ಸ್ಥಳೀಯ ಸುದ್ದಿಗಳು

ಈ ಬಾರಿಯೂ ಶಿವಮೊಗ್ಗದಲ್ಲಿ ಕಾಂಗ್ರೆಸ್ ಗೆಲ್ಲಲ್ಲ-ಈಶ್ವರಪ್ಪ ಭವಿಷ್ಯ

ಸುದ್ದಿಲೈವ್/ಶಿವಮೊಗ್ಗ

ಈ ಬಾರಿ ಕಾಂಗ್ರೆಸ್ ಶಿವಮೊಗ್ಗ ಜಿಲ್ಲೆ ಗೆಲ್ಲಲ್ಲ ಎಂಬುದು ಸತ್ಯ ಹಾಗೆ ಮೋದಿ ಈ ದೇಶದ ಪ್ರಧಾನಿ ಆಗಲಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಗುಡುಗಿದ್ದಾರೆ.

ಅವರು ಬಿಜೆಪಿ ಎಸ್ ಸಿ ಮೋರ್ಚಾದ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನ ಉದ್ಘಾಟಿಸಿ ಮಾತನಾಡಿ ಈ ಬಾರಿಯೂ ರಾಘವೇಂದ್ರ ಮತ್ತೊಮ್ಮೆ ಸಂಸದರಾಗಲಿದ್ದಾರೆ ಎಂದರು.

ನೀನು ಹಿಂದುಳಿದ ವರ್ಗದವನಾಗಿದ್ದರಿಂದ ನಿನಗೆ ವಿದಾನ ಸಭೆ ಟಿಕೇಟ್ ತಪ್ಪಿಸಲಾಯಿತು ಎಂದು ಹೇಳುತ್ತಿದ್ದರು. ನಾನು ನನ್ನನ್ನ ಡಿಸಿಎಂ ಆಗಿ ನೇಮಿಸಿದ್ದು ನಿಮ್ಮಪ್ಪ ಅಲ್ಲ ಬಿಜೆಪಿಎಂದು ಹೇಳಿದ್ದೆ ಎಂದು ತಿಳಿಸಿದರು.

ಒಂದು ಕಾಲದಲ್ಲಿ ಬಿಜೆಪಿ ಬ್ರಾಹ್ಮಣರ ಪಕ್ಷ ಎಂದು ಕರೆಯಲಾಗುತ್ತಿತ್ತು ಇಂದು ಎಲ್ಲಾ ಸಮುದಾಯ ಬಿಜೆಪಿಯಲ್ಲೆ ಬೆಳೆಯುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಮತ್ತು ದಲಿತರು, ಹಿಂದುಳಿದ ವರ್ಗದವರ ಉದ್ದಾರವೇ ಮುಖ್ಯ ಗುರಿ ಎಂದು ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದಲೂ ಹೇಳ್ತಾ ಬಂದಿದೆ. ಈಗ ಅಲ್ಪ ಸಂಖ್ಯಾತರ ಪರ ನಿಂತಿದೆ. ಆದರೆ ಬಿಜೆಪಿ ಬಂದ ನಂತರ ದಲಿತರ ಬಗ್ಗೆ ಹಿಂದುಳಿದ ವರ್ಗದವರ ಬಗ್ಗೆ ಹೆಚ್ಚಿನ ಕಾರ್ಯಕ್ರಮ ತರಲಾಗಿದೆ ಎಂದರು.

ನಿರಂಜನಾನಂದ ಪುರಿ ಸ್ವಾಮಿಗಳು ಮತ್ತು ಮಾದರ ಚೆನ್ನಯ್ಯ ಸ್ವಾಮಿಳು ರಾಮಮಂದಿರಕ್ಕೆ ಹೋಗಿ ಜನ್ಮ ಸಾರ್ಥಕವಾಯಿತು ಎಂದಿದ್ದಾರೆ. ಬಿಜೆಪಿ ದಲಿತರಿಗೆ ಎಂಎಲ್ ಎ ಮತ್ತು ಎಂಪಿ ಟಿಕೇಟ್ ಕೊಡಗತಾ ಇಲ್ಲ ಎಂಬ ಆರೋಪ ಮಾಡ್ತಾ ಇದ್ದರು. ಆದರೆ ಅಂಬೇಡ್ಕರ್ ಅವರೆ ಟಿಕೆಟ್ ಹಂಚಿಕೆಯಲ್ಲಿ ಮೋಸಲಾತಿ ಜಾರಿಗೊಳಿಸುವಂತೆ ಸಂವಿಧಾನ ಮಾಡಿದ್ದರಿಂದ ನಾವು ಪ್ರತ್ಯೇಕ ಮೀಸಲಾಯಿ ಮಡುವ‌ಅವಶ್ಯಕತೆ ಇಲ್ಲ ಎಂದರು.

37 ಹಿಂದುಳಿದವರು 10 ಜನರು ದಲಿತ ಸಚಿವರು ಪ್ರಧಾನಿ ಮೋದಿ ಸರ್ಕಾರದಲ್ಲಿ ಇದ್ದಾರೆ. ಸಚಿವ ಮಹಾದೇವಪ್ಪನವರು ದಲಿತ ಮುಖ್ಯ ಮಂತ್ರಿ ಮಾಡಿ ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ ಮತ್ತು ಡಿಕೆಶಿ ಮುಂದೆ ಹೇಳಲಿ ಎಂದು ಸವಾಲು ಹಾಕಿದರು.

135 ಸ್ಥಾನ ಬಂದಾಗ ದಲಿತ ಸಿಎಂ ಮಾಡ್ಬೇಕು ಎಂದು ನೆನಪಾಗಿಲ್ಲ ಎಂದು ಪ್ರಶ್ನಿಸಿದ ಈಶ್ವರಪ್ಪ, ಬಜೆಟ್ ನಲ್ಲಿ ದಲಿತರ ಹಣವನ್ನ ಮುಸ್ಲೀಂರಿಗೆ ನೀಡಲಾಯಿತು. ಡಿಕೆಶಿ ಮುಂದಿನ ಸಿಎಂ ಎಂಬ ಕೂಗು ಕೇಳಿ ಬರುತ್ತಿರುವ ಕಾರಣ ದಲಿತ ಸಿಎಂ ಎಂದು ಹೇಳಲಾಗುತ್ತಿದೆ. ಡಿಜೆಶಿ ತಪ್ಪಿಸಲು ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ಇದರಿಂದ ದಲಿತರು ಎಚ್ಚೆತ್ತುಕೊಳ್ಳಬೇಕು ಎಂದರು.

ಮುಸ್ಲೀಂರಿಗೆ ಬಿಜೆಪಿ ಅನುಕೂಲ ಮಾಡಿಕೊಟ್ಟರೂ ಪಕ್ಷಸೇರಲು ಹಿಂದು ಮುಂದು ಮಾಡ್ತಾ ಇದ್ದಾರೆ. ದಲಿತರು ಬಿಜೆಪಿಗೆ ಬಂದಿದ್ದಾರೆ. ಬಿಜೆಪಿಯ ಕೇಂದ್ರ ಯೋಜನೆಯ ಬಗ್ಗೆ ಜನರಿಗೆ ತಿಳಿಸಬೇಕಿದೆ 4 ಕೋಟಿ ಮನೆ ಹಂಚಿಕೆ, 300 ಯುನಿಟ್ ಉಚಿತ ವಿದ್ಯುತ್ ನ್ನ ಮೋದಿ ಪ್ರಕಟಿಸಿದ್ದಾರೆ. ಜನರಿಗೆ ನ್ಯಾಯಕೊಡಿಸುವುದಕ್ಕಾಗಿ ಮೋರ್ಚಾ ರಚಿಸಲಾಗಿದೆ.

ವಿವಿಧ ಜಾತಿಗಳನ್ನ ಒಂದೆ ಸೂರಡಿ ತಂದು ನಾವೆಲ್ಲರೂ ಹಿಂದೂ ಎಂಬುದು ನಮ್ಮ ಪ್ರಮುಖ‌ಘೋಷಣೆ ಆಗಿದೆ. ಅಂಬೇಡ್ಕರ್ ಅವರ ಹೆಸರೇಳುವ ಕಾಂಗ್ರೆಸ್ ಅವರನ್ನ ಚುನಾವಣೆಯಲ್ಲಿ ಸೋಲಿಸುವಂತೆ ಮಾಡಿದ್ದು ಕಾಂಗ್ರೆಸ್ ಎಂದು ದೂರಿದರು.

ಯಾವುದೇ ಜಾತಿಗೆ ಹೆಚ್ಚು ಒತ್ತುಕೊಡಬಾರದು. ನನ್ನನ್ನ ಕೆಲವರು ಕುರುಬರಾಗಿ ಬಿಜೆಪಿಗೆ ಯಾಕೆ ಹೋದೆ ಎನ್ನುತ್ತಾರೆ. ನಾನು ಕುರುಬನಿಗಿಂತ ನಾನು ಒಬ್ಬ ಹಿಂದೂ ಎಂದು ಹೇಳುತ್ತೇನೆ ಎಂದರು.

ಇದನ್ನೂ ಓದಿ-https://suddilive.in/archives/10224

Related Articles

Leave a Reply

Your email address will not be published. Required fields are marked *

Back to top button