ಸ್ಥಳೀಯ ಸುದ್ದಿಗಳು

ರಾಷ್ಟ್ರಭಕ್ತರ ಬಳಗದ ಸಭೆಯಲ್ಲಿ ಈಶ್ವರಪ್ಪನವರು ಬಂಡಾಯದ ಪ್ರಕಟಿಸುತ್ತಾರಾ!?

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರ ಭಕ್ತರ ಬಳಗ ನಾಳೆ ಮಾಜಿ ಡಿಸಿಎಂ ಅವರ ಉಪಸ್ಥಿತಿಯಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಸಕ್ತ ವಿದ್ಯಮಾನಗಳ ಹಿನ್ನಲೆಯಲ್ಲಿ ಅಭಿಪ್ರಾಯ ಸಂಗ್ರಹಣ ಸಭೆಯನ್ನ‌ಆರಂಭಿಸಲು ಸಜ್ಜಾಗಿದೆ.

ಸ್ವಾಭಿಮಾನದ ಪ್ರಶ್ನೆಯಾಗಿರುವ ಈ ವಿಶೇಷ ಸಭೆಗೆ ತಾವು ಅಪೇಕ್ಷಿತರು ಹಾಗಾಗಿ ಸಭೆಗೆ ಆಹ್ವಾನಿಸಲಾಗಿದೆ ಎಂದು ಉಲ್ಲೇಖಿಸಿ ನಾಳೆ ಸಭೆ ನಡೆಯಲಿದೆ. ಸಭೆಯಲ್ಲಿ ನಿರ್ಣಯ ಏನಾಗಲಿದೆ ಎಂಬುದು ಅಸ್ಪಷ್ಟವಿದೆ. ನಿರ್ಣಯ ಏನಾಗಲಿದೆ ಎಂಬುದು ಕುತೂಹಲವೂ ಮೂಡಿಸಿದೆ.

ಈ ಸಭೆಗೆ ಯಾರು ಯಾರು ಬರಲಿದ್ದಾರೆ ಗೊತ್ತಿಲ್ಲ. ಆದರೆ ಶಾಸಕ ಚೆನ್ನಬಸಪ್ಪ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಬಿಜೆಪಿಯಲ್ಲಿರುವವರೇ ರಾಷ್ಟ್ರಭಕ್ತರ ಬಳಗದಲ್ಲಿರುವುದು. ಎಲ್ಲರೂ ಸೇರಿ ಬಿ.ವೈ.ರಾಘವೇಂದ್ರ ಅವರನ್ನ ಗೆಲ್ಲಿಸುತ್ತೇವೆ. ರಾಷ್ಟ್ರಭಕ್ತರೆಲ್ಲಾ ಸೇರಿ ಸಭೆ ನಡೆಸುತ್ತಿದ್ದಾರೆ. ರಾಷ್ಟ್ರಭಕ್ತರು ಸಭೆಗೆ ಹೋಗ್ತಾರೆ ಎಂದು ಹೇಳುವ ಮೂಲಕ ಗೊಂದಲ ಮೂಡಿಸಿದ್ದಾರೆ.‌

ಅದರಂತೆ ಬಿಜೆಪಿಯ ಧುರೀಣ ಬಿಜೆಪಿಯ ಭಾನುಪ್ರಕಾಶ್ ಸಂಸದೀಯ ಮಂಡಳಿ ಒಮ್ಮೆ ಸದಸ್ಯರನ್ನ ಆಯ್ಕೆ ಮಾಡಿದ ಮೇಲೆ ಚರ್ಚೆಗೆ‌ ಅವಕಾಶವಿಲ್ಲ. ಮನೆಯಲ್ಲಿಯೇ ಸದಸ್ಯರ ನಡುವೆ ಗೊಂದಲ ಹುಟ್ಟುತ್ತದೆ. ಇನ್ನು ಪಕ್ಷದಲ್ಲಿ ಸ್ವಾಭಾವಿಕ. ಹಿರಿಯ ಸದಸ್ಯರೇ ಇ ಸಮಸ್ಯೆ ಸೃಷ್ಠಿಸಿದ್ದಾರೆ ಎಂಬ ಮಾಧ್ಯಮ ಪ್ರಶ್ನೆಗೆ ಬೇರೆಯಾರು ಹೊರಗಡೆಯಿಂದ ಮಾಡ್ತಾಇಲ್ಲ ಎಂದರು.

ಯಜಮಾನರಿಗೆ ಬುದ್ದಿಹೇಳುವವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಭಾನುಪ್ರಕಾಶ್, ಯಾರೂ ಬುದ್ದಿಯಿಲ್ಲದವರು ಇದನ್ನ ಮಾಡ್ತಾ ಇಲ್ಲ ಎಂದು ಒಗಟಾಗಿ ಹೇಳಿದ್ದಾರೆ.

ಅಂದರೆ ಇವರಿಬ್ಬರ ಮಾತುಗಳನ್ನ‌ ಆಲಿಸಿದರೆ ಮುತ್ಸದ್ಧಿಗಳ ಹೋರಾಟದಲ್ಲಿ ಕೆಲ ಬೇಡಿಕೆ ಇರುವುದು ನಿಶ್ಚಿತ ಎನಿಸುತ್ತಿದೆ. ಗೊಂದಲದ ಮಾತು ಒಗಟಿನ‌ ಮಾತುಗಳ ಒಳಾರ್ಥದಲ್ಲಿ ಬಂಡಾಯದ ಹೊಗೆ ಮಾತ್ರ ಕಾಣಿಸುತ್ತಿಲ್ಲ. ಸರಿ ಹೋಗುವ ಮುನ್ಸೂಚನೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/10717

Related Articles

Leave a Reply

Your email address will not be published. Required fields are marked *

Back to top button