ಅಲಂಕಾರ ವಿಚಾರದಲ್ಲಿ ಗೊಂದಲ

ಸುದ್ದಿಲೈವ್/ಶಿವಮೊಗ್ಗ

ಅಲಂಕಾರ ವಿಚಾರದಲ್ಲಿ ಎಎ ವೃತ್ತ ಮತ್ತು ಶಿವಪ್ಪ ನಾಯಕ ಪ್ರತಿಮೆ ಬಳಿ ಕೆಲ ಗೊಂದಲಗಳು ನಿರ್ಮಾಣವಾಗಿದ್ದು ಗೊಂದಲಗಳನ್ನ ಎಸ್ಪಿ ಮಿಥುನ್ ಮಧ್ಯ ಪ್ರವೇಶದಿಂದ ನಿವಾರಿಸಲಾಗಿದೆ. ಎಸ್ಪಿ ಬರುವ ಮುಂಚೆ ಎರಡೂ ಕಡೆಯಿಂದಲೂ ಘೋಷಣೆಗಳು ಕೂಗಲಾಗಿದೆ.
ನಿನ್ನೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಮಯದಲ್ಲಿ ಇದ್ದ ಕೆಲ ಅಲಂಕಾರಳನ್ನ ತೆಗೆದಿರುವ ವಿಚಾರದಲ್ಲಿ ಗೊಂದಲ ನಿರ್ಮಾಣವಾಗಿತ್ತು. ಈ ವಿಚಾರದಲ್ಲಿ ಎಸ್ಪಿ ಬರುವಮುಂಚೆ ಎರಡೂ ಕಡೆಯಿಂದ ಘೋಷಣೆ ಕೂಗಲಾಗಿದೆ. ಎಸ್ಪಿ ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಅಲಂಕಾರ ವಿಚಾರದಲ್ಲಿ ಎಸ್ ಎನ್ ಪ್ರತಿಮೆ ಬಳಿ ಮತ್ತು ಅಮೀರ್‌ಅಹ್ಮದ್ ವೃತ್ತದ ಬಳಿ ಅಲಂಕಾರ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಅದನ್ನ ನಿವಾರಿಸಲಾಗಿದೆ ಎಂದು ತಿಳಿಸಿದರು.
ಧ್ವಜ ಅಲಂಕಾರದಲ್ಲಿ ಏನು ಗೊಂದಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಎಸ್ಪಿ ಉರಿನಲ್ಲಿ ನಿರ್ಮಿಸಿರುವ ಅಲಂಕಾರದಲ್ಲಿ ಕೆಲ ಗೊಂದಲಗಳು ನಿರ್ಮಾಣವಾಗಿತ್ತು. ಅದನ್ನ ನಿವಾರಿಸಲಾಗಿದೆ ಎಂದರು.
ಇದನ್ನೂ ಓದಿ-https://suddilive.in/2023/09/29/ವಿಜೃಂಭಣೆಯ-ಗಣೇಶೋತ್ಸವ-ನಡೆದ/
