡುಕುವ ಬದಲು ಸಹಬಾಳ್ವೆಯಲ್ಲಿ ಬದುಕುವ ಅವಕಾಶ ಕಲ್ಪಿಸಲು ಯತ್ನಿಸೋಣ ಎಂದರು.

ಪಾಲಿಕೆ ಸದಸ್ಯ ದೀರಾಜ್ ಗೆ ಗಲಭೆಯ ಮಬೆಗಳಿಗ ಭೇಟಿಯಾಗಲು  ನಾನು ಸೂಚಿಸಿದ್ದೆ, ಸೂಚನೆಯಂತೆ ಧೀರಾಜ್ ಭೇಟಿ ನೀಡಿದ್ದಾರೆ.   ನಾಲ್ಕೈದು ಮನೆಗಳಿಗೆ ಹೋಗಿ  ಸಮಸ್ಯೆಯ ಬಗ್ಗೆ ಅವಲೋಕಿಸಿದ್ದಾರೆ. ಸಮಸ್ಯೆಕಂಡು ಬಂದ ಮನೆಗಳಿಗೆ ಅವರು ವೈಯಕ್ತಿಕ ಸಹಾಯ ಮಾಡಿದ್ದಾರೆ‌. ಪೋಸ್ಟ್ ಮಾರ್ಟಮ್ ಮಾಡುವ ಅವಶ್ಯಕತೆಯಿಲ್ಲ. ವಿಲೇ ಆಗಬೇಕು ಎಂದರು.

ಒಡೆದು ಹೋದ ಮನಸ್ಸುಗಳನ್ನ ಹೇಳಿಕೆಯಿಂದ  ಸರಿಪಡಿಸಲು ಆಗೊಲ್ಲ. ಸಂಯಮ ಕಾಪಾಡಬೇಕು. ಪುತ್ತಿಲರನ್ನ ಸೆಕ್ಷನ್ ಇದ್ದಾಗಲೂ ಪೊಲೀಸರು ಭೇಟಿಗೆಅವಕಾಶ ನೀಡುತ್ತಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಲು  ಅವಕಾಶ ನೀಡಲಾಗುತ್ತದೆ. ನಂತರ ಸುಮೋಟೋ ಪ್ರಕರಣ ದಾಖಲಾಗುತ್ತೆ ಎಂಬ ಮಾಧ್ಯಮಗಳ ಪ್ರಶ್ನೆಗೆ  ಆಯನೂರು ಸಮರ್ಥಿಸಿಕೊಳ್ಳಲು ಸರಿಯಾದ ಉತ್ತರ ಮಾತ್ರ ನೀಡಲಿಲ್ಲ . ನ್ಯಾಯಾಂಗ ತನಿಖೆ ಆಗಲಿ ಎಂಬ ಬಿಜೆಪಿಯ ಸತ್ಯಶೋಧನ ಸಮಿತಿಯ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಆಯನೂರು ಮೊದಲು ಶಾಂತಿಯಾಗಲಿ ಆಮಲೆ ಮಿಕ್ಕಿದ್ದು ಎಂದರು.

ಮಂಜುನಾಥ ಗೌಡರ ಮನೆಯ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ

ಮಂಜುನಾಥ್ ಗೌಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗಿರುವುದು ತಪ್ಪಾಗಿ ಅವರ ಮೇಲೆ ಇಡಿ ದಾಳಿ ನಡೆದಿದೆ. 10 ವರ್ಷದ ಹಿಂದೆ ಸಿಒಡಿ ತನಿಖೆಯಾಗಿ ನ್ಯಾಯಾಂಗ ಬಂಧನವಾಗಿ ಬಿಡುಗಡೆಯಾಗಿ ಕ್ಲೀನ್ ಚೀಟ್ ನೀಡಲಾಗಿದೆ. ಪ್ರಕರಣ ಆಗಿರುವಾಗ ಎಂಡಿಯನ್ನ ಯಾಕೆ ಬಿಟ್ಟರಿ ಎಂದು ಪ್ರಶ್ನಿಸಿದರು.

ದುರುದ್ದೇಶ ಪೂರಿತವಾಗಿ ಬಂಧಿಸಲಾಗಿತ್ತು. ದಾಳಿ ನಡೆದಿರುವುದು ಚಾರಿತ್ರದ ಹರಣದ ದೊಡ್ಡಪ್ರಯತ್ನವಾಗಿದೆ. ಇಡಿಯನ್ನ ಏಡಿಯಾಗಿ ಬಳಸಲಾಗುತ್ತಿದೆ. ಒಂದು ಪಕ್ಷದಲ್ಲಿ ಪ್ರಮಾಣಿಕರಿಲ್ಲ ಮತ್ತೊಂದು ಪಕ್ಷದಲ್ಲಿ ಪ್ರಮಾಣಿಕರಿದ್ದಾರೆ ಎಂಬ ರೀತಿ ದಾಳಿಯಾಗಿದೆ. ಸಾವಿರಾರು ಹಗರವಾಗಿ 40% ಹಗರ ನಡೆದಿರುವ ಬಗ್ಗೆ ಶಾಸಕರೇ ಒಪ್ಪಿದ್ದಾರೆ ಅದನ್ನ ಯಾಕೆ ತನಿಖೆಯಾಗೊಲ್ಲವಾ ಎಂದರು.

ಬ್ಯಾಂಕ್ ಮ್ಯಾನೇಜರ್ ಮಹಿಳೆ, ಬ್ಯಾಂಕ್ ಅಧ್ಯಕ್ಷ ಈ ಬಂಗಾರಕ್ಕೆ ಸಾಲ ಕೊಡಿ ಈ ಬಂಗಾರಕ್ಕೆ ಸಾಲಕೊಡಿ ಎನ್ನಲಾಗುತ್ತದಾ?  ಗೌಡರ ಪರವಾಗಿ ಬೆಂಬಲವಾಗಿದ್ದಾರೆ. ತಪ್ಪಿತಸ್ಥರಾಗಿದ್ದರೆ ನ್ಯಾಯಾಲಯ ಬಿಡ್ತಿರಲಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಧೀರಾಜ್, ಪತ್ರಕರ್ತ ಶಿಜು ಪಾಶ, ಐಡಿಯಲ್ ಗೋಪಿ, ಹಿರಣಯ್ಯ ಮೊದಲಾದವರು ಉಪಸ್ಥಿತರಿದ್ದರು

ಇದನ್ನೂ ಓದಿ-https://suddilive.in/archives/706

Related Articles

Leave a Reply

Your email address will not be published. Required fields are marked *

Back to top button