ರಾಜಕೀಯ ಸುದ್ದಿಗಳು

ಡಾ.ಸರ್ಜಿ ಇನ್ನೂ ರಾಜಕೀಯದಲ್ಲಿ ರಾಗಿ ಬೀಸಬೇಕು-ಆಯನೂರು

ಸುದ್ದಿಲೈವ್/ಶಿವಮೊಗ್ಗ

ಅಭ್ಯರ್ಥಿಗಳ ಜೊತೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ನಲ್ಲಿ ಪ್ತವಾಸ ಮಾಡಿರುವೆ. ಚಿಕ್ಕಮಗಳೂರಿನಲ್ಲಿ ಜಯಪ್ರಕಾಶ್ ಹೆಗಡೆ ಮತ್ತು ಶಿವಮೊಗ್ಗದಲ್ಲಿ ಗೀತಾರ ಪರ ವಾತಾವರಣ ಇದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳ ಜೊತೆ ನೈರುತ್ಯ ಪದವೀಧರ ಕ್ಷೇತ್ರದ ಪ್ರಚಾರವನ್ನೂ ಮುಗಿಸಿರುವೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಲೋಕಸಭಾ ಚುನಾವಣೆ ಕ್ಷೇತ್ರದಲ್ಲಿ ಗೆದ್ದು ಬರ್ತಾರೆ. ನಾಳೆ ಗೀತಾರವರು ಬೈಂದೂರಿನಿಂದ ಪ್ರಚಾರ ಆರಂಭಿಸಿದ್ದಾರೆ ಎಂದರು.

ಶಿವಮೊಗ್ಗ ಗ್ರಾಮಾಂತರದಲ್ಲಿ ಅಭ್ಯರ್ಥಿ ಬರ್ತಾ ಇಲ್ಲ ಎಂಬ ಕೂಗು ಪಕ್ಷದಿಙದಲೇ ಕೇಳಿಬರ್ತಾ ಇದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆಯನೂರು ದಿನಾಂಕ ಮತ್ತು ಸ್ಥಳ ನಿಗದಿಯಾಗಿರುವ ಬಗ್ಗೆ ಸಮಸ್ಯೆಯಾಗಿದೆ ಸರಿಯಾಗಲಿದೆ ಎಂದರು

ಬದಲಾವಣೆ ಬಯಸುವ ಹೊಸಮತದಾರರು ಕಾಂಗ್ರೆಸ್ ನ್ನ ಗೆಲ್ಲಿಸಲಿದ್ದಾರೆ. ಬಿಜೆಪಿಯ ಒಳ ಜಗಳ ಲಾಭ ನಮಗೆ ಆಗುತ್ತೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕಾಂಗ್ರೆಸ್ ಗೆ ಲಾಭವಾಗಲಿದೆ. ಈಶ್ವರಪ್ಪನವರ ಸ್ಪರ್ಧೆಬಗ್ಗೆ ಇನ್ನೂ ಅನುಮಾನವಿದೆ ಎಂದರು.

ನನ್ನ ಮತ ತೆಗೆದುಕೊಳ್ಳಲು ಸ್ಪರ್ಧೆ ಮಾಡ್ತಾ ಇದ್ದಾರೆ. ಆದರೆ ನನ್ನ‌ಮತ ಕಾಂಗ್ರೆಸ್ ಗೆ ಎಂದ ಆಯನೂರು, ಬಿಎಸ್ ವೈ ನ್ನ ಟೀಕಿಸಿಲ್ಲ. ಮಗನನ್ನ ಟೀಕಿಸಿರುವೆ. ಬಿಜೆಪಿಯ ರುದ್ರೇಗೌಡರು ಮತ್ತು ಡಾ.ಧನಂಜಯ್ ಸರ್ಜಿ ಈಗಲೂ ನನ್ನ ಕಾಂಮೆಟ್ಸ್ ಗೆ ಸರಿಯಾಗಿ ಉತ್ತರಿಸಿಲ್ಲ.

ಈಶ್ವರಪ್ಪನವರು ಅಶ್ಲೀಲಪದ ಬಳಸುತ್ತಿರುವ ರಾಘವೇಂದ್ರ ಬಿಜೆಪಿಯಿಂದ ಕೆಜೆಪಿಗೆ ಹೋಗಿಲ್ಲ. ರುದ್ರೇಗೌಡರ ಸೋಲಿಗೆ ಕಾರಣಯಾರು? ಬಿಎಸ್ ವೈ ಜೈಲಿಗೆ ಹೋದ್ರಾ? ಎಂಬುದನ್ನ ಬಿಜೆಪಿ ನಾಯಕರು ಉತ್ತರಿಸಿಲ್ಲ. ನನ್ನ ಪ್ರಶ್ನೆಯನ್ನ ಪ್ರಶ್ನೆಯಾಗಿಯೇ ಉಳಿಸುವ ಮೂಲಕ ತಪ್ಪುಗಳನ್ನ ಒಪ್ಪಿಕೊಂಡಿದ್ದಾರೆ.

ಸರ್ಜಿಗೆ ಬಿಜೆಪಿ ಅರ್ಥವಾಗಿಲ್ಲ. ನಾನು ಫಲನುಭವ ಎಂದಿದ್ದಾರೆ. 1994 ರಲ್ಲಿ ಹೊಸಮಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಒಬ್ಬ ಗ್ರಾಪಂ ಸದಸ್ನೂ ಇರದ ಸಂದರ್ಭದಲ್ಲಿ ಸ್ಪರ್ಧಿಸಿರುವೆ. ಗೆದ್ದಿರುವೆ. ಲೋಕಸಭಾದಲ್ಲಿ ಬಿಎಸ್ ವೈ, ಆನಂದರಾವ್, ಶಂಕರಮೂರ್ತಿ ಅವರು ಬಂಗಾರಪ್ಪನವರ ವಿರುದ್ಧ ಸೋತಿದ್ದರು. ನಾನು ಮೊದಲಬಾರಿಗೆ 1998 ರಲ್ಲಿ ಬಂಗಾರಪ್ಪನವರನ್ನ ಸೋಲಿಸಿ ಗೆದ್ದಿರುವೆ ಎಂದರು.

ಬರಗಾಲದಲ್ಲಿ ಬಿತ್ತಿ ಬೆಳೆದುಕೊಂಡು ಬಂದವನು. ಭದ್ರಾವತಿಯಲ್ಲಿ ಸ್ಪರ್ಧಿಸಿ ಸೋತಿರುವೆ. ನೀರಿಲ್ಲದ ಜಾಗದಲ್ಲಿ ನನಗೆ ಜಮೀನು ಕೊಟ್ಟಿದ್ದು, ಸರ್ಜಿ ಬಂದಿದ್ದು ನೀರಾವರಿ ಜಮೀನಿಗೆ. ಡಾ.ಸರ್ಜಿ ತಿಳಿಯದೆ ಕಾಮೆಂಟ್ಸ್ ಮಾಡಬಾರದು. ಅವರು ಇನ್ನೂ ರಾಜಕೀಯದಲ್ಲಿ ರಾಗಿ ಬೀಸಬೇಕು ಎಂದರು.

ಒಂದು ವಿಡಿಯೋ ವೈರಲ್ ಆಗ್ತಾ ಇದೆ. ಕೆಲವರು ಮಜಾ ಮಾಡ್ತಾಇದ್ದಾರೆ. ಬಿಎಸ್ ವೈ ಅಪ್ಪಮಕ್ಕಳ ಬಗ್ಗೆ ಬೈದಿದ್ದರು. ಬಿಎಸ್ ವೈ ಸಹ ಬಿಜೆಪಿ ವಿರುದ್ಧ ಮಾತನಾಡಿದ್ರು. ಮಾಜಿ ಸಿಎಂ ಕುಮಾರ ಸ್ವಾಮಿ ಸಹ ನರೇಂದ್ರ ಮೋದಿಯನ್ನ ಬೈದಿದ್ದರು. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಬೈದಿರುವುದನ್ನ ವೈರಲ್ ಮಾಡುದ್ರೆ ಆನಂದ ಪಡಬೇಕಿದೆ ಎಂದರು.

ಅವರು ಎಂಜಾಯ್ ಮೆಂಟ್ ನ್ನ ಬಿಜೆಪಿ ತೆಗೆದುಕೊಳ್ತಾ ಇದ್ದಾರೆ. ಅಂತಿಮ ನಗು ನಮ್ಮದೆ. ಜೂ. 04 ರಂದು ನಾವು ಗೆಲ್ಲುವ ಮೂಲಕ ಉತ್ತರ ಸಿಗಲಿದೆ ಎಂದರು.

ಎಸ್ಪಿ ದಿನೇಶ್ ಅಭ್ಯರ್ಥಿಯನ್ನ ಬಗೆಹರಿಸಲಾಗುವುದು ಎಂದು ಹೇಳಿದ್ದರು. ರಾಜ್ಯಾಧ್ಯಕ್ಷರ ಗಮನಕ್ಕೆ ಇಲ್ಲ ಎಂದಿದ್ದಾರೆ. ಅದಕ್ಕೆ ಉತ್ತರಿಸೊಲ್ಲ. ಆರಂಭದಲ್ಲಿ ಬೇಸರವಾಗುತ್ತೆ. ನನ್ನ ಜೊತೆ ಅವರನ್ನೂ ಕರೆದುಕೊಂಡು ಹೋಗುವೆ ಎಂದರು.

ಇದನ್ನೂ ಓದಿ-https://suddilive.in/archives/11942

Related Articles

Leave a Reply

Your email address will not be published. Required fields are marked *

Back to top button