ರಾಜಕೀಯ ಸುದ್ದಿಗಳು

ಸಿಎಂ ಸಿದ್ದರಾಮಯ್ಯರಿಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಸವಾಲು!

ಸುದ್ದಿಲೈವ್/ಶಿವಮೊಗ್ಗ

ರಾಮಮಂದಿರ ಲೋಕಾರ್ಪಣೆ ವೇಳೆ ಕರ್ನಾಟಕದಿಂದ ದೇಶಕ್ಕೆ ಕೊಡ್ತಿರುವ ಸಂದೇಶ ಸರಿಯಿಲ್ಲ. ಎಲ್ಲರೂ ಭಿನ್ನ ಭಿನ್ನ ರೂಪದಲ್ಲಿ ಆನಂದಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕರಸೇವಕರನ್ನು ಬಂಧಿಸುತ್ತಿದ್ದಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಆತಂಕ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಿಗೆ ಮಾತನಾಡಿ,  ಕರ್ನಾಟಕ ಆಂಜನೇಯನ ಭೂಮಿ ಇಂತಹ‌ ಕರ್ನಾಟಕದಲ್ಲಿ ಅಯೋಧ್ಯೆ ‌ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತ ಆಗ್ತಿರೋದು ಬೇಸರದ ಸಂಗತಿಯಾಗಿದೆ. ಶ್ರೀಕಾಂತ್ ಪೂಜಾರಿ‌ ಮೇಲೆ ಒಂದೇ ಒಂದು ಕೇಸ್ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಕೊಡ್ತೀನಿ. ನೀವು ಬಂಧಿಸಿ ನಾವು ಹಳ್ಳಿ ಹಳ್ಳಿಯಲ್ಲಿ ಕರಸೇವಕರನ್ನು ಅಭಿನಂದಿಸುತ್ತೇವೆ, ಜಾಗೃತಿ ಮೂಡಿಸುತ್ತೇವೆ.‌ ಸಿದ್ದರಾಮಯ್ಯ ಮುಸ್ಲಿಂರಿಗೆ 10 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಈಗಾಗಲೇ 1 ಸಾವಿರ ಕೋಟಿ ಕೊಟ್ಟಿದ್ದಾರೆ. ಮುಸ್ಲಿಂರಿಗೆ ಹಣ ಕೊಡಲು ದಲಿತರ ಹಣವನ್ನು ‌ಕಬಳಿಸಿದ್ದಾರೆ ದೂರಿದರು.

ಹರಿಪ್ರಸಾದ್ ಹಿಂದುಗಳಲ್ಲಿ ಭಯ ಹುಟ್ಟಿಸುವ ಹೇಳಿಕೆ ನೀಡಿದ್ದಾರೆ. ಮುಲಾಯಂಸಿಂಗ್ ಗೋಲಿಬಾರ್ ಮಾಡ್ತೀನಿ ಅಂದಾಗಲೇ ಕರಸೇವಕರು ಎದುರಲಿಲ್ಲ. ಇನ್ನು ದೇಶದಲ್ಲಿ ಮೋದಿ ಅವರು, ಯುಪಿ ಯಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಇದೆ ಯಾರ ಭಯವೂ ಇಲ್ಲ ಎಂದರು.

ಯತೀಂದ್ರ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ, ಯತೀಂದ್ರ ಅವರಿಗೆ ಹಿಂದುತ್ವದ ‌ಬಗ್ಗೆ ತಿಳುವಳಿಕೆ ಇಲ್ಲ. ಅವರ ತಂದೆ‌ ಜೊತೆ ಲೆಫ್ಟಿಸ್ಟ್ ಹಿಂಬಾಲಕರು‌ ಇದ್ದಾರೆ. ಈಗಾಗಿ ಅವರಿಗು ಅವರ ಬುದ್ದಿ ಇದೆ. ಭಾರತ ಮತ್ತು‌ ಪಾಕಿಸ್ತಾನ ವಿಭಜನೆ ನಂತರ ಭಾರತದಲ್ಲಿ ಮುಸ್ಲಿಂರು 8% ಇದ್ದರು ಈಗ 20% ಆಗಿದ್ದಾರೆ. ಇದನ್ನು ಯತೀಂದ್ರ ಅರ್ಥ ಮಾಡಿಕೊಳ್ಳಬೇಕು.

ಇದನ್ನೂ ಓದಿ-https://suddilive.in/archives/6258

Related Articles

Leave a Reply

Your email address will not be published. Required fields are marked *

Back to top button