ನಗರ‌ ಸುದ್ದಿಗಳು

ಸಂಭ್ರಮದಿಂದ ನಡೆದ ವಿದ್ಯಾನಗರದ ದುರ್ಗಮ್ಮನ ಜಾತ್ರೆ

ಸುದ್ದಿಲೈವ್/ಶಿವಮೊಗ್ಗ

ವಿದ್ಯಾನಗರದ ದುರ್ಗಮ್ಮ‌ನ ಜಾತ್ರೆ ಇಂದು ಮೂರನೇದಿನಕ್ಕೆ ಕಾಲಿಟ್ಟಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಇಂದು ಭಕ್ತಿ ಭಾವದಿಂದ ಜರುಗಿದೆ.

ದುರ್ಗಮ್ಮ ಉಚ್ಚೇಂಗಮ್ಮ ಮತ್ತು ಗವಿ ಸಿದ್ದೇಶ್ವರ ಮೂವರ ದೇವರ ಹೆಸರಲ್ಲಿ ಜರುಗಲಿದೆ. ಹೋಳಿ ಆಗಿ 7 ದಿನಗಳ ನಂತರ ಈ ಜಾತ್ರೆ ನಡೆಯುತ್ತಿದೆ. ಈ ಮೊದಲು ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆ ಮುಗಿದು ಎರಡು ಮೂರು ದಿನಕ್ಕೆ ನಡೆಯುತ್ತದೆ.

ಆದರೆ ಈ ಬಾರಿ ಪರೀಕ್ಷೆಯ ಹಿನ್ನಲೆಯಲ್ಲಿ ಹೋಳಿ ಮುಗಿದು 7 ದಿನಗಳಿಗೆ ಜಾತ್ರೆ ನಡೆಯುತ್ತದೆ. ಐದು ದಿನಗಳ ಜಾತ್ರಮಹೋತ್ಸವದಲ್ಲಿ ಇಂದು ಮೂರನೇ ದಿನವಾಗಿದೆ. ಭಕ್ತರು ಟಗರುಗಳನ್ನ ತಂದು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಟಗರು ಕಾಳಗವನ್ನೂ ನಡೆಸಲಾಗಿದೆ.

ಜಾತ್ರ ಮಹೋತ್ಸವಕ್ಕಾಗಿ ಹೊರ ಜಿಲ್ಲೆಗಳಿಂದ ಭಕ್ತರು ಆಗಮಿಸಲಿದ್ದಾರೆ. ಮಿನಿ ಜಾತ್ರೆ ಎಂದೇ ವಿದ್ಯಾನಗರದ ದುರ್ಗಮ್ಮನ ಜಾತ್ರೆ ಹೆಸರುವಾಸಿ ಆಗಿದೆ.

ಇದನ್ನೂ ಓದಿ-https://suddilive.in/archives/11997

Related Articles

Leave a Reply

Your email address will not be published. Required fields are marked *

Back to top button