ಕ್ರೈಂ ನ್ಯೂಸ್

ಮಗಳು ಮಾನಸಿಕ ಅಸ್ವಸ್ಥೆ-ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವೆ-ಸಯ್ಯದ್ ಅಬ್ಬಾಸ್

ಸುದ್ದಿಲೈವ್/ಶಿವಮೊಗ್ಗ

ಜೈ ಶ್ರೀರಾಮ್ ಗೆ ಪ್ರತಿಯಾಗಿ ಅಲ್ಲಾಹೋ ಅಕ್ಬರ್ ಎಂದು ಘೋಷಣೆ ಕೂಗಿದ ಮಹಿಳೆಯ ಬಗ್ಗೆ ಅವರ ತಂದೆ ಸಯ್ಯದ್ ಅಬ್ಬಾಸ್ ಸ್ಪಷ್ಟನೆ ನೀಡಿದ್ದಾರೆ.

ಮಗಳು ಅಂಜುಮ್ ಅನಾ ಎಂದು 25 ವರ್ಷದವಳು, ಪತಿಯಿಂದ ದೂರಳಾಗಿದ್ದಾಳೆ. ಅಂಜುಮ್ ಗೆ 2018 ರಿಂದ‌ ಮಾನಸ ನರ್ಸಿಂಗ್ ಹೋಮ್, ಓಪನ್ ಮೈಂಡ್, ಶ್ರೀಧರ್ ಡಾಕ್ಟರ್ ಮತ್ತು ಮಣಿಪಾಲ್ ನಲ್ಲೂ ಚಿಕಿತ್ಸೆ ನೀಡುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

2016 ರಲ್ಲಿ ಮದುವೆ ಆದ ಅಂಜುಂ ಊರುಗಡೂರು ನಿವಾಸಿಯವಳಾಗಿದ್ದಾಳೆ. ಈಕೆಯನ್ನ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಆದರೆ ಆಗಿಲ್ಲ. ಮನೆಯಲ್ಲಿ ಗಲಾಟೆ, ಉಪಕರಣಗಳನ್ನ ಒಡೆದು ಹಾಕುತ್ತಾ ಬಹಳ ತೊಂದರೆ ನೀಡುತ್ತಿರುವುದಾಗಿ ತಂದೆ ಹೇಳಿದ್ದಾರೆ.

ಬಹುತೇಕ ಕಡೆ ಚಿಕಿತ್ಸೆ ನೀಡಾಗಿದೆ. 2018 ರಿಂದ‌ ಆಕೆಯ ಉಪದ್ರವ ಹೆಚ್ಷಾಗಿದೆ. ಕಳೆದ 10 ತಿಂಗಳಿಂದ ಆಕೆ ನಾವೇ ಮನೆಯಲ್ಲಿ ನೋಡಿಕೊಳ್ಳುತ್ತಿರುವುದಾಗಿ ಹೇಳಿದರು. ಇಂದು ಬಸವನಗುಡಿ ಪಾರ್ಕ್ ನಲ್ಲಿ ಮಗುವಿಗೆ ಆಟ ಆಡಿಸುತ್ತಿರುವುದಾಗಿ ತಿಳಿದಿದ್ದೆ.

ಆಕೆ ಮಿಸ್ ಆದಳು, ಕರೆ ಮಾಡಿದ್ದಕ್ಕೆ ಕಾರ್ಯಕ್ರಮದಲ್ಲಿದ್ದೇನೆ ಎಂದಳು. ನಂತರ ಕರೆ ಮಾಡಿದಾಗ‌ ಪೊಲೀಸರು ಹಿಡಿದುಕೊಂಡು‌ ಹೋಗಿರುವುದಾಗಿ ಕರೆ ಮಾಡಿದ್ದರು. ಪೊಲೀಸರು ದಾಖಲಾತಿ ತರಲು ಹೇಳಿದ್ದರು. ತೆಗೆದುಕೊಂಡು ಬಂದಿದ್ದೇನೆ ಎಂದು ಸಯ್ಯದ್ ಅಬ್ಬಾಸ್ ಸ್ಪಷ್ಟನೆ ನೀಡಿದ್ದಾರೆ.

ಈ ಘಟನೆ ನಡೆಯಬಾರದಿತ್ತು. ಮೊದಲು ಆಕೆಗೆ ಚಿಕಿತ್ಸೆ ಕೊಡಿಸುವೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ. ಆಕೆ ಯಾವ ಜಾತಿ ನೋಡುವ ಮಹಿಳೆಯಲ್ಲ. ಅನುಕಂಪ ಇರುವ ಮಹಿಳೆ ದಿಡೀರ್ ಅಙತ ಹೀಗೆ ನಡೆದುಕೊಂಡಿದ್ದಾಳೆ ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು.

ಎಸ್ಪಿ ಮಿಥುನ್ ಕುಮಾರ್ ಮಾತನಾಡಿ ಮಾನಸಿಕ ಅಸ್ವಸ್ಥೆ ಎಂದು ಹೇಳುತ್ತಿದ್ದಾರೆ. ಘಟನೆಯನ್ನ ಪರಿಶೀಲಿಸಿ ಮುಂದಿನ ಕ್ರಮ‌ಜರುಗಿಸಲಾಗುವುದು. ಆಕೆ ಜೊತೆ ಇದ್ದ‌ ಮಹಿಳೆ ಯಾರು ಏನು ಎತ್ತ ಎಂದು ಪರಿಶೀಲಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.‌

ಇದನ್ನೂ ಓದಿ-https://suddilive.in/archives/7458

Related Articles

Leave a Reply

Your email address will not be published. Required fields are marked *

Back to top button