ಸ್ಥಳೀಯ ಸುದ್ದಿಗಳು

ಮೋದಿ ಆಗಮನ ಹಿನ್ನಲೆ-ಈಶ್ವರಪ್ಪನವರ ಬಗ್ಗೆ ಹೆಚ್ಚಾಯಿತು ಆತಂಕ

ಸುದ್ದಿಲೈವ್/ಶಿವಮೊಗ್ಗ

ನರೇಂದ್ರ ಮೋದಿ ಆಗಮನಕ್ಕೆ ಇನ್ನೂ ಕೆಲವೇ ಗಂಟೆಗಳು ಬಾಕಿ ಇದೆ. ಮೋದಿಗಾಗಿ ಶಿವಮೊಗ್ಗದಲ್ಲಿ ಬಿಜೆಪಿ ಸನ್ನದ್ಧವಾಗಿದೆ. ಈ ಮಧ್ಯೆ ಮಾಜಿ ಡಿಸಿಎಂ ಈಶ್ವರಪ್ಪನವರ ನಡೆ ಬಗ್ಗೆ ಪಕ್ಷದಲ್ಲಿ ಹೆಚ್ಚಿನ ಆತಂಕ ಉಂಟಾಗಿದೆ.

ಇಂದು ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮನೆಯಲ್ಲಿ ಕುಳಿತು ಕಾರ್ಯಕ್ರಮದ ಬಗ್ಗೆ ಮಾಜಿ ಸಿಎಂ ಬಿಎಸ್ ವೈ ಮಾಹಿತಿ ಪಡೆಯುತ್ತಿದ್ದಾರೆ.

ಬೆಳಿಗ್ಗೆಯೇ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಂಸದ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈಶ್ವರಪ್ಪ ನಡೆಯ ಬಗ್ಗೆ ಮನೆಯಲ್ಲಿ ಕುಳಿತು ಬಿಎಸ್ ವೈ ಮಾಹಿತಿ ಪಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಬರುತ್ತಿರುವ ಹಿನ್ನಲೆ ಈಶ್ವರಪ್ಪ ನಿರ್ಧಾರ ಬದಲಿಸುವ ನಿರೀಕ್ಷೆಯಲ್ಲಿ ಬಿಎಸ್ ವೈ ಇದ್ದಾರೆ. ನಿರೀಕ್ಷೆ ಹುಸಿಯಾಗಿದ್ದರಿಂದ ಆತಂಕದಲ್ಲಿಯೂ ಇದ್ದಾರೆ ಎಂಬ ಮಾಹಿತಿ ಇದೆ.

ಬೆಳಿಗ್ಗೆಯಿಂದಲೇ ಬಿಎಸ್ ವೈ ಮನೆಗೆ ಪಕ್ಷದ ಹಲವು ಮುಖಂಡರು ಭೇಟಿ ನೀಡುತ್ತಿರುವುದಾಗಿ ತಿಳಿದು ಬಮದಿದೆ. ಈ ನಡುವೆ ಈಶ್ವರಪ್ಪನವರು ಛಲಬಿಡುತ್ತಿಲ್ಲ. ಸ್ಪರ್ಧೆ ಮಢಿಯೇ ತೀರುವುದಾಗಿ ಸ್ಪಷ್ಟಪಡಿಇದ್ದಾರೆ.

ಇಂದು ಬೆಳಿಗ್ಗೆ ಈಶ್ವರಪ್ಪ ಹಲವು ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಜೊತೆ ಚರ್ಚೆ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಈಶ್ವರಪ್ಪ ನನಗೆ ಮೋದಿ ಫೋನ್ ಮಾಡೊಲ್ಲ. ನಾನು ಚುನಾವಣೆಯಲ್ಲಿ ಗೆದ್ದು ಲೋಕಸಭೆಯಲ್ಲಿ ಮೋದಿ ಕೈ ಎತ್ತುವುದಾಗಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಮಾತನಾಡಿ, ಕೆ ಎಸ್ ಈಶ್ವರಪ್ಪ ಮುನಿಸು ಸರಿಯಾಗಲಿದೆ. ಎಲ್ಲವನ್ನು ಸರಿಪಡಿಸುವ ಕೆಲಸ ವರಿಷ್ಠರು ಮಾಡುತ್ತಾರೆ.
ಯಡಿಯೂರಪ್ಪ ನವರ ಫ್ಯಾಮಿಲಿ ಬಗ್ಗೆ ಮಾತನಾಡುವುದು ಅರ್ಥಹೀನಾ. ಯಡಿಯೂರಪ್ಪ ಸೈಕಲ್ ನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟಿದವರು ಎಂದು ತಿಳಿಸಿದ್ದಾರೆ.

ಕೋಲಾರ ಬಿಜೆಪಿಗೆ ಬಿಟ್ಟು ಕೊಡುವ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ.
ಚುನಾವಣೆ ಮುಗಿದ ಮೇಲೆ ಗೊತ್ತಾಗಲಿದೆ ಯಡಿಯೂರಪ್ಪ ನವರು ಕುತ್ತಿಗೆ ಹಿಸುಕಿದ್ದಾರೋ ಇಲ್ಲ ಎತ್ತರಕ್ಕೆ ಬೆಳೆಸಿದ್ದಾರೋ ಎಂದು ಸಾಮೂಹಿಕ ವಾಗಿ ಚರ್ಚೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಇದನ್ನೂ ಓದಿ-https://suddilive.in/archives/10955

Related Articles

Leave a Reply

Your email address will not be published. Required fields are marked *

Back to top button