ಸ್ಥಳೀಯ ಸುದ್ದಿಗಳು

ಗೀತಾ ಶಿವರಾಜ್ ಕುಮಾರ್ ನಮ್ಮ ಪಕ್ಷದ ಅಭ್ಯರ್ಥಿ‌ ಗೆಲ್ಲುಸ್ತೀವಿ-ಮಂಜುನಾಥ್ ಗೌಡ

ಸುದ್ದಿಲೈವ್/ಶಿವಮೊಗ್ಗ

ಬಂಗಾರಪ್ಪನವರ ಅವಧಿಯಲ್ಲಿ‌ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ಮಾಣವಾಯಿತು. ಮಧ್ಯಲ್ಲಿ ನಿರೀಕ್ಷೆಯ ಕೆಲಸ ಆಗಿರಲಿಲ್ಲ‌. ಪ್ರತಿವರ್ಷ 40 ಕೋಟಿ ಹಣ ತೆಗೆದಿಲಾಗುತ್ತದೆ ಎಂದು ಮಂಡಳಿಯ ನೂತನ ಅಧ್ಯಕ್ಷ ಮಂಜುನಾಥ್ ಗೌಡ ತಿಳಿಸಿದರು.‌

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ವಿಶೇಷ ಯೋಜನೆ ನಿರ್ಮಿಸಿದ್ದಾರೆ. 74 ತಾಲೂಕು 13 ಜಿಲ್ಲೆ, 13.ಶಾಸಕರು, 26 ಪರಿಷತ್ ಜನ ಸೇರಿ 135 ಜನ ಮಂಡಳಿಯ ಸದಸ್ಯರಿದ್ದಾರೆ. ಜೆಹೆಚ್ ಪಟೇಲ್ ಅವರ ಕಾಲದಲ್ಲಿ ಮಂಡಳಿಗೆ ಹೆಚ್ಚಿನ ಒತ್ತು ದೊರೆತಿತ್ತು. ಈ ಬಾರಿ ಸಿದ್ದರಾಮಯ್ಯರಿಂದ ಹೆಚ್ಚಿನ ಕೆಲಸವಾಗುತ್ತಿದೆ ಎಂದರು

ಕಳೆದ ಬಾರಿ ಬಜೆಟ್ ನಲ್ಲಿ 40 ಕೋಟಿ ಇತ್ತು.‌ ಈ ಬಾರಿ ವಿಶೇಷ ಅನುದಾನ ನೀಡಲು ಯೋಚಿಸಿ ಸರ್ಕಾರದ ಮೂಲಕ ನಬಾರ್ಡ್ ಗೆ 195 ಕೋಟಿ ನಿಗದಿ ಪಡಿಸಲಾಗಿದೆ. 33 ಹ್ಯಾಂಗಿಂಗ್ ಬ್ರಿಡ್ಜ್, 60 ಕೋಟಿಯಲ್ಲಿ ಮಿನಿ ಹ್ಯಾಂಗಿಂಗ್ ಬ್ರಿಡ್ಜ್, 60 ಕೋಟಿಯಲ್ಲಿ ಕಾಲುಸಂಕಗಳ ನಿರ್ಮಿಸಲು ಯೋಜನೆ ಮಾಡಲಾಗಿದೆ. ಜೂನ್ ತಿಂಗಳಲ್ಲಿ ಚಾಲನೆ ಸಿಗಲಿದೆ ಎಂದರು.

ತೀರ್ಥಹಳ್ಳಿಯಲ್ಲಿ ನೂರಾರು ಕಾಲಸಂಕ ನಿರ್ಮಿಸಬೇಕಿದೆ. ಸಂಪರ್ಕ ರಸ್ತೆಗಳಾಗಬೇಕಿದೆ. ಬೃಹತ್ ನಿರಾವರಿ ಯೋಜನೆಗಾಗಿ ಒತ್ತು ನೀಡಲು ಚೆಕ್ ಡ್ಯಾಂ ನಿರ್ಮಿಸಲು ಯೋಚಿಸಲಾಗಿದೆ. ಬೇರೆ ಬೇರೆ ಇಲಾಖೆಗಳು ರಸ್ತೆ ನಿರ್ಮಿಸಲಿದೆ. ಅವುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಮಾಡಲಾಗುತ್ತಿದೆ .

ತೀರ್ಥಹಳ್ಳಿಯಲ್ಲಿ ತುಂಗನದಿಗೆ ಮಣ್ಣು ಕುಸಿಯದಂತೆ ತಡೆಯಲು ತಡೆಗೋಡೆ ನಿರ್ಮಿಸಲು ಯೋಜಿಸಲಾಗಿದೆ. ನಬಾರ್ಡ್ ಗೆ 200 ಕೋಟಿ ಹಣ ಬಳಸಿಕೊಂಡು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಸಾಲದ ರೂಪದಲ್ಲಿ ನಬಾರ್ಡ್ ಗೆ ಸರ್ಕಾರ ಕೊಡುತ್ತದೆ. ಅದನ್ನ ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಮೈನಿಂಗ್ ನಿಂದ ಪರಿಸರಕ್ಕೆ ಹಾನಿಯಾಗಿದೆ. ಪುನರ್ ಪರಿಸರ ನಿರ್ಮಾಣ ಮಾಡಲು ಯೋಚಿಸಲಾಗುತ್ತಿದೆ ಎಂದರು.

ಕರಾವಳಿ ಅಭಿವೃದ್ಧಿ ನಿಗಮ ಮತ್ತು‌ಬಯಲುಸಞಿಮೆ ಅಭಿವೃದ್ಧಿ ನಿಗಮ ನಿರ್ಮಾಣವಾಗಿದೆ.‌ ಅದರಿಂದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ಮಾಣದಲ್ಲಿ ಹೆಚ್ಚಿನ ಅನುದಾನ ಉಳಿಯಲಿದೆ. ಇದರಿಂದ ಹೆಚ್ಚಿನ ಕೆಲಸ ನಡೆಯಲಿದೆ ಎಂದರು.‌

ಗೀತಾ ಶಿರಾಜ್ ಕುಮಾರ್ ನಮ್ಮ ಪಕ್ಷದ ಅಭ್ಯರ್ಥಿ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ನೇಮಿಸಿದ್ದಾರೆ. ಅವರು ಕ್ಷೇತ್ರದಲ್ಲಿ ಇಲ್ಲ ಎಂಬ ಆರೋಪವಿದೆ. ಆಯಿತು ಇಲ್ಲಿ ಇದ್ದವರು ಏನು ಮಾಡಿದರು.‌ ಕಳೆದ ವರ್ಷ ಚಾಲಿ ಅಡಿಜೆ 25 ಸಾವಿರ ಕ್ವಿಂಟಾಲ್ ಗೆ ಇತ್ತು. ಈ ಬಾರಿ 15 ಸಾವಿರ ರೂ.ಗೆ ಕುಸಿದಿದೆ. ಹೊರರಾಷ್ಟ್ರಗಳ ಅಡಿಕೆ ಆಮದು ಇದಕ್ಕೆ ಕಾರಣ ಸಂಸದರು ಇಲ್ಲಿ ಇದ್ದುಕೊಂಡು ಏನು ಮಾಡಿದರು ಎಂದು ದೂರಿದರು.

ಇಡೀ ಅರಣ್ಯ ಇಲಾಖೆ ಹಾಳುಮಾಡಿದ್ದು ಅರಣ್ಯ ಇಲಾಖೆಯವರು. ಅಕೇಶಿಯಾವನ್ನ ಅರಣ್ಯ ಇಲಾಖೆಯವರು ನೆಡುತ್ತಿದ್ದಾರೆ. ಸುಲಭವಾಗಿ ಬೆಳೆಯುತ್ತದೆ. ಮತ್ತಿ, ರಂಜ, ನೇಲೆ ಸಸಿ ನೆಡದರೆ ಕೆಲಸ ಹೆಚ್ಚು ಆಗುತ್ತದೆ. ಇದರಿಂದ ಮಂಗಗಳು ಬರೊಲ್ಲ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದರು

ಇದನ್ನೂ ಓದಿ-https://suddilive.in/archives/10491

Related Articles

Leave a Reply

Your email address will not be published. Required fields are marked *

Back to top button