ರಾಷ್ಟ್ರೀಯ ಸುದ್ದಿಗಳು

ಜ.26 ಕ್ಕೆ ಲೋಕಾರ್ಪಣೆ ಆಗಲಿದೆಯಾ ವಿದ್ಯಾನಗರ ವರ್ತುಲ ಸೇತುವೆ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ವಿದ್ಯಾನಗರದ ವರ್ತುಲ ಆಕಾರದ ರೈಲ್ವೆ ಫ್ಲೈ ಓವರ್ ಕಾಮಗಾರಿ ಪೂರ್ಣ ಹಂತಕ್ಕೆ ಬಂದು ತಲುಪಿದೆ. ಪೈಟಿಂಗ್, ಡಾಂಬರೀಕರಣ, ಸೆಂಟರಿಂಗ್ ಮೊದಲಾದ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದಿದೆ.

ಇವೆಲ್ಲದರ ನಡುವೆ ಸೇತುವೆ ಜನವರಿ 26 ಕ್ಕೆ ವಿದ್ಯಾನಗರದ ರೈಲ್ವೆ ಮೇಲು ಸೇತುವೆ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಈ  ಹಿನ್ನಲೆಯಲ್ಲಿ ಸಂಸದ ರಾಘವೇಂದ್ರ ಇಂದು ಬೆಳಿಗ್ಗೆ ಮೇಲ್ಸೇತುವೆ ವೀಕ್ಷಣೆ ಮಾಡಿದ್ದಾರೆ. ಮೇಲ್ಸೇತುವೆ ಬಗ್ಗೆ ಅಧಿಕಾರಿಗಳು ಜ. 26 ಕ್ಕೆ ಲೋಕಾರ್ಪಣೆ ಮಾಡಲು ಸೂಚಿಸಿದ್ದಾರೆ.

ಸಚಿವ ನಿತಿನ್ ಗಡ್ಕರಿ ಬರುವ ನಿರೀಕ್ಷೆ

ಫೆಬ್ರವರಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗಕ್ಕೆ ಬರುವ ನಿರೀಕ್ಷೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಗಡ್ಕರಿಯವರು 2000 ಕೋಟಿ ಕಾಮಗಾರಿ ನೀಡಿದ್ದಾರೆ. ಸಿಗಂದೂರು ಸೇತುವೆ, ವಿದ್ಯಾನಗರದ ವರ್ತುಲ ಸೇತುವೆ ಸೇರಿದಂತೆ ಜಿಲ್ಲೆಯಾದ್ಯಂತ ಕೇಂದ್ರ ಭೂಸಾರಿಗೆ, ಬಂದರು ಮತ್ತು ಒಳನಾಡು ಇಲಾಖೆ ನೀಡಿದ್ದು ಫೆಬ್ರರಿಯಲ್ಲಿ ಸಚಿವರು ಉದ್ಘಾಟನೆಗೆ ಬರುವ ನಿರೀಕ್ಷೆ ಇದೆ.

ಸಚಿವರು ಬರುವ ಮುಂಚೆ ವರ್ತುಲ ಸೇತುವೆಯ ಸೆಂಟರಿಂಗ್ ಕಾಮಗಾರಿ ಬಹುಮುಖ್ಯವಾಗಿದೆ. ಸೆಂಟರಿಂಗ್ ಜ.12 ರಿಂದ ನಡೆಲುದೆ ಸೆಂಟರಿಂಗ್ 14 ದಿನಗಳ ವರೆಗೆ ನಡೆಯಲಿದ್ದು ಸರಿಯಾಗಿ ಜ.26 ಕ್ಕೆ ಗಣರಾಜ್ಯ ದಿನಾಚರಣೆಯ ದಿನ ಉದ್ಘಾಟನೆಗೆ ಸಿದ್ದತೆ ಆಗಲಿದೆ. ಸಚಿವರು ಫೆಬ್ರವರಿಗೆ ಬರುವ ನಿರೀಕ್ಷೆ ಇದ್ದರು. ಜ. 26 ಕ್ಕೆ ವಾಹನಗ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ.

ವಿಶಿಷ್ಟ ಫ್ಲೈ‌ಓವರ್

ಫ್ಲೈ ಓವರ್ ವರ್ತುಲಾಕಾರದಿಂದ ಕೂಡಿರುವುದು ವಿಶಿಷ್ಠತೆಗಳಲ್ಲೊಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಯಾಗಿದ್ದು, 43 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು 920 ಮೀಟರ್ ಉದ್ದವಿದೆ. ದೇಶದಲ್ಲಿ ಅತ್ಯುತ್ತಮ ಸೇತುವೆಯಾಗಿದ್ದು ಹೆದ್ದಾರಿ ಇಂಜಿನಿಯರ್ ಗಳು ತರಬೇತಿಗಾಗಿ ಈಗಾಗಲೇ ಭೇಟಿ ನೀಡಿರುವುದು ಈ ಸೇತುವೆ ವಿಶಿಷ್ಟವಾಗಿದೆ.

ಇದನ್ನೂ ಓದಿ-https://suddilive.in/archives/6352

Related Articles

Leave a Reply

Your email address will not be published. Required fields are marked *

Back to top button