ಕ್ರೈಂ ನ್ಯೂಸ್

ಕುತೂಹಲ ಮೂಡಿಸಿದ ಪತ್ತೆಯಾದ ಭ್ರೂಣ!

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರದ ಪ್ರವಾಸಿ ಮಂದಿರದ ಬಳಿ ಭ್ರೂಣವೊಂದು ಪತ್ತೆಯಾಗಿದ್ದು ಈ ಭ್ರೂಣ ಶಿಶುವಿನ ಭ್ರೂಣನ ಅಥವಾ ಬೇರೆ ಪ್ರಾಣಿಗಳ ಭ್ರೂಣನಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿ ಬಿಸಾಕಿದ ಫೊಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಮನುಷ್ಯರ ಭ್ರೂಣವಾ ಅಥವಾ ಇತರೆ ಪ್ರಾಣಿಗಳ ಭ್ರೂಣವಾ ಎಂಬ ಕುತೂಹಲಕ್ಕೆ ಕಾರಣವಾಗಿತ್ತು.

ಆದರೆ ಶಿಕಾರಿಪುರದ ಸಿಡಿಪಿಒ ರವರಕಡೆಯಿಂದ ಸ್ಥಳ ಪರಿಶೀಲನೆ ನಡೆಸಿದ್ದು ಪ್ರಾಥಮಿಕ ಮಾಹಿತಿಯಂತೆ ಇದು ಮಂಗನ ಭ್ರೂಣ ಎಂದು ತಿಳಿದು ಬಂದಿದೆ. ಮಂಗನ ಭ್ರೂಣ ಎಂದು ತಿಳಿದು ಬಂದ ಹಿನ್ನಲೆಯಲ್ಲಿ ದಫನ್ ಮಾಡಲಾಗಿದೆ.

ಎಫ್ಎಸ್ ಎಲ್ ಗೆ ಕಳುಹಿಸದೆ ದಫನ್ ಮಾಡಿದ್ದೇಕೆ?

ಪತ್ತೆಯಾದ ಭ್ರೂಣ ಮೇಲ್ನೋಟಕ್ಕೆ ಮಂಗನ ಭ್ರೂಣ‌ ಎಂದು ಹೇಳಲಾಗುತ್ತಿದೆ. ಮಂಗನ ಭ್ರೂಣನೋ ಅಥವಾ ಮನುಷ್ಯರ ಭ್ರೂಣವೋ ಎಂಬ ಮಾಹಿತಿ ಪತ್ತೆಯಾಗೋದು ವೈಜ್ಞಾನಿಕ ಪರೀಕ್ಷೆಯಿಂದ ಆದರೆ ಇದು ಸ್ಥಳೀಯರ ಮಾಹಿತಿ ಆಧಾರವಾಗಿಸಿ ಇದು ಮಂಗನ ಭ್ರೂಣವೆಂದು ದಫನ್ ಮಾಡಿರುವುದು ಎಷ್ಟು ಸರಿ ಎಂಬುದು ಸಹ ಬಹಿರಂಗವಾಗಬೇಕಿದೆ.‌

ಇದನ್ನೂ ಓದಿ-https://suddilive.in/archives/6247

Related Articles

Leave a Reply

Your email address will not be published. Required fields are marked *

Back to top button