ನಗರ‌ ಸುದ್ದಿಗಳು

ಕನ್ನಡ ಕಡ್ಡಾಯ ನಾಮಫಲಕ ಅಭಿಯಾನ ನಡೆಸಿದ ಕರವೇ

ಸುದ್ದಿಲೈವ್/ಶಿವಮೊಗ್ಗ

ಅಂಗಡಿ ಮುಂಗಟ್ಟುಗಳ ಹೆಸರು ಕನ್ನಡದಲ್ಲಿರಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಶಿವಮೊಗ್ಗ ನಾಯಕ ವೃತ್ತದಿಂದ ಡಿ.ಸಿ. ಕಚೇರಿಯವರೆಗೆ ಪ್ರತಿಭಟನಾ ಮೆರವಣ ಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಡಿ.27ರಂದು ಕನ್ನಡ ನಾಮಫಲಕ ಕಡ್ಡಾಯ ಹೋರಾಟದಲ್ಲಿ ನೂರಾರು ಕನ್ನಡ ಕಾರ್ಯಕರ್ತರು ಜೈಲು ಸೇರಿದ್ದರು. ಈ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ಕಾನುನಾಗಿ ಜಾರಿಯಾಗಿದೆ. ಈ ಕಾನೂನು ಪರಿಪೂರ್ಣವಾಗಿ ಜಾರಿಯಾಗುವಂತೆ ನೋಡಿಕೊಳ್ಳುವ ಜವಬ್ದಾರಿ ಕನ್ನಡಿಗರ ಮೇಲಿದೆ.
ಬೇರೆ ಭಾಷೆಯ ನಾಮಫಲಕಗಳು ಕನ್ನಡಕ್ಕೆ ಅಗೌರವವಾಗಿದ್ದು, ಕರ್ನಾಟಕದಲ್ಲಿ ಕನ್ನಡದಲ್ಲೇ ನಾಮಫಲಕ ಇರಬೇಕು ಎಂಬ ಅಭಿಯಾನವನ್ನು ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾದಾದ್ಯಂತ ವಿಸ್ತರಿಸುತ್ತಿದ್ದು, ಎಲ್ಲರಿಗೂ ಅರಿವು ಮೂಡಿಸುವ ಕೆಲಸ ಮಾಡಲಿದೆ.

ಆದ್ದರಿಂದ ನಾಳೆಯಿಂದ ಎಲ್ಲಾ ಉದ್ಯಮಿಗಳು, ವ್ಯಾಪಾರಸ್ಥರು, ಶಿಕ್ಷಣ ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳು, ಕೈಗಾರಿಕೆಗಳು, ತಮ್ಮ ಸಂಸ್ಥೆಯ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡವಿರಬೇಕು.ಕನ್ನಡಕ್ಕೆ ಮೊದಲ ಸ್ಥಾನ ಇರಬೇಕು. ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂಬುವುದು ರಕ್ಷಣ ವೇದಿಕೆಯ ಉದ್ದೇಶವಾಗಿದ್ದು, ಈ ಕಾನೂನನ್ನು ಉಲ್ಲಂಘಿಸಿದರೆ ಮುಂಬರುವ ದಿನಗಳಲ್ಲಿ ವೇದಿಕೆ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆಯನ್ನ ನೀಡಿದೆ.

ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ಮಂಜುನಾಥ್, ಧನಂಜಯ್, ಜ್ಯೋತಿ, ಗೀತಾ ಕೆ.ಸಿ. ಮತ್ತಿತರರಿದ್ದರು.

ಇದನ್ನೂ ಓದಿ-https://suddilive.in/archives/10126

Related Articles

Leave a Reply

Your email address will not be published. Required fields are marked *

Back to top button