ರಾಜ್ಯ ಸುದ್ದಿಗಳು

ತೀರ್ಥಹಳ್ಳಿಯ ಎಳ್ಳು ಅಮವಾಸೆಯ ಜಾತ್ರೆ

ಸುದ್ದಿಲೈವ್/ತೀರ್ಥಹಳ್ಳಿ

ತೀರ್ಥಹಳ್ಳಿಯ ಎಳ್ಳಮವಾಸೆ ಜಾತ್ರೆ ಭರ್ಜರಿ ಜನಸ್ಥೋಮದ ನಡುವೆ ಜರುಗಿದೆ. ಮೂರು ದಿನಗಳ  ಜಾತ್ರೆಯಲ್ಲಿ ತೆಪ್ಪೋತ್ಸವ ನಡೆಸುವ ಮೂಲಕ ಜಾತ್ರೆ ಜರುಗಿದೆ. ಶ್ರೀರಾಮೇಶ್ವರ ದೇವಸ್ಥಾನದಿಂದ ದೇವರನ್ನ ತಂದು ತುಂಗ ನದಿಯಲ್ಲಿ ತೆಪ್ಪೋತ್ಸವ ನಡೆಸಲಾಯಿತು.

ನದಿಯ ಒಂದು ದಡದಿಂದ ಮತ್ತೊಂದು ದಡದ ನಡುವೆ ದೇವರನ್ನ ತೆಪ್ಪದಲ್ಲಿ ಕೊಂಡಯ್ಯಲಾಯಿತು. ಈ ವೇಳೆ ಪಟಾಕಿ ಸಿಡಿಸಲಾಯಿತು. ಆಚೆ ದಡದಲ್ಲಿ ಅಯೋಧ್ಯ ರಾಮಮಂದಿರ ದ ಪ್ರತಿಮೆಯನ್ನ ದೀಪಾಲಂಕಾರವಾಗಿ ನಿರ್ಮಿಸಲಾಗಿತ್ತು. ಈ ಅಲಂಕಾರವನ್ನ ಮುಸ್ಲೀಂ ಯುವಕ ನಿರ್ಮಿಸಿದ್ದು ವಿಶೇಷವಾಗಿತ್ತು. ಸೌಹಾರ್ಧದ ಸಂಕೇತವಾಗಿತ್ತು.‌ ತುಂಗ ನದಿಯ ಸೇತುವೆಗೆ ದೀಪಾಲಾಂಕಾರದಿಂದ ನಿರ್ಮಿಸಲಾಗಿತ್ತು.

ಜಾತ್ರೆ ನಡೆಯುವುದು ತೀರ್ಥಹಳ್ಳಿಯ ತುಂಗಾ ನದಿಯ ದಡದ ಮೇಲಿರುವ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ. ದೂರ ದೂರದ ಊರಿನಿಂದ ಜನ ಸಾಗರವಾಗಿ ತುಂಗೆಯ ಮಡಿಲಲ್ಲಿ ನೆರೆದಿದ್ದರು. ತುಂಗೆಯ ಒಡಲಲ್ಲಿ ತನ್ನ ಪಾಪವನ್ನು ಕಳೆದ ಪರಶುರಾಮನ ಕೊಂಡದಲ್ಲಿ ಭಕ್ತಿಯಿಂದ ಮುಳುಗೆದ್ದು ಭಕ್ತರು ಮೊದಲನೆ ದಿನ ಪ್ರಾಶಸ್ತ್ಯ ನೀಡಲಾಗಿದೆ.

ತಮ್ಮ ಇಡೀ ಜನ್ಮದ ಪಾಪ ನಿವಾರಣೆಯಾಯಿತೆಂದು ಭಾವಿಸಿ ಶ್ರೀ ರಾಮೇಶ್ವರನ ಪ್ರಸಾದದೊಂದಿಗೆ ಮರಳುತ್ತಾರೆ.  ರಥೋತ್ಸವ ಬೆಳಗಿನಿಂದಲೇ ನೆರೆದ ಜನರಲ್ಲಿ ಸಂಭ್ರಮ-ಲವಲವಿಕೆಯಿಂದ ದೇವರನ್ನು ಏರಿಸಿಕೊಂಡ ತೇರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುತ್ತುವರಿದು ಹಿಂತಿರುಗಲಾಗಿದೆ .

ಇಂದು ಸಂಜೆಗೆ ತುಂಗೆಯ ದಡದಲ್ಲಿ ನೆಡೆದ ತೆಪ್ಪೋತ್ಸವದಲ್ಲಿ ಜನಸಾಗರವೇ ನೆರೆದಿದೆ. ತೆಪ್ಪೋತ್ಸವವನ್ನು ಅದ್ದೂರಿಯಾಗಿ ವ್ಯವಸ್ಥೆಗೊಳಿಸಲೆಂದೇ ರಚನೆಯಾದ ತೆಪ್ಪೋತ್ಸವ ಸಮಿತಿಯನ್ನ ರಚಿಸಲಾಗಿದೆ.  ಪೂರ್ಣ ಕತ್ತಲು ಆವರಿಸುತ್ತಿದ್ದಂತೆಯೇ ಸಿಡಿಮದ್ದುಗಳು ಆಗಸದಲ್ಲಿ ಸಿಡಿಸಲಾಯಿತು. ದೀಪದ ಚಿತ್ತಾರ ಬಿಡಿಸಿ ಪಟಾಕಿ ಸಿಡಿಸಲಾಗಿದೆ.

ತೆಪ್ಪೋತ್ಸವ ಮುಗಿದ ನಂತರ ದೇವರನ್ನು ರಾಮೇಶ್ವರ ದೇವಸ್ಥಾನದ ಎದುರು ಮಂಟಪದಲ್ಲಿ ಕೂರಿಸಲಾಗುತ್ತದೆ.  ಹೊರಗಿನ ಶಿವದೇವರು ಬಂದಾಗ ದೇವಸ್ಥಾನದ ಒಳಗಿನ ಪಾರ್ವತಿ ಬಾಗಿಲು ತೆರೆಯುವುದಿಲ್ಲ. ಇದರ ನಡುವೆ ನಂದಿ ರಾಜಿ ಮಾಡಿ ಕೊನೆಗೂ ಶಿವ ದೇವರು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಸಾಂಪ್ರದಾಯಿಕ ವಿಧಿ-ವಿಧಾನಗಳು ನೆರವೇರಿದ ನಂತರ ಜಾತ್ರೆ ಮುಗಿಯುತ್ತದೆ.

ನಂತರ ಜನವರಿ 11-13ಕ್ಕೆ ಬರುವ ಸಂಕ್ರಾಂತಿಗೆ ಚಿಕ್ಕ ರಥೋತ್ಸವವೊಂದು ನಡೆಯುತ್ತದೆ. ಅಲ್ಲಿಗೆ ಜಾತ್ರೆ ಸಂಪೂರ್ಣವಾಗಿ ಮುಗಿಯುತ್ತದೆ. ಮತ್ತೆ ಸಾರ್ವಜನಿಕ ಉತ್ಸವ-ಆಚರಣೆಗಳಿಗಾಗಿ ಮುಂದಿನ ವರ್ಷದ ಎಳ್ಳಮಾವಾಸ್ಯೆ ಜಾತ್ರೆಯನ್ನೇ ಕಾಯಬೇಕು.

ಇದನ್ನೂ ಓದಿ-https://suddilive.in/archives/6780

Related Articles

Leave a Reply

Your email address will not be published. Required fields are marked *

Back to top button