ಸ್ಥಳೀಯ ಸುದ್ದಿಗಳು

ತಪ್ಪು ಹುಡುಕುವ ಕೆಲಸವನ್ನ ಮೊದಲು ನಿಲ್ಸಿ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆಗೆ 50 ರೂ ಫೀಜ್ ಕಲೆಕ್ಷನ್ ಮಾಡುತ್ತಿರುವ ಬಗ್ಗೆ ಶಿಕ್ಷಣ ಮತ್ತು ಸಾಕ್ಷರತ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ‌

ಬಿಜೆಪಿ ಸರಕಾರ ಇದ್ದಾಗ ಪರೀಕ್ಷಾ ಶುಲ್ಕ ಆರಂಭವಾಗಿತ್ತು. ಈ ಮೊದಲು ಪರೀಕ್ಷಾ ಶುಲ್ಕ 60 ರೂಪಾಯಿ ಇತ್ತು.ನಾವು 10 ರೂಪಾಯಿ ಕಡಿಮೆ ಮಾಡಿದ್ದೇವೆ. ಗೃಹಲಕ್ಷ್ಮಿ 2 ಸಾವಿರ ಕೊಟ್ಟು, ಗೃಹ ಜ್ಯೋತಿ ಕೊಟ್ಟು, ಫ್ರೀಯಾಗಿ ಬಸ್ಸಿನಲ್ಲಿ ಓಡಾಡಿಸುತ್ತೇವೆ. ಹಿಂದಿನ ಸರಕಾರ ಪರೀಕ್ಷಾ ಶುಲ್ಕ 60 ರೂ ಮಾಡಿದ್ದನ್ನು 50 ರೂಪಾಯಿ ಮಾಡಿದ್ದೇವೆ. ಮುಂದೆ ಏನಾದರೂ ಇನ್ನೂ ಅನುಕೂಲ ಆದ್ರೆ ಕಡಿಮೆ ಮಾಡ್ತೀವಿ ಎಂದರು.

ತಪ್ಪು ಹುಡುಕುವ ಕೆಲಸವನ್ನು ನಿಲ್ಲಿಸಬೇಕು.ಇದು ಉಪಯೋಗ ‌ಇಲ್ಲ, ಅವರಿಗೆ ಉತ್ತರ ಕೊಡದಿರೋದು ಒಳ್ಳೆಯದು.ಕುಮಾರಸ್ವಾಮಿ ಅವರು ಪ್ರಶ್ನೆ ಕೇಳುವ ಮೊದಲು ಸ್ವಲ್ಪ ತಿಳಿದುಕೊಳ್ಳೋದು ಒಳ್ಳೆಯದು. ಇಲ್ಲದಿರುವುದನ್ನು ಹುಡುಕಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದರು.

ವಿರೋಧ ಪಕ್ಷದವರಂತಹ ದಡ್ಡರು ಯಾರು ಇಲ್ಲ. ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆ ವಿಜ್ಞಾನ ವಿಷಯ ಶುಕ್ರವಾರ ಮಧ್ಯಾಹ್ನ ನಡೆಸುವ ವಿಚಾರದ ಬಗ್ಗೆಯೂ ಮಾತನಾಡಿದ ಅವರು ಬಿಜೆಪಿಯವರು ಎಲ್ಲವನ್ನು ಜೋಡಣೆ ಮಾಡುವ ಕೆಲಸ ಮಾಡ್ತಾರೆ. ಕೆಲವು ಧರ್ಮಕ್ಕೆ ಒಲವು ತೋರಿಸುವ ಕೆಲಸ ಮಾಡಿದ್ದಾರೆ ಎಂಬ ಆಪಾದನೆ ಮಾಡಿದ್ದಾರೆ ಕಳ್ಳ‌ನಿಗೆ ಒಂದು ಸುಳ್ಳು ನೆಪ ಬೇಕು ಅಂತಾರಲ್ಲ ಹಾಗೆ ಬಿಜೆಪಿಯವರ ಅಂಗ ಸಂಸ್ಥೆ ಆರ್ ಎಸ್ ಎಸ್ ನವರ ಕೆಲಸ ಇದು ಎಂದು ದೂರಿದರು.

ಆ ದಿನ ಪಿಯುಸಿ ಪರೀಕ್ಷೆ ಆರಂಭವಾಗ್ತದೆ. 1 ನೇ ತಾರೀಖು ಬೆಳಗ್ಗೆ ಪಿಯುಸಿ ಪರೀಕ್ಷೆ ಇರೋದ್ರಿಂದ, ಬೆಳಗ್ಗೆ ಅವರಿಗಿದೆ. ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ ಅಲ್ಲ, ಪೂರ್ವ ಸಿದ್ದತಾ ಪರೀಕ್ಷೆ ಆಗಿದ್ದರಿಂದ ಮಧ್ಯಾಹ್ನ ಮಾಡ್ತಿದ್ದೇವೆ. ಒಂದು ದಿನ ಮುಂದೆ ಹಾಕಬಹುದು ಅಂತಾ ಹೇಳಬಹುದು. ಒಂದು ದಿನ ಮುಂದೆ ಹಾಕಿದ್ರೆ ಮೂರು‌ ಮೂರು ಪರೀಕ್ಷೆ ಇರೋದ್ರಿಂದ ಸಮಸ್ಯೆ ಆಗ್ತದೆ. ಇಂತಹ ದುರುದ್ದೇಶ, ಯೋಚನೆ ಇವರಿಗೆ ಮಾತ್ರ ಸಾಧ್ಯ ಎಂದರು.

ನೀವು ಏನಾದರೂ ಅಭಿವೃದ್ಧಿ ಕೆಲಸ ಮಾಡಿದ್ರೆ ಅದನ್ನು ಹೇಳಿ, ನಮ್ಮ ಸರಕಾರ ಇದೆ. ನಮ್ಮ ಮಕ್ಕಳಿಗೆ ಅನುಕೂಲ ಆಗುವ ರೀತಿಯಲ್ಲಿ ನಮಗೆ ಆಡಳಿತ ನಡೆಸಲು ಬರುತ್ತದೆ. ಅದನ್ನು ನಾವು ಮಾಡ್ತೀವಿ.ಫೆ.7 ರಂದು ಕೇಂದ್ರ ಸರಕಾರದ ವಿರುದ್ದ ದೆಹಲಿಯಲ್ಲಿ ಹೋರಾಟ ಮಾಡ್ತಿದ್ದೀವಿ. 26 ಜನನ ಇಲ್ಲಿಂದ ಗೆಲ್ಲಿಸಿಕೊಟ್ರಲ್ಲಾ ಯಾರಾದರೂ ಒಬ್ಬರಾದರೂ‌ ಕೇಂದ್ರ ಸರಕಾರದಲ್ಲಿ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.

ರಾಮನನ್ನ ತಂದು ಬೀದಿಗೆ ನಿಲ್ಲಿಸಿದರು ಇವರಿಗೆ ಮಾನ ಮರ್ಯಾದೆ ಇದೆಯಾ? ಬಂಗಾರಪ್ಪ ಅವರು 35 ವರ್ಷದ‌ ಹಿಂದೆಯೇ ರಾಮನಿಗೆ ಆರಾಧನಾ ಎನ್ನುವ ಕಾರ್ಯಕ್ರಮ ಕೊಟ್ರು. ಬಗರ್ ಹುಕುಂಗೆ ಯಾವೊಬ್ಬ ಸಂಸದ ಧ್ವನಿ ಎತ್ತಲ್ಲ. ಸರಕಾರದ ಹಣ 4 ಲಕ್ಷ ಕೋಟಿ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ಗಳು, ಮಂತ್ರಿಗಳು ಹೋಗಿ‌ ಕೇಳ್ತಾರೆ. ಹಣ ಬಿಡುಗಡೆ ಮಾಡೊಲ್ಲ. ಈಗ ಹೋಗಿ ಹೋರಾಟ ಮಾಡಬೇಕಾಗಿದೆ. ನಮ್ಮ ಸಮಸ್ಯೆಗೆ ಪರಿಹಾರ ಹೇಗೆ ಮಾಡಿಕೊಳ್ಳುತ್ತೀರಾ ಎಂದು ಗುಡುಗಿದರು.

ಯಾರಿಗಾದರೂ ತೊಂದರೆ ಆದ್ರೆ ಹೋರಾಟ ಮಾಡಲ್ವಾ?ಹಾಗಾದ್ರೆ ನಾವು ಹೋರಾಟ ಮಾಡೋದು ತಪ್ಪಾ ಇವರಿಗಂತು ಯೋಗ್ಯತೆ ‌ಇಲ್ಲ. ಮೋದಿ ಅವರ ಹೆಸರಿನಲ್ಲಿ ಮತ ಹಾಕಿಸಿಕೊಂಡರೆ ಇದೆ ಹಣೆಬರಹ ಆಗೋದು. ಜನರ ಜೊತೆ ಇದ್ದವರ ಮುಖ ನೋಡಿ ಮತ ಹಾಕಬೇಕು. ಮೋದಿ ಅವರ ಹೆಸರನ್ನು ತಗೊಂಡು‌ ಬರುತ್ತಾರಲ್ಲ ಇವರು ನಾಳೆ ಮೋದಿ ಸಹಾಯ ಮಾಡಲ್ಲ ಅನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆ ಎಂದರು.

ಅನಿವಾರ್ಯವಾಗಿ ಹೋರಾಟ ಮಾಡಬೇಕಿದೆ. ನಮ್ಮ ಕರ್ತವ್ಯ ಏನಿದೆ ಅದು ಮಾಡಬೇಕಿದೆ. ನಾನು ಕೂಡಾ ಹೋಗ್ತಿದ್ದೇನೆ. ಅಲ್ಲಿ ಹೋಗಿ ಧ್ವನಿ ಎತ್ತುತ್ತೇವೆ ಎಂದರು.

ಇದನ್ನೂ ಓದಿ-https://suddilive.in/archives/8403

Related Articles

Leave a Reply

Your email address will not be published. Required fields are marked *

Back to top button