ಸ್ಥಳೀಯ ಸುದ್ದಿಗಳು

ಭದ್ರಾವತಿಯ ದಾನವಾಡಿ ರಂಗನಾಥ ಸ್ವಾಮಿ ದೇವರ ಪ್ರಸಾದದ ಬಗ್ಗೆ ಈಶ್ವರಪ್ಪ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಎಲ್ಲಾ ತಾಲೂಕು ಪ್ರವಾಸ ಮುಗಿಸಿರುವೆ.ನಾಳೆ ಬೆಳೆಗ್ಗಿಂದ ಸಂಜೆ ವರೆಗೆ ಬೈಂದೂರಿಗೆ ಹೋಗುವೆ. ನಿರೀಕ್ಷೆಗೆ ಮೀರಿ ಜನ ನನಗೆ ಬೆಂಬಲ ದೊರೆಯುತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ವೀರಶೈವ ಸಮಾಜ ನನ್ನ ಬೆನ್ನಿಗೆ ನಿಂತಿದೆ. ರಾಘವೇಂದ್ರ ನನ್ನ ಬೆಂಬಲ ಎನ್ನುತ್ತಿದ್ದಾರೆ.‌ಸಹೋದರಿ ಗೀತ ಈಡಿಗರು ಸಹ ನನಗೆ ಬೆಂಬಲ ಸಿಗುತ್ತಿದೆ ಎನ್ನುತ್ತಿದ್ದಾರೆ. ಆದರೆ ನನಗೆ ಹೋದಕಡೆ ಎಲ್ಲಾ ಅಣ್ಣ ತಮ್ಮನ ರೀತಿ ನನ್ನನ್ನ ಪರಿಗಣಿಸುತ್ತಿದ್ದಾರೆ. ಸ್ಪಂಧನೆಗೆ ಜನ ಮರುಸ್ಪಂಧನೆ ನ ಅಡುವುದಾಗಿ ಜನ ಹೇಳುತ್ತಿದ್ದಾರೆ.

ತುಂಬ ಅನ್ಯಾಯವಾಗಿದೆ. ಅನ್ಯಾಯಕ್ಕೆ ನ್ಯಾಯಕೊಡಿಸುವುದಾಗಿ ಜನ ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಹಿಂದೂತ್ವದ ಬಗ್ಗೆ ಯಾರೂ ಸ್ಪಂಧಿಸುತ್ತಿಲ್ಲ ಎಂಬುದು ಜನರಲ್ಲಿದೆ. ಹಿಂದೂ ಹುಲಿಯನ್ನ ಕಳೆದುಕೊಳ್ಳಲು ಸಿದ್ದರಿಲ್ಲ ಎಂದು ಸಹ ಸ್ಪಂಧಿಸುತ್ತಿದ್ದಾರೆ.

ತೀರ್ಥಹಳ್ಳಿಯ ಅಂಬು ತೀರ್ಥದಲ್ಲಿ, ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆ ನಡೆಯಲಿದೆ. ಏ.5 ರಂದು ಬೆಳಿಗ್ಗೆ 11 ರಂದು ನಡೆಯಲಿದೆ. ನಾಳೆ ಬೈಂದೂರಿಗೆ ತೆರಳುವುದಾಗಿ ಹೇಳಿದರು. ನನ್ನ ಸ್ಪರ್ಧೆ ಖಚಿತ ಎಂದು ನೂರು ಬಾರಿ ಹೇಳಿದ್ದೇನೆ.

ಮೋದಿ ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂದ ಮೇಲೆ ಈಶ್ವರಪ್ಪನವರ ಸ್ಪರ್ಧೆ ಖಚಿತ ಎಂದು ಜನ‌ ಮಾತನಾಡುತ್ತಿದ್ದಾರೆ. ಭದ್ರಾವತಿಯ ದಾನವಾಡಿಗೆ ಭೇಟಿ ನೀಡಿದಾಗ ರಂಗನಾಥ ಸ್ವಾಮಿ ದೇವಸ್ಥಾನಕ್ಜೆ ಹೋಗಿದ್ದೆ. ಪ್ರಸಾದ ಆದರೆ ಕೆಲಸ ಆಗುತ್ತೆ ಎಂಬ ನಂಬಿಕೆ ಇದೆ. ಹೋಗುವ ಮುಂಚೆ ದಿಗಿಲಾಗಿತ್ತು. ಪ್ರಸಾದ ವಾಗದಿದ್ದರೆಕಥೆ ಎನು ಎಂದು ಹೆದರಿಕೆ ಆಗಿತ್ತು.

ಎರಡು ನಿಮಿಷವಾದರೂ ಪ್ರಸಾದ ವಾಗಲಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸುವುದು ರಂಗನಾಥನಿಗೂ ಅನುಮಾನವಾಗಿತ್ತು. ಪ್ರಾರ್ಥಿಸಿದಾಗ ರಂಗನಾಥ ಸ್ವಾಮಿಯ ಪ್ರಸಾದವಾಗಿದೆ. ಸ್ಪರ್ಧೆ ಮತ್ತು ಗೆಲುವು ಎರಡೂ ಸತ್ಯ ಎಂದರು.

ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಏ. 12 ರಂದು 25 ಸಾವಿರ ಜನರೊಂದಿಗೆ ನಾಮಪತ್ರ ಸಲ್ಲಿಸಲಾಗುವುದಾಗಿ ಹೇಳಿದರು.‌

ಇದನ್ನೂ ಓದಿ-https://suddilive.in/archives/11726

Related Articles

Leave a Reply

Your email address will not be published. Required fields are marked *

Back to top button