ಸ್ಥಳೀಯ ಸುದ್ದಿಗಳು

ಗೀತಾ ಶಿವರಾಜ್ ಕುಮಾರ್ ಗೆಲವು ನಿಶ್ಚಿತ-ಆಯನೂರು ವಿಶ್ವಾಸ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷದಿಂದ ಗೀತಾ ಶಿವರಾಜ್ ಕುಮಾರ್ ಮತ್ತು ಬಿಜೆಪಿಯಿಂದ ಬಿ.ವೈ.ರಾಘವೇಂದ್ರರ ಹೆಸರು ಘೋಷಿಸಲಾಗಿದೆ.

ಶಿವಮೊಗ್ಗ ಕ್ಷೇತ್ರದಲ್ಲಿರುವ ಬಿ.ವೈ.ರಾಘವೇಂದ್ರ ಬಹುತೇಕ ಸಮಾವೇಶಗಳನ್ನ ಚುನಾವಣೆ ನಿಮಿತ್ತ ನಡೆಸಿ, ಎರಡನೇ ಸುತ್ತಿನ ಚುನಾವಣೆ ಪ್ರಚಾರಕ್ಕೆ ಅಣಿಯಾಗಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರ ಹೆಸರು ಪ್ರಕಟವಾಗಿ ವಾರ ಕಳೆದಿದೆ. ವಾರದಿಂದ ಗೀತಾ ಶಿವರಾಜ್ ಕುಮಾರ್ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ.

ಆದರೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿ ಆಗಮನಕ್ಕೆ ರಂಗ ಸಜ್ಜಿಕೆ ಸಿದ್ದವಾಗುತ್ತಿದೆ ಎಂದಿದ್ದಾರೆ. ಈಗಾಗಲೇ ಎರಡು ಬಾರಿ ಗೀತಾ ಶಿವರಾಜ್ ಕುಮಾರ್ ಬಂದು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಸುಕುಮಾರ್ ಶೆಟ್ಟರನ್ನ ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ಯಶಸ್ವಿಯಾಗಿದ್ದೇವೆ. ಅವರ ಫೋಟೊವನ್ನೂ ಫೆಕ್ಸ್ ನಲ್ಲಿ ಹಾಕಿಕೊಂಡಿದ್ದೇನೆ. ಬೈಂದೂರಿನಲ್ಲಿ ಬಹಳದೊಡ್ಡ ರಾಜಕೀಯ ವಿಪ್ಲವವಾಗಲಿದೆ. ಆಂತರಿಕವಾಗಿ ಬದಲಾವಣೆ ಆಗಲಿದೆ. ಅಂತಹ ನಿರ್ಧಾರವನ್ನ ಸಚಿವ ಮಧು ಬಂಗಾರಪ್ಪ ತೆಗೆದುಕೊಂಡಿದ್ದಾರೆ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆದ್ದೇ ಗೆಲ್ಲುತ್ತಾರೆ ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ.

1998 ರಲ್ಲಿ ಶಿವಮೊಗ್ಗದಲ್ಲಿ ಬಂಗಾರಪ್ಪನವರನ್ನ‌ ಸೋಲಿಸಿ ಬಿಜೆಪಿಗೆ ತಂದಿದ್ದು ನಾನು. ಅದೇಈತಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಸಂಸದರ ಸ್ಥಾನವನ್ನ 2024 ರಲ್ಲಿ ತರಲುದ್ದೇವೆ. ನಮ್ಮ‌ಅಭ್ಯರ್ಥಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಭೇಟಿ ಮಾಡಲಿದ್ದಾರೆ. ರೋಡ್ ಶೋ ಮಾಡ್ತಾರೆ. ದೊಡ್ಡಸಭೆಯನ್ನ ನಡೆಸಲಿದ್ದೇವೆ ಎಂದರು.

ಸಮಯಕ್ಕಾಗಿ ಕಾಯುತ್ತಿದ್ದೇವೆ. ಆ ಸಮಯ ಬರುತ್ತದೆ ಆಂತರಿಕವಾಗಿ ಕೆಲಸ ಮಾಡಲಾಗುತ್ತಿದೆ. ಅದನ್ನ ಬಹುರಂಗ ಪಡಿಸಲಾಗದು. ಈ ಬಾರಿಯ ಚುನಾವಣೆ ಅಚ್ಚರಿಯ ರೀತಿ ಫಲಿತಾಂಶವಿರಲಿದೆ ಎಂದರು.

ನನ್ನ ಸ್ಪರ್ಧೆ ಇಲ್ಲವಾದರೂ ದಿನೇಶ್ ರನ್ನ ಗೆಲ್ಲಿಸುತ್ತೇವೆ

ನನಗೆ ನೈರುತ್ಯ ಪದವೀದರ ಕ್ಷೇತ್ರದ ಟಿಕೇಟ್ ಸಿಗಲಿದೆ ಎನ್ನುತ್ತಿದ್ದ ಆಯನೂರು ಮಂಜುನಾಥ್ ಇಂದು ತಮ್ಮ ವರಸೆಯನ್ನ ಬದಲಾಯಿಸಿದ್ದಾರೆ. ಪಕ್ಷದ ಹೈಕಮಾಂಡ್ ಗೆ ದಿನೇಶ್ ಮತ್ತು ಆಯನೂರು ಅವರ ಹೆಸರು ಪ್ರಸ್ತಾವನೆಯಾಗಿದೆ. ಯಾರಿಗೆ ಟಿಕೇಟ ಆಗಲಿದೆ ಎಂಬುದು ಕಾದುನೋಡಬೇಕಿದೆ. ಆದರೆ ಆಯನೂರು ಮಂಜುನಾಥ್ ಅವರು ಇಂದು ಟಿಕೇಟ್ ಕೈತಪ್ಪಿದರೆ ದಿನೇಶ್ ರನ್ನೇ ಗೆಲ್ಲಿಸುವುದಾಗಿ ಘೋಷಿಸಿದ್ದು ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/10688

Related Articles

Leave a Reply

Your email address will not be published. Required fields are marked *

Back to top button