ಸ್ಥಳೀಯ ಸುದ್ದಿಗಳು

ರಾಘವೇಂದ್ರ ಸಚಿವರಾಗಿ ಆಯ್ಕೆಯಾಗಲಿ-ಉಜ್ಜಯಿನಿ ಶ್ರೀಗಳು

ಸುದ್ದಿಲೈವ್/ಶಿವಮೊಗ್ಗ

ಮುಂದಿನ ದಿನಗಳಲ್ಲಿ ಬಿ.ವೈ. ರಾಘವೇದ್ರ ಕೇವಲ ಸಂಸದರಾಗದೆ ಸಚಿವರಾಗಲಿ ಎಂದು ಉಜ್ಜಯಿನಿ ಮಠದ ಸಿದ್ದಗಂಗಾ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಅವರು ವಿನೋಬ ನಗರ ಶಿವಾಲಯದಲ್ಲಿ ಭಾರತ್ ಅಕ್ಕಿ ಯೋಜನೆಗೆ ಚಾಲನೆ ಮತ್ತು ಅತಿರುದ್ರ ಯಾಗದ ಧರ್ಮ ಸಭೆಯಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಶಿವಮೊಗ್ಗ ದೇಶದ 543 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಬೆಳೆದಿದೆ ಎಂದರೆ ಸಂಸದ ರಾಘವೇಂದ್ರ ಕಾರಣರಾಗಿದ್ದಾರೆ.

ಅವರ ನೇತೃತ್ವದಲ್ಲಿ ಶಿವಮೊಗ್ಗಕ್ಜೆ ಮುಂದಿನ ದಿನಗಳಲ್ಲಿ ನಾಲ್ಕೈದು ರಾಷ್ಟ್ರೀಯ ಹೆದ್ದಾರಿ ಬರಲಿ. ಹೊಸಪೇಟೆ ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿಗಳಿಲ್ಲ ಎಂದು ಅವರ ಗಮನಕ್ಕೆ ತರಲಾಗಿತ್ತು ಅದೂ ಸಹ  ಕೈಹಾಕಿದ್ದಾರೆ. ಮೊನ್ನೆ ಗಡ್ಕರಿಯವರು ಶಿವಮೊಗ್ಗಕ್ಜೆ ಭೇಟಿ ನೀಡಿದ ವೇಳೆ ರಾಘವೇಂದ್ರ ಬಗ್ಗೆ ಹಾಡಿಹೊಗಳಿದ್ದಾರೆ ಎಂದರು.

ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ಬಿಸುವ ತಾಕತ್ತಿರುವ ಸಂಸದರನ್ನ ಆಯ್ಕೆಯಾಗಬೇಕು. ರಾಘವೇಂದ್ರರಿಗೆ ಆಶಕ್ತಿಯಿದೆ. ಅವರನ್ನ ಮತ್ತೊಮ್ಮೆ ಗೆಲ್ಲಿಸಿ. ಶುಭಕೃತ್ ಸಂವತ್ಸರದಲ್ಲಿ ಕ್ಷಾಮ ಕಾಣಿಸಿಕೊಂಡಿದೆ. ಮುಂದೆ ಬರುವ  ಕ್ರೋಧಿ ಸಂವತ್ಸರ ಸಂಮೃದ್ಧಿ ತರಲಿ ಎಂದು ಆಶೀರ್ವದಿಸಿದರು.

ನಾವೆಲ್ಲಾ ಭಾರತೀಯರು ಎಂಬ ಭಾವನೆ ಮೂಡುವಂತಾಗಲಿ ಜ್ಞಾನದಲ್ಲಿ ಹಸಿವುಳ್ಳವನು ಎಂಬ ಅರ್ಥವನ್ನು  ಭಾರತ ಎಂಬ ಪದದ ಅರ್ಥವಾಗಿದೆ. ಭಾರತ  ಇತರೆ ದೇಶಗಳಂತೆ  ದೊಡ್ಡಣ್ಣ ಎನಿಸಿಕೊಳ್ಳಲಿಲ್ಲ. ಆದರೆ ಭಾರತ ಎಂಬ ಪದ ತಾಯಿಗೆ ಹೋಲಿಸಲಾಗುತ್ತದೆ. ಭೂಮಿ ಮತ್ತು ಭಾರತ ಎರಡೂ ತಾಯಿ ಎನಿಸಿಕೊಂಡಿದ್ದಾಳೆ. ತಾಯಿಯ ಶ್ರೀ ರಕ್ಷೆ ಮಕ್ಕಳಿಗೆ ಬೇಕಿದೆ ಎಂದು ವಿವರಿಸಿದರು.

ಉಣ್ಣುವ ಪ್ರಸಾದ, ನೀರನ್ನ ತಾಯಿಗೆ ಹೋಲಿಸಲಾಗುತ್ತದೆ.‌ ಶಿಕಾಗೋದಲ್ಲಿ ಭಾರತದ ಪರಂಪರೆಯನ್ನ ಸ್ವಾಮಿ ವಿವೇಕಾನಂದರು ತಿಳಿಸಿದ್ದರು. ಅತಿರುದ್ರ ಯಾಗ 14631 ಬಾರಿ ಪಠಿಸುವುದು ಅತಿರುದ್ರ ಯಾಗವಾಗಲಿದೆ ಎಂದ ಶ್ರೀಗಳು‌ ಅರಿತು ಮಾಡಿದ ಪೂಜೆ ಫಲಕೊಡುತ್ತದೆ ಅರಿಯದೆ ಮಾಡುವ ಪೂಜೆಯು ಕೂಡ ಫಲಕೊಡುವುದು ಶಿವನಿಂದ ಮಾತ್ರ ಎಂದರು.

ವೀರಶೈವ ಪರಂಪರೆ ಎಂದರೆ ಸಮಾನತೆ ಎಂಬುದು. ಶಿವ ತನ್ನ ಅರ್ಧ ಭಾಗವನ್ನೇ ಪತ್ನಿ ಪಾರ್ವತಿಗೆ ಬಿಟ್ಟುಕೊಟ್ಟವನು. ಜಗತ್ತನ್ನ ಕಾಯುವ ದೇವರು ಇದ್ದರೆ ಅದು  ಶಿವ ಮತ್ತು ಪಾರ್ವತಿಯಾಗಿದ್ದಾರೆ. ಪ್ರಧಾನಿ ಮೋದಿ ಛಲದಂಕ ಮಲ್ಲನಾಗಿ ಬೆಳೆದಿದ್ದಾರೆ. ಲೋಕಕಲ್ಯಾಣಾರ್ಥಕ್ಕಾಗಿ ಪ್ರಧಾನಿ ಬಂದಿದ್ದಾರೆ ಅವರನ್ನ ಮತ್ತೊಮ್ಮೆ ಪ್ರಧಾನಿ ಸ್ಥಾನಕ್ಕೆ ಆರಿಸುವ ಜವಬ್ದಾರಿ ನಮ್ಮದಾಗಿದೆ ಎಂದರು.

ಗಮನ ಸೆಳೆದ ರಾಘಣ್ಣ

ಶ್ರೀಗಳು ಆಶೀರ್ವಚನ ಮಾಡುವ ವೇಳೆ ಅವರ ಕಾಲಕೆಳಗಿನ ಪೀಠದ ಮೇಲೆ ಆಸೀನರಾಗಿ ಗಮನ ಸೇಳೆದಿದ್ದಾರೆ. ಅವರಿಗೆ ಕುರ್ಚಿಯನ್ನ ನೀಡಿದ್ದರು. ಶ್ರೀಗಳ ಅಶೀರ್ವಚನದ ವೇಳೆ ಶ್ರೀಗಳ ಕಾಲಿನ ಪೀಠದ ಬಳಿ ಕುಳಿತು ಆಶೀರ್ವಚನ ಕೇಳಿರುವುದು ಕಾರ್ಯಕ್ರಮದಲ್ಲಿ ಗಮನ ಸೆಳೆದಿದೆ.

ಇದನ್ನೂ ಓದಿ-https://suddilive.in/archives/10172

Related Articles

Leave a Reply

Your email address will not be published. Required fields are marked *

Back to top button