ರಾಜಕೀಯ ಸುದ್ದಿಗಳು

ಮಧು ಬಂಗಾರಪ್ಪ ಹೇಗೆ ಹೇಳ್ತಾರೋ ಹಾಗೆ ಅವರ ಅಭ್ಯರ್ಥಿಯನ್ನ ಕರೆಯುವೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ರಾಮೇಶ್ವರಂ ಕೆಫೆ ಸ್ಪೋಟಕರ ಸಂಚಿನಿಂದ ಹಲವು ವಿಷಯಗಳು ಬಹಿರಂಗವಾಗಿದೆ. ಹಿಂದೂ ದೇವಾಲಯ ಮತ್ತು‌ ಹಿಂದೂ ಮುಖಂಡರ ಹತ್ಯೆಯ ಗುರಿಯಾಗಿಸಿಕೊಂಡು ಅವರು ಕೆಲಸ ಮಾಡುತ್ತಿರುವುದಾಗಿದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಇದು ಆತಂಕದ ವಿಷಯವೆಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಸರ್ಕಾರ ಈ ವಿಷಯಗಳ ಬಗ್ಗೆ ಗಮನ ಹರಿಸಿ ಸಾಕಷ್ಟು ಬಿಗಿ ಕ್ರಮ ತೆಗದುಕೊಳ್ಳಬೇಕು. ಸಿಎಂ ಮತ್ತು ಡಿಸಿಎಂ ಈಗಾಗಲೆ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಆಡಳಿತವನ್ನೂ ನಡೆಸುತ್ತಿದ್ದಾರೆ. ಯಾವುದೇ ದೇವಸ್ಥಾನ ಹಾನಿಯಾಗದಂತೆ ಮತ್ತು ಹಿಂದೂ ನಾಯಕರ ಹತ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದರು.

ಸಂವಿಧಾನ ತಿದ್ದುಪಡಿ ಮತ್ತು ಆರ್ ಎಸ್ ಎಸ್ ಬಗ್ಗೆ ಕೆಲ ಎದುರಾಳಿಗಳು ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ಬಂದು ಸಂವಿಧಾನ ಬದಲಾಯಿಸಿ ಎಂದರು ಬದಲಾಯಿಲ್ಲ ಎಂದು ಪ್ರಧಾನಿ ಮತ್ತು ಅಮಿತ್ ಶಾ ಹೇಳಿದರು ಅವರನ್ನ ಟೀಕಿಸುವ ಕೆಲಸ ಆಗ್ತಾ ಇದೆ.‌ ಇದರಿಂದ ಮತ ಹೆಚ್ಚಾಗಲಿದೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಇಂತಹ ಭ್ರಮೆಯಿಂದ ಅವರು ಹೊರಬಂದು ರಚನಾತ್ಮಕ ಕೆಲಸದ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದರು.

ಆರ್ ಎಸ್ ಎಸ್ ನಿಮಗೆ ಬೆಂಬಲವಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಸಂಘ ಕುಚ್ ನಹಿ ಕರೇಗ, ಸ್ವಯಂ‌ ಸೇವಕ್ ಸಬ್ ಕುಚ್ ಕರೇಗಾ ಧರ್ಮಕೀ ಆಧಾರ್ ಪರ್ ಎಂದು ಗುರೂಜಿ ಹೇಳಿದ್ದಾರೆ. ಸಂಘದಲ್ಲಿರುವವರಿಗೆ ನನ್ನ ಸ್ಪರ್ಧೆಯನ್ನ ಬೆಂಬಲಿಸಿದ್ದಾರೆ ಎಂದರು.

ನನ್ನನ್ನ ರಾಜ್ಯಪಾಲರನ್ನ ಮಾಡಿಯಾಯಿತು. ನನ್ನ ಮಗ ಎಂಪಿ ಮಾಡಿಯಾಯಿತು. ಸುಳ್ಳಿನ ಸರದಾರ ಬಿಎಸ್ ಯಡಿಯೂರಪನವರಿಗೆ ನಾನು ಯಾವುದೇ ಹುದ್ದೆಗಳಿಗೆ ಆಸೆ ಪಟ್ಟಿಲ್ಲ ಎಂದಿದ್ದೆ. ಆದರೆ ಬಿಎಸ್ ವೈಗೆ ನಾನು ಪಕ್ಷದಲ್ಲಿ‌ ಕೆಲಸ ಮಾಡಲು ಇಷ್ಟ ಇಲ್ಲ. ಹಾಗಾಗಿ ಅವರ ಮಗ ವಿಜೇಂದ್ರರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಪಕ್ಷದ ಶುದ್ಧೀಕರಣಕ್ಕಾಗಿ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದರು.

ಸೋಲಿನ ಭಯದಿಂದ ಅಪ್ಪಮಕ್ಕಳು ಟೀಕೆ ಮಾಡ್ತಾ ಇದ್ದಾರೆ. ನಾಮಿನೇಷನ್ ಹಾಕಲ್ಲ ಎಂದಿದ್ದಾರೆ. 25 ಸಾವಿರ ಜನರ ಮಧ್ಯೆ ಮೆರವಣಿಗೆ ನಡೆಸಿ ನಾಮಪತ್ರ ಹಾಕಲಾಗಿದೆ. ಈಗ ಗೀತ ನಾಮಪತ್ರಕ್ಕೆ ಲಕ್ಷ ಜನ ಸೇರಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ ನೋಡೋಣ ಎಷ್ಟು ಜನ ಸೇರ್ತಾರೆ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಅಭ್ಯರ್ಥಿ ಗೀತ ಅವರನ್ನ ಡಮ್ಮಿ ಎಂದು ಕಾಂಗ್ರೆಸಿಗರೆ ಹೇಳ್ತಾ ಇದ್ದಾರೆ ಎಂದಿದ್ದಕ್ಕೆ ಮಧು ಅವರು ಈಶ್ವರಪ್ಪನವರು ಡಮ್ಮಿ ಎನ್ನಬೇಡಿ ಎಂದಿದ್ದಾರೆ. ಅವರು ಅಭ್ಯರ್ಥಿಯನ್ನ ಏನು ಹೇಳಬೇಕು ಎಂದು ಹೇಳಿದರೆ ಅದೇ ಹೆಸರಿನಲ್ಲೇ ಕರೆಯುವೆ ಎಂದರು.

ಭದ್ರಾವತಿಯಲ್ಲಿ ಏ. 21 ರಂದು ತಮಿಳು ಸಮಾವೇಶ ನಡೆಯಲಿದೆ 40 ಸಾವಿರ ಮತ ಅಲ್ಲಿದೆ. ನನಗಾಗಿ ಸಮಾವೇಶ ನಡೆಸುತ್ತಿದ್ದೇವೆ. ಗೂಳಿ ಹಟ್ಟಿ ಶೇಖರ್ ನನ್ನ ಜೊತೆ ಬಂದ ನಂತರ ಆನೆ ಬಲ ಬಂದಿದೆ ಎಂದರು.

ಇದನ್ನೂ ಓದಿ-https://suddilive.in/archives/12828

Related Articles

Leave a Reply

Your email address will not be published. Required fields are marked *

Back to top button