ನಗರ‌ ಸುದ್ದಿಗಳು

ಕರಾಟೆ ವಿನೋದ್ ವಿರುದ್ಧ ದೂರು

ಸುದ್ದಿಲೈವ್/ಶಿವಮೊಗ್ಗ

ಕರಾಟೆ ಮತ್ತು ಜುಡೋ ತರಬೇತಿದಾರನಿಗೆ ಪತ್ರಕರ್ತನ ಸೋಗಿನಲ್ಲಿ ಬಂದು ಧಮಕಿ ಹಾಕಿರುವ ಘಟನೆ ಈಗ ಎಸ್ಪಿ ಕಚೇರಿಯ ಮೆಟ್ಟಿಲೇರುತ್ತಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಧಮಕಿಗೆ ಒಳಗಾದ ಸಂತ್ರಸ್ತ್ರ ಮಿಥುನ್ ಮಾತನಾಡಿ,   ಜಿಲ್ಲಾ ಕರಾಟೆ ಅಸೋಸಿಯೇಷ್ ಮಟ್ಟಹಾಕಬೇಕು ಎಂಬ ಹುನ್ನಾರ ನಡೆದಿದೆ. ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಈ ಬಗ್ಗೆ  ದೂರು ನೀಡಲಾಗುವುದು. ನಾನು ಎನ್ ಐಎಸ್ ತರಬೇತಿ ಪಡೆದವನಾಗಿದ್ದೇನೆ ಎಂದರು.

ಉದ್ದೇಶ ಪೂರಕವಾಗಿ ಪ್ರಿಂಟ್ ಮಾಡಿಸಿ.  ನಾನು  ಕೆಲಸ ಮಾಡುತ್ತಿರುವ ಜಾಗದಲ್ಲಿ ಒಂದು ಪ್ರಿಂಟ್ ಮಾಡಿಸಿ ವಾಟ್ಸಪ್ ನಲ್ಲಿ ಶಾಲಾ ಆಡಳಿತ ಮಂಡಳಿಗೆ ಕಳುಹಿಸಲಾಗಿದೆ. ಮನೆಗೆ ಹುಡುಕಿಕೊಂಡು ಬಂದಿದ್ದಾರೆ. ಸತ್ಯಸಂಗತಿ ಪತ್ರಿಕೆಯವರು ಎಂದು ಹೇಳಿಕೊಂಡು ಓಡಾಡುವ ವಿನೋದ್ ಎಂಬುವರು ದಬ್ಬಾಳಿಕೆ ನಡೆಸಿದ್ದಾರೆ. ಇವರೂ ಸಹ ಕರಾಟೆ ಅಸೋಸಿಯೇಷನ್ ಒಂದನ್ನ ನಡೆಸುತ್ತಿದ್ದು ದ್ವೇಷ ಸಾಧಿಸುತ್ತಿದ್ದಾರೆ ಎಂದರು.

ಏಕಲವ್ಯ ಸಂಸ್ಥೆಯಿಂದ ಉತ್ತಮ ಕ್ರೀಡಾಪಟುಗಳನ್ನ ತಯಾರಿಸುತ್ತಿದ್ದೇವೆ. ನನ್ನ ವಿರುದ್ಧ ಕರಾಟೆಯ ಜ್ಞಾನವೇ ಇಲ್ಲ ನಾನು ದಲಿತ  ಜಾತಿ ಎಂದು ದುರ್ಬಳಕೆ ನಡೆಸುತ್ತಿರುವುದಾಗಿ ಪತ್ರಿಕೆಯಲ್ಲಿ ಪ್ರಿಂಟ್ ಮಾಡಿಸಿದ್ದಾರೆ.  2012 ರಿಂದ ಕರಾಟೆ ನಡೆಸುತ್ತಿದ್ದಾನೆ. ಯಾವ ಜಾತಿ ಬಳಕೆ ಮಾಡಿಕೊಂಡಿಲ್ಲ. ನನ್ನ ತೇಜೋವದೆ ಮಾಡಲಾಗಿದೆ ಎಂದು ದೂರಿದರು.

ಸರ್ಕಾರಿ ಪ್ರೌಢಶಾಲೆಯಲ್ಲಿ ಕೋಚಿಂಗ್ ವಿಚಾರದಲ್ಲಿ ನಡೆದ ಘಟನೆ ದೊಡ್ಡದಾಗಿದೆ 10 ದಿನ ಮಕ್ಕಳಿಗೆ ತರಬೇತಿ ನೀಡಲು ತರಬೇತಿದಾರರ ಅರ್ಜಿ ಸಲ್ಲಿಕೆ ವಿಚಾರದಲ್ಲಿ ಮಿಥುನ್ ವಿರುದ್ಧ ವಿನೋದ್ ತೇಜೋವಧೆ ಮಾಡುತ್ತಿದ್ದಾರೆ. ವಿನೋದ್ ಪತ್ನಿಗೆ ಧಮಕಿ ಹಾಕಿದ್ದಾರೆ. ಈ ಧಮಕಿ ವಿಚಾರದಲ್ಲಿ ಎಸ್ಪಿಗೆ ದೂರು ನೀಡುತ್ತಿರುವುದಾಗಿ ಆಗ್ರಹಿಸಿದರು.‌

ಈ ತರಬೇತಿ ವಿಚಾರದಲ್ಲಿ ಒಂದು ಶಾಲೆಗೆ ತಲಾ 3000 ಸಾವಿರ ರೂ. ಹಣ ಸರ್ಕಾರ ನೀಡುತ್ತದೆ. ಜಿಲ್ಲೆಯಲ್ಲಿ ಅನೇಕ ಶಾಲೆಗಳು ಬರುವುದರಿಂದ ಈಹುದ್ದೆಗೆ ಬೇಡಿಕೆ ಬಂದಿದೆ.

ಇದನ್ನೂ ಓದಿ-https://suddilive.in/archives/11159

Related Articles

Leave a Reply

Your email address will not be published. Required fields are marked *

Back to top button