ನಗರ‌ ಸುದ್ದಿಗಳು

15 ಜನರಿಂದ 19 ನಾಮಪತ್ರ ಸಲ್ಲಿಕೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಏ.17 ರಂದು ಒಟ್ಟು 04 ನಾಮಪತ್ರಗಳು ಸಲ್ಲಿಕೆ ಆಗಿವೆ. ಅದರಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಏ.12 ರಿಂದ 17 ರವರೆಗೆ 19 ನಾಮಪತ್ರಗಳು ಸಲ್ಲಿಯಾಗಿವೆ.

ಇಂದು ಬಹುಜನ ಸಮಾಜ ಪಾರ್ಟಿಯಿಂದ ಎ.ಡಿ.ಶಿವಪ್ಪ, ಯಂಗ್‍ಸ್ಟರ್ ಎಂಪವರ್‍ಮೆಂಟ್ ಪಾರ್ಟಿಯಿಂದ ಯೂಸುಫ್ ಖಾನ್, ಪಕ್ಷೇತರ ಅಭ್ಯರ್ಥಿಗಳಾಗಿ ಶಶಿಕುಮಾರ್ ಬಿ.ಕೆ ಮತ್ತು ಜಾನ್ ಬೆನ್ನಿ ಸೇರಿದಂತೆ ಇಂದು ಒಟ್ಟು 04 ನಾಮಪತ್ರಗಳ ಸಲ್ಲಿಕೆಯಾಗಿದೆ.

ಕೆ‌.ಎಸ್.ಈಶ್ವರಪ್ಪನವರಿಂದ ಮೂರು ನಾಮಪತ್ರ, ಸುಭಾನ್ ಖಾನ್, ಅರುಣ್ ಕೆ.ಎ. ಎಸ್ ಕೆ ಪ್ರಭು, ರವಿಕುಮಾರ್ ಎನ್, ಪಿ.ಶ್ರೀಪತಿ ಭಟ್, ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಅವರಿಂದ ಮೂರು ನಾಮಪತ್ರ, ನವೀನ್ ಕುಮಾರ್, ಡಿ.ಎಸ್.ಈಶ್ವರಪ್ಪ,

ಕುಣಿಜೆ ಮಂಜುನಾಥ್ ಗೌಡ, ಗಣೇಶ್ ಬಿ. ಶಶಿಕುಮರ್ ಬಿ.ಕೆ, ಜಾನ್ ಬೆನ್ನಿ, ಎ.ಡಿ.ಶಿವಪ್ಪ, ಮೊಹ್ಮದ್ ಯೂಸಫ್ ಖಾನ್ ಸೇರಿದಂತೆ 15 ಜನರಿಂದ 19 ನಾಮಪತ್ರಗಳು ಸಲ್ಲಿಯಾಗಿವೆ. ನಾಳೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದೆ.

ಇದನ್ನೂ ಓದಿ-https://suddilive.in/archives/13038

Related Articles

Leave a Reply

Your email address will not be published. Required fields are marked *

Back to top button