ಸ್ಥಳೀಯ ಸುದ್ದಿಗಳು

ಬಿಜೆಪಿ ನಾಯಕರಲ್ಲಿ ಈಶ್ವರಪ್ಪ ಪಕ್ಷಕ್ಕೆ ಮರಳುವ ಭರವಸೆ-ಈಶ್ವರಪ್ಪ‌ ಬಿರುಸಿನ ಪ್ರಚಾರ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಚುನಾವಣೆ ಸ್ಪರ್ಧೆಯ ಘೋಷಣೆ, ಇಂದು ಚುನಾವಣೆಯ ಪ್ರಚಾರಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಧುಮುಕಿದ್ದಾರೆ. ಪುತ್ರ ಕಾಂತೇಶ್ ಸಹ ಅಪ್ಪನ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಇದರಿಂದ ಶಿವಮೊಗ್ಗದ ತ್ರಿಕೋನ ಸ್ಪರ್ಧೆಯ ಅಖಾಡ ತೆರೆದುಕೊಂಡಿದೆ. ಕಾಂಗ್ರೆಸ್ ನಿಂದ ಗೀತಾ ಶಿವರಾಜ್ ಕುಮಾರ್, ಬಿಜೆಪಿಯಿಂದ ರಾಘವೇಂದ್ರ ಮತ್ತು ಪಕ್ಷೇತರರಾಗಿ ಮಾಜಿ ಡಿಸಿಎಂ ಈಶ್ವರಪ್ಪ ಕಣಕ್ಕಿಳಿಯಲಿದ್ದಾರೆ.

ಇಂದು ಮಾಜಿ ಡಿಸಿಎಂ ಈಶ್ವರಪ್ಪ, ವರದ ಶ್ರೀ ಶ್ರೀಧರ ಸ್ವಾಮಿಗಳ ಆಶೀರ್ವಾದ ಪಡೆದು ಸಾಗರದಲ್ಲಿ ಬಿರುಸಿನ ಪ್ರಚಾರಕ್ಕೆ ಧುಮಿಕಿದ್ದಾರೆ. ಇಂದು ಸಂಜೆ ಬೈಂದೂರು ಕ್ಷೇತ್ರದಲ್ಲಿ ಚುನಾವಣ ಪ್ರಚಾರನಡೆಸಿದ್ದಾರೆ. ನಗರದ ಶ್ರೀಗೇರಿ ಶ್ರೀ ಮಠಕ್ಕೂ ಭೇಟಿ ನೀಡಿದ್ದಾರೆ.

ಪುತ್ರ ಕಾಂತೇಶ್ ಸಹ ಶಿವಮೊಗ್ಗ ಗ್ರಾಮಾಂತರ ಕಗಷೇತ್ರದಲ್ಲಿ ಅಪ್ಪನಿಗಾಗಿ ಮತಯಾಚನೆಯಲ್ಲಿ ತಡಗಿಸಿಕೊಂಡಿದ್ದಾರೆ. ಈ ನಡುವೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಮಾತನಾಡಿ, ಈಶ್ವರಪ್ಪನವರು ಹಿರಿಯರು ಅವರೊಂದಿಗೆ ಮೊನ್ನ ಮನೆಗೆ ಭೇಟಿ ನೀಡಿ ಮಾತನಾಡಿರುವ ಸ್ವಲ್ಪ ಉದ್ವಿಘ್ನದಲ್ಲಿದ್ದಾರೆ.

ಎಲ್ಲಾವೂ ಸರಿಹೋಗಲಿದೆ. ಅವರ ರಕ್ತದಲ್ಲಿ ಪಕ್ಷ, ಮೋದಿಎಂದು ಇದೆ. ನಮ್ಮ ಪಕ್ಷದ ನಾಯಕರು ಭೇಟಿ ಮಾಡಲುದ್ದಾರೆ ಎಂದು ತಿಳಿಸಿದರು. ಶಾಸಕ ಚೆನ್ನಬಸಪ್ಪ ಮಾತನಾಡಿ, ಈಶ್ವರಪ್ಪನವರು ನಮ್ಮ ಜೊತೆಯೇ ಬರಲಿದ್ದಾರೆ. ಅವರು ಎಲ್ಲೂ ಹೋಗಲ್ಲ. ಕೆಲವೊಂದು ಬೇಡಿಕೆ ಇದೆ ವರಿಷ್ಠರು ಬಗೆಹರಿಸಲಿದ್ದಾರೆ ಎಂದರು.

ಇದನ್ನು ಓದಿ-https://suddilive.in/archives/10818

Related Articles

Leave a Reply

Your email address will not be published. Required fields are marked *

Back to top button