ನಗರ‌ ಸುದ್ದಿಗಳು

ಮತದಾನ ಜಾಗೃತಿ ಮೂಡಿಸುವ‌ ಕುರಿತು ಮಾಹಿತಿ ನೀಡುವಂತೆ ಯುವ ವಕೀಲರ ವೇದಿಕೆ ಒತ್ತಾಯ

ಸುದ್ದಿಲೈವ್/ಶಿವಮೊಗ್ಗ

ಮನೆ ಮನೆಗೆ ತೆರಳಿ ಕಸ ತುಂಬಿಸಿಕೊಳ್ಳುವ ಮಹಾನಗರ ಪಾಲಿಕೆ ವಾಹನದಲ್ಲಿ ಸಾಮಾನ್ಯವಾಗಿ ಹಾಕುವ ಹಾಡುಗಳ ಬದಲು ಮತದಾನದ ಜಾಗೃತಿ ಕುರಿತಂತೆ ಮಾಹಿತಿಯನ್ನ ಪ್ರಚಾರ ಮಾಡುವಂತೆ ಯುವ ವಕೀಲರ ವೇದಿಕೆ ಮನವಿ ಸಲ್ಲಿಸಿದೆ.

ಲೋಕಸಭೆ ಚುನಾವಣೆಯ ಪ್ರಯುಕ್ತ ಪ್ರತಿದಿನ ಶಿವಮೊಗ್ಗ ನಗರದ ಬೀದಿಗಳಲ್ಲಿ ಕಸ ಸಂಗ್ರಹಿಸುವ ವಾಹನಗಳು ಸಾಮಾನ್ಯವಾಗಿ ಹಾಡುಗಳನ್ನು ಹಾಕಿಕೊಂಡು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಪ್ರಸ್ತುತ ಅಸ್ತಿ ತೆರಿಗೆಯನ್ನು ಕಟ್ಟಲು ತೆರೆಗೆ ವಿನಾಯಕ ನೀಡುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಜಿಲ್ಲೆಯಲ್ಲಿ ಮೇ 7 ರಂದು ಲೋಕಸಭೆ ಚುನಾವಣೆ ಸಾರ್ವತ್ರಿಕ ಮತದಾನ ನಡೆಯಲಿದ್ದು ಕಸದ ವಾಹನಗಳಲ್ಲಿ ಕಡ್ಡಾಯವಾಗಿ ಮತದಾನದ ಅರಿವು ಮೂಡಿಸುವ ಬಗ್ಗೆ ಪ್ರಕಟಣೆ ನೀಡಿದರೆ ಮತದಾನದ ಪ್ರಮಾಣ ಹೆಚ್ಚಾಗಲಿದೆ  ಎಂದು ವೇದಿಕೆ ಒತ್ತಾಯಿಸಿದೆ.

ಅಲ್ಲದೆ ಮತದಾನದ ಜಾಗೃತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಿದಂತಾಗುತ್ತದೆ ಜಿಲ್ಲಾಡಳಿತವು ಕಡ್ಡಾಯವಾಗಿ ಮತದಾನ ಮಾಡಲು ಅಗತ್ಯ ಜಾಹೀರಾತು ಪ್ರಕಟಣೆ ನೀಡುವಲ್ಲಿ ಶ್ರಮಿಸುವುದು ಶ್ಲಾಘನೀಯ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮತದಾನದ ಪ್ರಮಾಣ ಶೇಕಡ 52 54 ರಷ್ಟು ಪ್ರಮಾಣದಲ್ಲಿ ಆಗಿರುವುದು ಮುಜುಗರದ ಸಂಗತಿಯಾಗಿದೆ.

ಮತದಾನದ ಪ್ರಮಾಣ ಹೆಚ್ಚಾದರೆ ಜಿಲ್ಲೆಗೆ ಒಂದು ಹೆಗ್ಗಳಿಕೆ ಆದ್ದರಿಂದ ತಾವುಗಳು ಬೆಳಗಿನ ಹೊತ್ತು ಕಸ ಸಂಗ್ರಹಿಸಲು ಬರುವ ವಾಹನಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡಲು ಜನರಿಗೆ ಮನಮುಟ್ಟುವಂತಹ ಜಾಹೀರಾತು ಪ್ರಕಟಣೆಯನ್ನು ನೀಡಲು ಶಿವಮೊಗ್ಗದ ಜಿಲ್ಲಾ ಯುವ ವಕೀಲರ ವೇದಿಕೆ ಮೂಲಕ ಮಹಾನಗರ ಪಾಲಿಕೆ ಆಯುಕ್ತಾರಾದ ಮಾಯಣ್ಣಗೌಡ ಕೆ ರವರಿಗೆ ಮನವಿ ನೀಡಲಾಯಿತು. ಈ ಮನವಿಗೆ ಆಯುಕ್ತರು ಪೂರ್ಣ ಪ್ರಮಾಣದಲ್ಲಿ ಸ್ಪಂದಿಸಿ ನಾಳೆಯಿಂದಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ವೇದಿಕೆ ಭರವಸೆ ನೀಡಿದರು.

ಮನವಿ ನೀಡುವ  ಸಂದರ್ಭದಲ್ಲಿ ವಕೀಲರುಗಳಾದ
ಸುರೇಶ್ ಬಾಬು, ನಿರಂಜನಮೂರ್ತಿ, ಜೈ ಕುಮಾರ್, ತಿಪ್ಪೇಶ್, ಕಿರಣ್ ಪ್ರವೀಣ್ ,ವಿಶ್ವನಾಥ್ ,ರಾಜು ಅನಿಲ್ ರವಿ ,ರಾಜೇಶ್ ರವರು ಹಾಜರಿದ್ದರು.

ಇದನ್ನೂ ಓದಿ-https://suddilive.in/archives/13900

Related Articles

Leave a Reply

Your email address will not be published. Required fields are marked *

Back to top button